ರಾತ್ರಿ ಸಮಯದಲ್ಲಿ ರೈಲು ಚಾಲಕರು ನಿದ್ರೆ ಬರದೇ ಇರಲು ಈ ರೀತಿ ಮಾಡುತ್ತಾರೆ

59

ರೈಲು ಚಾಲಕರು ನಿದ್ದೆಯನ್ನು ನಿಯಂತ್ರಿಸಲು ಈ ವಿಧಾನಗಳನ್ನು ಅನುಸರಿಸುತ್ತಾರೆ. ಪ್ರಿಯ ಓದುಗರೇ ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಚಲಿಸುವಂತಹ ರೈಲುಗಳು ಸಾಮಾನ್ಯವಾಗಿ ಹೊರರಾಜ್ಯಕ್ಕೆ ಹೋಗುವಂತಹ ರೈಲುಗಳಾಗಿರುತ್ತವೆ ನಗರಗಳಲ್ಲಿ ಮತ್ತು ಕಾಡುಗಳಲ್ಲಿ ಹೀಗೆ ಎಲ್ಲಾದರೂ ಸರಿ ರಾತ್ರಿ ವೇಳೆ ಚಲಿಸುವ ರೈಲುಗಳ ಚಾಲಕರು ಇವರು ರಾತ್ರಿ ಪುರ ಎಚ್ಚರವಾಗಿದ್ದು ರೈಲಿನಲ್ಲಿ ಪ್ರಯಾಣಿಸುವ ಸುಮಾರು ಸಾವಿರಾರು ಪ್ರಯಾಣಿಕರನ್ನು ರಾತ್ರಿ ಇಡೀ ಎಚ್ಚರವಿದ್ದು ಪ್ರಯಾಣಿಕರನ್ನು ಅವರವರ ಊರುಗಳಿಗೆ ತಲುಪಿಸುವಂತಹ ಜವಾಬ್ದಾರಿ ಆ ರೈಲಿನ ಚಾಲಕರಿಗೆ ಇರುತ್ತದೆ ಸಾಮಾನ್ಯವಾಗಿ ರಾತ್ರಿವೇಳೆ ಪ್ರಯಾಣ ಮಾಡುವ ಪ್ರಯಾಣಿಕರು ನಿದ್ದೆ ಮಾಡುತ್ತಿರುತ್ತಾರೆ ಇನ್ನು ಚಾಲಕರಿಗೂ ಸಹ ನಿದ್ದೆ ಬರುತ್ತದೆ ಆದರೆ ನಿದ್ದೆ ಬಂದಂತಹ ಸಮಯದಲ್ಲಿ ಅವರು ಆ ನಿದ್ದೆಯನ್ನು ನಿಯಂತ್ರಿಸಲು ಏನೆಲ್ಲ ಮಾಡುತ್ತಾರೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ ಅವರು ನಿದ್ದೆಯನ್ನು ಹೋಗಿಸಲು ಕೆಲವೊಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ ಅವು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಮೊದಲನೆಯದಾಗಿ ರಾತ್ರಿವೇಳೆ ರೈಲು ಚಾಲಕರಿಗೆ ತಮ್ಮ ತಮ್ಮ ಕೆಲಸಕ್ಕೆ ಹೋಗುವ ಮುಂಚೆ ಹಗಲಿನ ಸಮಯದಲ್ಲಿ ತಮ್ಮ ದೇಹಕ್ಕೆ ಸರಿಯಾದ ವಿಶ್ರಾಂತಿಯನ್ನು ಕೊಡಬೇಕು ಎಂದು ಉಪದೇಶ ಮಾಡಲಾಗುತ್ತದೆ. ಅಂದರೆ ಅವರು ಹಗಲಿನ ಸಮಯದಲ್ಲಿ ಕಣ್ಣುತುಂಬ ನಿದ್ದೆ ಮಾಡಬೇಕು ತಮ್ಮ ದೇಹಕ್ಕೆ ಶ್ರಮ ಆಗುವಂತಹ ಯಾವುದೇ ಕೆಲಸಗಳನ್ನು ಮಾಡಬೇಡಿರಿ ಅಂತ ಉಪದೇಶ ಮಾಡಲಾಗುತ್ತದೆ ಆದರೆ ಹಗಲಿನ ಸಮಯದಲ್ಲಿ ನಿದ್ದೆ ಮಾಡಿ ರಾತ್ರಿ ಸಮಯದಲ್ಲಿ ತಮ್ಮ ಕೆಲಸಕ್ಕೆ ಹೋದಾಗ ಸುಮಾರು 2 ಗಂಟೆಯಿಂದ ಬೆಳಿಗ್ಗಿನ ಜಾವ 5 ಗಂಟೆಯವರೆಗೆ ಬೆಳಗಿನ ಹೊತ್ತು ಎಸ್ಟೇ ಕಣ್ಣ ತುಂಬಾ ನಿದ್ದೆ ಮಾಡಿದರು ಸಾಮಾನ್ಯವಾಗಿ ಈ ಸಮಯದಲ್ಲಿ ನಿದ್ದೆ ಆವರಿಸುತ್ತದೆ ಈ ಕಾರಣಕ್ಕೆ ನಿದ್ದೆಯನ್ನು ಹೋಗಲಾಡಿಸಲು ಹಲವಾರು ರೈಲು ಚಾಲಕರು ಹಲವಾರು ತರಹದ ಅಭ್ಯಾಸಗಳನ್ನು ಇಟ್ಟುಕೊಂಡು ನಿದ್ದೆಯನ್ನು ಹೋಗಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ ಅದರಲ್ಲಿ ಮೊದಲನೆಯದು ರೈಲಿನ ಚಾಲಕರು ನಿಂತು ರೈಲನ್ನು ಚಲಾಯಿಸುವುದು ಅಂದರೆ

ಸಾಮಾನ್ಯವಾಗಿ ಚಾಲಕರು ಕೂತು ರೈಲನ್ನು ಚಲಾಯಿಸುತ್ತಾರೆ ಆದರೆ ರಾತ್ರಿಯ ಸಮಯದಲ್ಲಿ ತಮ್ಮ ನಿದ್ದೆಯನ್ನು ತಡೆಯಲು ನಿಂತು ರೈಲನ್ನು ಚಲಾಯಿಸುತ್ತಾರೆ. ಯಾವಾಗ ತಮ್ಮ ನಿದ್ದೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅನಿಸುತ್ತದೆಯೋ ಆಗ ಅವರು ನಿಂತುಕೊಂಡು ರೈಲನ್ನು ಚಲಾಯಿಸುತ್ತಾರೆ. ಇನ್ನು ಎರಡನೆಯದು ತಣ್ಣೀರಿನಿಂದ ತಮ್ಮ ಮುಖವನ್ನು ತೊಳೆಯುವುದು ಸಾಮಾನ್ಯವಾಗಿ ಎಂಥವರಿಗೂ ಕೂಡ ನಿದ್ದೆ ಬರುವಾಗ ತಣ್ಣೀರಿನಿಂದ ಮುಖವನ್ನು ತೊಳೆದಾಗ ನಿದ್ದೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇನ್ನು ಮೂರನೆಯದು ತಾವು ರಾತ್ರಿಯ ವೇಳೆ ಕೆಲಸಕ್ಕೆ ಹೊರಟಾಗ ತಮ್ಮ ಜೊತೆಯಲ್ಲಿ ಒಂದು ಪ್ಲಾಸ್ಕನ್ನು ತರುತ್ತಾರೆ ಅದರಲ್ಲಿ ಚಹಾ ಇಲ್ಲವೇ ಕಾಫಿಯನ್ನು ತಂದಿರುತ್ತಾರೆ ನಿದ್ದೆ ಬರುವ ಸಂದರ್ಭದಲ್ಲಿ ಚಹಾ ಇಲ್ಲವೇ ಕಾಫಿಯನ್ನು ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ.

ಇನ್ನು ನಾಲ್ಕನೆಯದು ಒಣ ತಿಂಡಿಪಧಾರ್ಥಗಳನ್ನು ತಂದಿರುತ್ತಾರೆ ಸಾಕಷ್ಟು ಜನರಿಗೆ ನಿದ್ದೆ ಬಂದಾಗ ಒಣ ತಿಂಡಿಯನ್ನು ತಿಂದಾಗ ನಿದ್ದೆಯನ್ನು ನಿಯಂತ್ರಿಸಬಹುದು. ಇನ್ನು ಕೆಲವು ರೈಲು ಚಾಲಕರು ಅದು ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತಿದ್ದರೂ ನಿದ್ದೆ ಬಂದಾಗ ಧೂಮಪಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಹೀಗೆ ಸುಮಾರು 6 ಜನ ರೈಲು ಚಾಲಕರ ಅಭಿಪ್ರಾಯಗಳನ್ನು ಸಂಗ್ರಹಣೆ ಮಾಡಿದಾಗ ನಮಗೆ ಸಿಕ್ಕಂತಹ ಉತ್ತರ ಇವಾಗಿವೆ. ತಮ್ಮ ತಮ್ಮ ಇಷ್ಟಕ್ಕೆ ತಕ್ಕ ಹಾಗೆ ಈ ಅಭ್ಯಾಸಗಳನ್ನು ನಿದ್ದೆಯನ್ನು ನಿಯಂತ್ರಿಸಲು ರೈಲು ಚಾಲಕರು ಅನುಸರಿಸುತ್ತಾರೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ.

LEAVE A REPLY

Please enter your comment!
Please enter your name here