ವಯಸ್ಸು ನಲವತ್ತು ಆದರೂ ಯಂಗ್ ಆಗಿ ಕಾಣಲು ಸುಲಭ ಉಪಾಯ

50

ಇತ್ತೀಚೆಗೆ ವಯಸ್ಸು 35 ಆದರೆ ಸಾಕು ಮುಖದ ಮೇಲೆ ಸುಕ್ಕು. ಮೊಡವೆ. ಆಗುವ ಜೊತೆಗೆ ದಪ್ಪ ಆಗುತ್ತ ಹೋಗುತ್ತೇವೆ ಎಷ್ಟೇ ಅಲಂಕಾರ ಮಾಡಿ ಕೊಂಡರು ಕೂಡ ಯಂಗ್ ಆಗಿ ಕಾಣಲು ಸಾಧ್ಯ ಆಗುವುದಿಲ್ಲ ಅದಕ್ಕೆ ಬೇಸರ ಆಗಿ ಎಲ್ಲು ಹೋಗಲು ಕೂಡ ಹಿಂಜರಿಯುವ ಪರಿಸ್ಥಿತಿ ಬರುತ್ತದೆ. ಇದರ ಜೊತೆಗೆ ವಯಸ್ಸು ಆದಂತೆ ರೋಗಗಳು ಹುಡುಕಿಕೊಂಡು ಬರುತ್ತವೆ ಈ ರೋಗಗಳನ್ನು ಸರಿ ಮಾಡಿಕೊಳ್ಳಲು ಕುಡಿಯುವ ಮಾತ್ರೆಗಳಿಂದ ಆರೋಗ್ಯ ಮತ್ತಷ್ಟು ಕೆಡುತ್ತದೆ ಜೊತೆಗೆ ದೇಹದ ಬೊಜ್ಜು ಹೆಚ್ಚುತ್ತದೆ. 30ವರ್ಷದ ವಯಸ್ಸಿನ ನಂತರ ನಮ್ಮ ಅರೋಗ್ಯದ ಬಗ್ಗೆ ಹೆಚ್ಚು ಕಾಳಜಿ ನೀಡಬೇಕು ಆರೋಗ್ಯಕರ ಹೆಲ್ತ್ ಫುಡ್ ಅನ್ನು ಸೇವಿಸಬೇಕು. ಜೊತೆಗೆ ಹಾಗಾಗೇ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಬೇಕು. 30 ವರ್ಷದ ವಯಸ್ಸಿನ ನಂತರ ಹೆಚ್ಚಾಗಿ ಕಾಡುವುದು ಮಂಡಿ ನೋವು ಮತ್ತು ಬೆನ್ನು ನೋವು ಅದಕ್ಕೆ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡಬೇಕು.

ಜೀವನದಲ್ಲಿ ನೋವು ನಲಿವು ಸಂತೋಷ ಎಂಬುದು ಬರುವುದು ಸಾಮಾನ್ಯ ಆದರೆ ಏನೇ ಸಮಸ್ಯೆ ಬಂದರೂ ಕೂಡ ಎಲ್ಲವನ್ನೂ ಕೂಡ ನಗು ನಗುತ ತೆಗೆದುಕೊಳ್ಳಬೇಕು ಆಗ ಪಿಟ್ ಆಗಿ ಯಂಗ್ ಆಗಿ ಕಾಣಲು ಸಾಧ್ಯ. ಯೋಗ ಸೈಕ್ಲಿಂಗ್ ಸ್ವಿಮ್ಮಿಂಗ್ ಮತ್ತು ಆಧುನಿಕವಾದ ದೈಹಿಕ ವ್ಯಾಯಾಮಗಳನ್ನು ಪ್ರತಿದಿನ ಮಾಡುವುದರಿಂದ ಕೂಡ ಯಂಗ್ ಆಗಿ ಕಾಣಲು ಸಾಧ್ಯ. ಈ ವಯಸ್ಸಿನಲ್ಲಿ ರಕ್ತದ ಒತ್ತಡ ಮತ್ತು ಕೊಬ್ಬಿನ ಸಮಸ್ಯೆ ಹೆಚ್ಚು ಕಾಣಿಸುತ್ತದೆ ಹಾಗೂ ಸ್ಟ್ರೋಕ್ ಮತ್ತು ಹೃದಯಾಘಾತ ಗಳು ಹೆಚ್ಚು ಆಗುತ್ತವೆ. ಆಹಾರದಲ್ಲಿ ನಿಮ್ಮ ಅರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟು.ಆರೋಗ್ಯವನ್ನು ನೋಡಿಕೊಂಡರೆ ಯಂಗ್ ಆಗಿ ಕಾಣುತ್ತಿರ. 40 ವರ್ಷ ವಯಸ್ಸಿನ ನಂತರ ಮೂಳೆಗಳಲ್ಲಿ ರಂದ್ರ ಕಾಣಿಸಿಕೊಳ್ಳುತ್ತದೆ. ಮೂಳೆಗಳ ತೂಕ ಕಡಿಮೆಯಾಗುತ್ತಾದೆ. ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮತ್ತು

ವಿಟಮಿನ್ ಡಿ ಕೊರತೆ ಇರುವುದು ಅದಕ್ಕೆ ಪ್ರತಿ ದಿನ ಗಂಟೆ ಆದರೂ ಸೂರ್ಯನ ಶಾಖ ನಿಮ್ಮ ಮೇಲೆ ಬೀಳುವ ಹಾಗೆ ನೋಡಿಕೊಳ್ಳಬೇಕು. ಹಾಗೆಯೇ ಈ ವಯಸ್ಸಿನಲ್ಲಿ ಹೆಚ್ಚು ಕಾಣುವುದು ಬೊಜ್ಜು ಮತ್ತು ಮಧುಮೇಹಗಳ ಸಮಸ್ಯೆ ಹಾಗಾಗಿ ಸಮತೋಲನದ ಆಹಾರವನ್ನು ತೆಗೆದುಕೊಳ್ಳಬೇಕು. ಸದಾ ಮುಖದಲ್ಲಿ ನಗು ಇರಲಿ ಹಾಗೂ ಪ್ರತಿಯೊಂದು ಸಮಸ್ಯೆಗೂ ಯೋಚಿಸುವುದನ್ನು ಬಿಡಬೇಕು ಈಗೆ ಇದ್ದಲ್ಲಿ ವಯಸ್ಸು ಆಗಿದೆ ಎಂಬುದೇ ಕಾಣಿಸುವುದಿಲ್ಲ. ಅದಕ್ಕಾಗಿ ವಯಸ್ಸು ಅದ ತಕ್ಷಣ ನನಗೆ ವಯಸ್ಸು ಆಯಿತು ನನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯ ಇಲ್ಲ ಎಂದು ಕೈ ಕಟ್ಟಿ ಕುಳಿತು ಕೊಳ್ಳಬೇಡಿ ಎಲ್ಲವನ್ನೂ ಎಂಜಾಯ್ ಮಾಡಿ ಸಂತೋಷವಾಗಿ ಕಾಲ ಕಳೆಯಿರಿ ಹಾಗಾ ವಯಸ್ಸು ಆದರೂ ಕೂಡ ಫಿಟ್ ಆಗಿ ಯಂಗ್ ಆಗಿ ಆರೋಗ್ಯವಾಗಿ ಇರುತ್ತಿರ.

LEAVE A REPLY

Please enter your comment!
Please enter your name here