ವಿಟಮಿನ್ ಬಿ2 ಕಡಿಮೆ ಆದ್ರೆ ನಿಮ್ಮ ದೇಹದಲ್ಲಿ ಈ ನಾಲ್ಕು ಸಮಸ್ಯೆಗಳು ನಿಮ್ಮನು ಕಾಡುತ್ತದೆ

87

ವಿಟಮಿನ್ ಬಿ2 ಅಥವಾ ರೈಬೋಫ್ಲೋವಿನ್ ಕೊರತೆಯಿಂದಾಗುವ ಗುಣಲಕ್ಷಣಗಳು. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ವಿಟಮಿನ್ ಬಿ2 ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೆ ಈ ವಿಟಮಿನ್ ಬಿ2 ವಾಟರ್ ಸೋಲಿಬಲ ವಿಟಮಿನ್ ಆಗಿದೆ ಅಂದರೆ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ ಹಾಗಾಗಿ ದೇಹದಲ್ಲಿ ಇದು ಶೇಖರಣೆಯಾಗಿ ಉಳಿಯುವುದಿಲ್ಲ. ಪ್ರತಿನಿತ್ಯವೂ ನಮ್ಮ ಆಹಾರದಲ್ಲಿ ವಿಟಮಿನ್ ಬಿ2 ಅವಶ್ಯಕತೆ ಇದೆ. ಈ ವಿಟಮಿನ್ ಬಿ2 ಅನ್ನು ರೈಬೋಫ್ಲೋವಿನ್ ಅಂತ ಕರೆಯುತ್ತಾರೆ. ನಮ್ಮ ದೇಹದಲ್ಲಿ ಈ ವಿಟಮಿನ್ ಬಿ2 ಕೆಲಸ ಏನೆಂದರೆ ಕೆಂಪು ರಕ್ತ ಕಣಗಳ ರಚನೆಯಲ್ಲಿ ವಿಟಮಿನ್ ಬಿ2 ಪಾತ್ರ ಪ್ರಮುಖ್ಯವಾಗಿದೆ. ಹಾಗೆಯೇ ಇದು ಆಂಟಿ ಎಂಜಿನ್ ರೀತಿಯಲ್ಲಿ ಕೆಲಸವನ್ನು ಮಾಡುತ್ತದೆ. ಜೊತೆಗೆ ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿಡುತ್ತದೆ. ಮತ್ತು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕಣ್ಣಲ್ಲಿರುವ ರೆಟಿನಾ ಕಾರ್ನಿಯಾ ಇವುಗಳ ಕೆಲಸವನ್ನು ಉತ್ತೇಜಿಸುವುದಕ್ಕೆ ವಿಟಮಿನ್ ಬಿ2 ಅವಶ್ಯಕತೆ ಇದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಗಟ್ಟಿಗೊಳಿಸಲು ಕೂಡ ಈ ವಿಟಮಿನ್ ಅಗತ್ಯವಿದೆ. ಹಾಗೆಯೇ ಮೆದುಳಿನ ಆರೋಗ್ಯ, ಮೈಗ್ರೇನ್ ಸಮಸ್ಯೆಗೂ ಮತ್ತು ಹೃದಯ ಆರೋಗ್ಯಕ್ಕೂ ವಿಟಮಿನ್ ಬಿ2 ಮುಖ್ಯವಾಗಿದೆ. ಆದಷ್ಟು ವಿಟಮಿನ್ ಬಿ2 ಇರುವ ಆಹಾರವನ್ನು ಸೇವಿಸುತ್ತಾ ಬನ್ನಿ ಇದರಿಂದ ನೈಸರ್ಗಿಕವಾಗಿ ಮೈಗ್ರೇನ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಈ ವಿಟಮಿನ್ ಬಿ2 ಉಗುರಿನ ಆರೋಗ್ಯಕ್ಕೆ ಮತ್ತು ಕೂದಲಿನ ಆರೋಗ್ಯಕ್ಕೆ ಹಾಗೆಯೇ ಚರ್ಮದ ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿದೆ. ಅದರಲ್ಲೂ ಚರ್ಮದಲ್ಲಿ ಕೋಲಾಜಿನ್ ಉತ್ಪತ್ತಿ ಮಾಡಲು ವಿಟಮಿನ್ ಬಿ2 ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಬಿ2 ಆಹಾರ ಸೇವನೆಯಿಂದ ನಮ್ಮ ದೇಹವು ಶಕ್ತಿಯುತವಾಗಿ ಇರುತ್ತದೆ.

ಇದಿಷ್ಟು ನಮ್ಮ ದೇಹದಲ್ಲಿ ವಿಟಮಿನ್ ಬಿ2 ಹೇಗೆ ಕೆಲಸವನ್ನು ಮಾಡುತ್ತದೆ ಅಂತ ತಿಳಿದುಕೊಂಡೆವು. ಇನ್ನೂ ಯಾವಾಗ ವಿಟಮಿನ್ ಬಿ2 ಕೊರತೆ ಕಂಡು ಬರುತ್ತದೆ ಆ ಸಮಯದಲ್ಲಿ ದೇಹದಲ್ಲಿ ಕಾಣುವ ಲಕ್ಷಣಗಳನ್ನು ನೋಡೋಣ. ಅವುಗಳು ಯಾವುದೆಂದರೆ ಅನೀಮಿಯಾ, ನರಕೋಶಗಳ ಸೆಳೆತ ಉಂಟಾಗುವುದು, ತುಟಿ ಒಣಗುವುದು ಟೆನ್ಷನ್ ಆಗುವುದು ಆಯಾಸ ಕಾಣಿಸಿಕೊಳ್ಳುವುದು. ಹಾಗೆಯೇ ಈ ವಿಟಮಿನ್ ಬಿ2 ಕೊರತೆ ಎದ್ದು ಕಾಣುವುದು ನಮ್ಮ ಕಣ್ಣಿನ ಆರೋಗ್ಯದಲ್ಲಿ. ಕಣ್ಣಿನ ಪೊರೆಯನ್ನು ರೆಟಿನಾದಲ್ಲಿ ಕಣ್ಣಿನ ಕಾನ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಣು ಊದಿಕೊಳ್ಳುವುದು ಕಣ್ಣಿನಲ್ಲಿ ನೀರು ಬರುವುದು ಈ ರೀತಿ ಕಣ್ಣಿಗೆ ಸಂಭಂದಿಸಿದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ನಾಲಿಗೆಯಲ್ಲಿ ಈ ವಿಟಮಿನ್ ಬಿ2 ಕೊರತೆಯಿಂದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಾಲಿಗೆಯ ಮೇಲೆ ಉರಿ ಮತ್ತು ಹುಣ್ಣುಗಳು ಆಗುವುದು ಹಾಗೂ ಕೆಂಪು ರಾಶೇಶ್ ಕಾಣುವುದು ಈ ರೀತಿ ನಾಲಿಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಹಸಿವು ಕಡಿಮೆಯಾಗುವುದು. ಇವೆಲ್ಲವೂ ವಿಟಮಿನ್ ಬಿ2 ಕೊರತೆ ಇಂದ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಮ್ಮ ಡಯೆಟ್ ಅಲ್ಲಿ ವಿಟಮಿನ್ ಬಿ2 ಕೊರತೆ ಆಗದಂತೆ ನೋಡಿಕೊಳ್ಳಬೇಕು. ಹಾಗಾದ್ರೆ ವಿಟಮಿನ್ ಬಿ2 ಇರುವ ಆಹಾರ ಪದಾರ್ಥಗಳು ಯಾವುದೆಂದು ನೋಡೋಣ ಬನ್ನಿ. ಡೈರಿ ಉತ್ಪನ್ನಗಳು ಅಂದ್ರೆ ಹಾಲು ಮೊಸರು ತುಪ್ಪ ಚೀಸ್ ಬೆಣ್ಣೆ ಇದರಲ್ಲಿ ವಿಟಮಿನ್ ಬಿ2 ಹೆಚ್ಚಾಗಿ ಇರುತ್ತದೆ. ಇನ್ನೂ ಮಾಂಸಾಹಾರಿಗಳಲ್ಲಿ ಲಿವರ್ ಮೊಟ್ಟೆ ಮಶ್ರೂಮ್ ಇವುಗಳ ಸೇವನೆ

ಮಾಡುವುದರಿಂದ ವಿಟಮಿನ್ ಬಿ2 ಪಡೆದುಕೊಳ್ಳಬಹುದು. ಇನ್ನೂ ತರಕಾರಿಯಲ್ಲಿ ಹೇಳುವುದಾದರೆ ಸಿಹಿ ಗೆಣಸು, ಪಾಲಕ್ ಸೊಪ್ಪು ಎಲ್ಲ ರೀತಿಯ ಹಸಿರು ತರಕಾರಿಗಳು ಇವುಗಳಲ್ಲಿ ವಿಟಮಿನ್ ಬಿ2 ಹೆಚ್ಚಾಗಿ ಇರುತ್ತದೆ. ಹಾಗೆಯೇ ಬಾದಾಮಿ ಸೂರ್ಯಕಾಂತಿ ಬೀಜಗಳು, ಶೇಂಗಾ ಬೀಜ ಮತ್ತು ದ್ವಿದಳ ಧಾನ್ಯಗಳು ಇವುಗಳಿಂದಲೂ ವಿಟಮಿನ್ ಬಿ2 ಪಡೆದುಕೊಳ್ಳಬಹುದು. ಇನ್ನೂ ಹಣ್ಣುಗಳಲ್ಲಿ ಹೇಳುವುದಾದರೆ ವಿಟಮಿನ್ ಬಿ2 ತುಂಬಾನೇ ಇರುವುದು ದ್ರಾಕ್ಷಿಯಲ್ಲಿ. ಒಂದು ಕಪ್ ದ್ರಾಕ್ಷಿ ಮತ್ತು ಹತ್ತು ಬಾದಾಮಿಯನ್ನು ಸೇವನೆ ಮಾಡುವುದರಿಂದ ಆ ದಿನಕ್ಕೆ ಬೇಕಾದ ವಿಟಮಿನ್ ಬಿ2 ದೊರೆಯುತ್ತದೆ. ಮತ್ತು ಪುರುಷರಿಗೆ 1 ರಿಂದ 3 ಮಿಲಿಗ್ರಾಮ್ ಅಷ್ಟು ಮತ್ತು ಮಹಿಳೆಯರಲ್ಲಿ 1.1 ಮೀಲಿಗ್ರಾಮ್ ಅಷ್ಟು ವಿಟಮಿನ್ ಬಿ2 ಅವಶ್ಯಕತೆ ಇರುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here