ವಿಟಮಿನ್ ಬಿ3 ಕೊರತೆಯಾದರೆ ಫೆಲಾಗ್ರಾ ಎಂಬ ರೋಗ ಬರುತ್ತದೆ

92

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ವಿಟಮಿನ್ ಬಿ 3 ಬಗ್ಗೆ ತಿಳಿದುಕೊಳ್ಳೋಣ. ವಿಟಮಿನ್ ಬಿ3 ಅನ್ನು ವೈಜ್ಞಾನಿಕವಾಗಿ ನಿಯಾಸಿನ್ ಎಂದು ಕರೆಯುತ್ತಾರೆ. ಇದು ನೀರಿನಾಂಶ ಇರುವ ವಿಟಮಿನ್ ಆಗಿದೆ. ಈ ವಾಟರ್ ಸೋಲಿಬಲ್ ವಿಟಮಿನ್ಸ್ ಗಳು ದೇಹದಲ್ಲಿ ಶೇಖರಣೆ ಆಗುವುದಿಲ್ಲ. ಬಿ3 ವಿಟಮಿನ್ಸ್ ಜೊತೆಗೆ ವಿಟಮಿನ್ ಬಿ ಮತ್ತು ಸಿ ತುಂಬಾ ಅವಶ್ಯಕವಾಗಿದೆ. ಈ ಬಿ ವಿಟಮಿನ್ಸ್ ಗಳಲ್ಲಿ ನಿಯಾಸಿನ್ ಒಂದಾಗಿದೆ. ಬಿ ವಿಟಮಿನ್ ಆಗಿರುವ ನಿಯಾಸಿನ್ ಬಗ್ಗೆ ಹೇಳುವುದಾದರೆ ಮೈಕ್ರೋ ನ್ಯುಟ್ರಿಶನ್ ಗಳಾಗಿರುವ ಪ್ರೊಟೀನ್,ಫ್ಯಾಟ್ ಮತ್ತು ಕಾರ್ಬೋ ಹೈಡ್ರೇಟ್ ಗಳನ್ನು ಎನರ್ಜಿ ರೂಪದಲ್ಲಿ ಬದಲಾವಣೆ ಮಾಡುವುದಕ್ಕೆ ನಿಯಾಸಿನ್ ಅವಶ್ಯಕತೆ ಇರುತ್ತದೆ. ನಮ್ಮ ದೇಹಕ್ಕೆ ಎನರ್ಜಿ ಒದಗಿಸುವಲ್ಲಿ ಈ ಕೆಲಸವನ್ನು ನಿಯಾಸಿನ್ ಮುಖ್ಯವಾಗಿ ಮಾಡುತ್ತದೆ. ಈ ಮೇಟೋಪೋಲಿಸಂ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ನಿಯಾಸಿನ್ ಅಗತ್ಯ ಇರುತ್ತದೆ. ಹಾಗೆಯೇ ದೇಹದ ಪ್ರತಿಯೊಂದು ಜೀವಕೋಶದಲ್ಲಿ ನಡೆಯುವ ಸಂವಹನ ಕ್ರಿಯೆಯಲ್ಲಿ ನಿಯಾಸಿನ್ ಕೆಲಸವನ್ನು ಮಾಡುತ್ತದೆ. ಇದರಲ್ಲಿ ಮೆದುಳು ನರಕೋಶದ ಮುಖಾಂತರ ದೇಹದ ಪ್ರತಿಯೊಂದು ಜೀವಕೋಶದಲ್ಲಿ ಸಂವಹನ ಕ್ರಿಯೆ ನಡೆಸುತ್ತಿದೆ. ಇದನ್ನೇ ನ್ಯೂರಿಟ್ರಾನ್ಸ್ ಮಿಷನ್ ಪ್ರೋಸೆಸ್ ಎಂದು ಕರೆಯುತ್ತಾರೆ. ಇದರ ಕ್ರಿಯೆಯಿಂದ ನಮ್ಮ ಮೆದುಳು ಹೇಳಿದ ಹಾಗೆ ನಮ್ಮ ದೇಹದಲ್ಲಿ ಪ್ರತಿಯೊಂದು ಚಲನ ವಲನಗಳು ನಡೆಯುತ್ತದೆ. ನರಕೋಶಗಳ ಸಂವಹನ ಕ್ರಿಯೆ ಆರೋಗ್ಯವಾಗಿ ನಡೆಯಬೇಕೆಂದರೆ ಬಿ ವಿಟಮಿನ್ಸ್ ಗಳ ಅವಶ್ಯಕತೆ ಇರುತ್ತದೆ. ಅದರಲ್ಲಿ ನಿಯಾಸಿನ್

ಪಾತ್ರ ಒಂದು. ಅಷ್ಟೇ ಅಲ್ಲದೇ ನಿಯಾಸಿನ್ ಚರ್ಮದ ಆರೈಕೆಗೆ ತುಂಬಾ ಒಳ್ಳೆಯದು. ಒಂದು ವೇಳೆ ನಿಯಾಸಿನ್ ಕೊರತೆ ಕಂಡು ಬಂದರೆ ಮೊದಲು ಎದ್ದು ಕಾಣುವ ಲಕ್ಷಣಗಳು ನಿಮ್ಮ ಚರ್ಮದ ಮೇಲೆ. ಬನ್ನಿ ನೋಡೋಣ. ನಿಯಾಸಿನ್ ನಿಂದ ಆಗುವ ಕೊರತೆಗಳನ್ನು ನೋಡೋಣ. ಅದರಲ್ಲಿ ಹೇಳುವುದಾದರೆ ಮುಖ್ಯವಾಗಿ ಫೆಲಾಗ್ರಾ ಅನ್ನೋದು ಒಂದು ಚರ್ಮದ ಸಮಸ್ಯೆ. ನಿಯಾಸಿನ್ ಅಥವಾ ವಿಟಮಿನ್ ಬಿ3 ಕೊರತೆಯಿಂದ ಕಾಣಿಸಿಕೊಳ್ಳುತ್ತದೆ. ಫೆಲಾಗ್ರಾ ಒಂದು ಚರ್ಮದ ಸಮಸ್ಯೆಯಾಗಿದ್ದು ಇದು ಮುಖದ ಮೇಲೆ ಕಾಣಿಸಿಕೊಂಡಾಗ ಚರ್ಮದ ಮೇಲೆ ಕೆಂಪು ಕಲೆಗಳು ರಾಷೆಸ್ ಮತ್ತು ದಿನ ಹೋದಂತೆ ಆ ಜಾಗದಲ್ಲಿ ಚರ್ಮವು ಗಡುಸಾಗುತ್ತದೆ. ಕಡು ಕಂದು ಬಣ್ಣವೂ ಬದಲಾಗುತ್ತದೆ. ಈ ಫೆಲಾಗ್ರಾ ಅನ್ನುವ ಇವೆಲ್ಲವೂ ಲಕ್ಷಣಗಳು. ಇನ್ನೂ ತಲೆನೋವು ಆಯಾಸ ಮಲಬದ್ಧತೆ ವಾಂತಿ ಭೇದಿ ಕಾಣಿಸಿಕೊಳ್ಳುತ್ತದೆ. ನಿಯಾಸಿನ್ ವಿಟಮಿನ್ ಬಿ3 ಕೊರತೆಯಿಂದ ನಾಲಿಗೆಯಲ್ಲಿ ಕೆಂಪು ಬಣ್ಣವೂ ಕಾಣಿಸಿಕೊಳ್ಳುತ್ತದೆ. ಮುಂದೆ ಈ ಎಲ್ಲ ಲಕ್ಷಣಗಳೂ ಮಾನಸಿಕ ಕಾಯಿಲೆಗಳಿಗೂ ದಾರಿ ಮಾಡಿ ಕೊಡುತ್ತದೆ. ಅದರಲ್ಲಿ ಮರುವಿನ ರೋಗಕ್ಕೂ ಕಾರಣವಾಗುತ್ತದೆ. ಒಂದು ವೇಳೆ ಈ ಫೆಲಾಗ್ರಾ ಸಮಸ್ಯೆಯನ್ನು ಮೊದಲಿನ ಹಂತದಲ್ಲಿ ಸರಿಯಾಗಿ ಚಿಕಿತ್ಸೆ ನೀಡದೆ ಇದ್ದರೆ ಮುಂದೆ ಆ ವ್ಯಕ್ತಿಯಲ್ಲಿ ಬೇರೆ ರೀತಿಯಲ್ಲಿ ದಾರಿ ಮಾಡಿಕೊಡುತ್ತದೆ. ಅದರಲ್ಲೂ ಆ ವ್ಯಕ್ತಿಯ ಜ್ಞಾಪಕ ಶಕ್ತಿಯಲ್ಲಿ ಕೊರತೆ ಕಾಣಿಸಿಕೊಳ್ಳುತ್ತದೆ. ನಡುವಳಿಕೆಯಲ್ಲಿ ಬದಲಾವಣೆ, ಮತ್ತು ಮರಣದ ಬಗ್ಗೆ ಯೋಚನೆ ಮಾಡುವ ಭಾವನೆಗಳು ಬರುವುದು ಮುಂದೆ ಮಾನಸಿಕ

ಕಾಯಿಲೆಯಾಗಿ ಬದಲಾವಣೆಯಾಗುತ್ತದೆ. ನಿಯಾಸಿನ್ ಕೊರತೆ ಕಾಣಿಸಿಕೊಳ್ಳುವುದು ಮಧ್ಯವ್ಯಸನಿಗಳಲ್ಲಿ ಅಥವಾ ಹೆಚ್ಚಾಗಿ ಯಾರು ಆಲ್ಕೋಹಾಲ್ ಸೇವನೆ ಮಾಡುತ್ತಾರೋ ಅವರಲ್ಲಿ ಮತ್ತು ಹೆಚ್ ಇ ವಿ ಕಾಯಿಲೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ಹೃದಯ ಸಂಭಂದಿಸಿದ ಕಾಯಿಲೆ ಇರುವವರಿಗೂ ಕೂಡ ನಿಯಾಸಿನ್ ಕೊರತೆ ಕಾಣಿಸಿಕೊಳ್ಳುತ್ತದೆ. ತುಂಬಾ ಅವೈಜ್ಞಾನಿಕವಾಗಿ ಡಯೆಟ್ ಅನ್ನು ಮಾಡುತ್ತಾರೋ ಅವರಲ್ಲಿ ಅನೋರೆಕ್ಸಿಯಾ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ನಿಯಾಸಿನ್ ಕೊರತೆಯಿಂದ ಬರುತ್ತದೆ. ಆದ್ದರಿಂದ ನಿಯಾಸಿನ್ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಬಿ ವಿಟಮಿನ್ಸ್ ಅದರಲ್ಲೂ ನಿಯಾಸಿನ್ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಹಾಗಾದರೆ ನಿಯಾಸಿನ್ ಆಹಾರಗಳು ಯಾವುದೆಂದು ಹೇಳುವುದಾದರೆ ಕೆಂಪು ಮಾಂಸ ಮೀನು ಮತ್ತು ಸಮುದ್ರ ಆಹಾರಗಳಲ್ಲಿ ನಿಯಾಸಿನ್ ಹೆಚ್ಚಾಗಿ ಇರುತ್ತದೆ. ಇನ್ನೂ ನಟ್ಸ ದ್ರವ ಬೀಜಗಳು ದ್ವಿದಳ ಧಾನ್ಯಗಳು ಹಾಗೆ ಪೂರ್ತಿ ಕಾಳುಗಳು ತಿನ್ನಬೇಕು. ಶೇಂಗಾ ಬೀಜದಲ್ಲಿ ನಿಯಾಸಿನ್ ಹೆಚ್ಚಾಗಿ ಇರುತ್ತದೆ. ಇದ್ರಿಂದ ನೀವು ನಿಯಾಸಿನ್ ವಿಟಮಿನ್ ಪಡೆದುಕೊಳ್ಳಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here