ವೀಳ್ಯದೆಲೆಯಿಂದ ಹತ್ತಾರು ಲಾಭ ಪಡೆಯಿರಿ

88

ವಿಳ್ಳೆದೆಲೆ ಬರಿ ಬಾಯಿರುಚಿ ಕೊಡುವುದಲ್ಲದೆ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ವಿಳ್ಳೆದೆಲೆಯನ್ನು ಹಳ್ಳಿಗಳ ಕಡೆ ಅಡಿಕೆ ಎಲೆ ಅಂತ ಊಟ ಆದ ತಕ್ಷಣ ವಿಳ್ಳೆದೆಲೆಗೆ ಅಡಿಕೆ ಮತ್ತು ಸುಣ್ಣ ಸೇರಿಸಿ ತಿನ್ನುತ್ತಾರೆ ಇದರಲ್ಲಿರುವ ಸುಣ್ಣದಿಂದ ಕಬ್ಬಿಣಾಂಶ ನಮ್ಮ ದೇಹವನ್ನು ಸೇರುತ್ತದೆ ಹೀಗೆ ಈ ವಿಳ್ಳೆದೆಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು ಅನೇಕ ಕಡೆ ಪಾನ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡುತ್ತಾರೆ ಈ ವೀಳ್ಯದೆಲೆಯನ್ನು ಪಾನ ರೂಪದಲ್ಲಿ ಸೇವನೆ ಮಾಡುವುದರ ಜೊತೆಗೆ ಶುಭ ಕಾರ್ಯಗಳಲ್ಲಿ ದೇವರ ಮುಂದೆ ಕೂಡ ಇಡುತ್ತಾರೆ ಆದರೆ ಈ ವೀಳ್ಯದೆಲೆ ಅಷ್ಟಕ್ಕೆ ಸೀಮಿತವಲ್ಲ

ಚರ್ಮದ ಕಾಂತಿಯನ್ನು ಈ ವೀಳ್ಯದೆಲೆ ಹೆಚ್ಚಿಸುತ್ತದೆ ವೀಳ್ಯದ ಎಳೆಯಲ್ಲಿರುವ ಆಂಟಿಆಕ್ಸಿಡೆಂಟಗಳು ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತವೆ ಹಾಗೇನೇ ಮುಖದ ಚರ್ಮ ಕಾಂತಿ ಪಡೆಯಲು ನೆರವಾಗುತ್ತವೆ ಹಾಗಾದರೆ ಹೇಗೆ ಈ ವಿಳ್ಳೆದೆಲೆಯಿಂದ ಚರ್ಮದ ಕಾಂತಿಯನ್ನು ಪಡೆಯುವುದು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. 5 ವಿಳ್ಳೆದೆಲೆಯನ್ನು ತೆಗೆದುಕೊಳ್ಳಿ ಅದನ್ನು ಸ್ವಚ್ಚವಾಗಿ ತೊಳೆಯಿರಿ ನಂತರ ವಿಳ್ಳೆದೆಲೆಯನ್ನು ಸಣ್ಣಗೆ ರುಬ್ಬಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರಸಿ ಫೇಸ್ ಪ್ಯಾಕ್ ತಯಾರಿ ಮಾಡಿಕೊಳ್ಳಿ ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ನಂತರ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ನಿರಂತರವಾಗಿ ಎರಡು ತಿಂಗಳು ಹೀಗೆ ಮಾಡಿನೋಡಿ ಚರ್ಮ ಮೃದುವಾಗಿ ಚರ್ಮ ಕಾಂತಿ ಪಡೆಯುತ್ತದೆ.

ಹಾಗೇನೇ ಇನ್ನೊಂದು ಈ ವಿಳ್ಳೆದೆಲೆಯ ಉಪಯೋಗ ಏನೆಂದರೆ ಸ್ವಲ್ಪ ವಿಳ್ಳೆದೇಲೆಯನ್ನು ಒಂದು ಲೀಟರ್ ನೀರಿಗೆ ಹಾಕಿ ಕುದಿಸಿ ಈ ನೀರಿನಲ್ಲಿ ಮುಖ ತೊಳೆದುಕೊಳ್ಳಿ ಹೀಗೆ ಇದನ್ನು ವಾರಕ್ಕೆ ಒಮ್ಮೆ ವಿಳ್ಳೆದೆಲೆ ನೀರಿನಲ್ಲಿ ಮುಖ ತೊಳೆದುಕೊಳ್ಳಿ ಇದರಿಂದ ನಿಮ್ಮ ಮುಖ ಬೆಳ್ಳಗೆ ಆಗುತ್ತದೆ ಆದರೆ ಹೆಚ್ಚು ಬಾರಿ ಈ ವಿಳ್ಳೆದೆಲೆ ನೀರಿನಲ್ಲಿ ಮುಖ ತೊಳೆದರೆ ಚರ್ಮ ಒಣಗುವ ಅಪಾಯ ಇರುತ್ತದೆ. ಇನ್ನು ಮೂರನೆಯ ಒಂದು ವಿಳ್ಳೆದೆಲೆಯ ಉಪಯೋಗ ಎಂದರೆ ಇದು ಸುಟ್ಟ ಗಾಯಕ್ಕೂ ಹೇಳಿ ಮಾಡಿಸಿದ ಔಷಧಿ ಈ ವಿಳ್ಳೆದೆಲೆ. ವಿಳ್ಳೆದೆಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಅದನ್ನು ಸಣ್ಣಗೆ ರುಬ್ಬಿ ಸಾವಯವ ಜೇನುತುಪ್ಪ ಬೆರಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಿ ಇದರಿಂದ ಸುಟ್ಟ ಉರಿ ಕಡಿಮೆಯಾಗಿ ಹಿತವೆನಿಸುತ್ತದೆ.

ನಾಲ್ಕನೆಯ ಉಪಯೋಗ ಎಂದರೆ ಮೊಡವೆಯನ್ನು ಕೂಡ ಈ ವಿಳ್ಳೆದೆಲೆ ಕಡಿಮೆ ಮಾಡುತ್ತದೆ ವಿಳ್ಳೆದೆಲೆಯನ್ನು ನೀರಿಗೆ ಹಾಕಿ ಕುದಿಸಿ ನೀರಿನ ಬಣ್ಣ ಬದಲಾದ ತಕ್ಷಣ ಅದನ್ನು ಗ್ಯಾಸ್ ನಿಂದ ಕೆಳಗೆ ಇಳಿಸಿ ನಂತರ ನೀರು ತಣ್ಣಗಾದ ಮೇಲೆ ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಹಾಗಾದರೆ ಸ್ನೇಹಿತರೆ ಎಲ್ಲರ ಮನೆಯಲ್ಲೂ ವಿಳ್ಳೆದೆಲೆ ಇದ್ದೆ ಇರುತ್ತದೆ ಕೂಡಲೇ ಹೀಗೆ ಮಾಡಿ ನೀವು ಸಹ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here