ವೀಸಾ ವೆಂಕಟೇಶ್ವರ ಪ್ರಾರ್ಥನೆ ಮಾಡಿರಿ ನಿಮ್ಮ ಕಷ್ಟಗಳು ದೂರ ಆಗಲಿದೆ

41

ವೀಸಾ ಬೇಗ ಸಿಗಬೇಕು ಎನ್ನುವವರು ಈ ದೇಗುಲಕ್ಕೆ ಒಮ್ಮೆ ಭೇಟಿ ನೀಡಬೇಕು. ವಿದೇಶಕ್ಕೆ ಹೋಗುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ ಕೆಲವರು ಕೆಲಸದ ಮೇಲೆ ವಿದೇಶಕ್ಕೆ ಹೋದರೆ ಕೆಲವರು ವಿದೇಶವನ್ನು ಸುತ್ತಾಡಲು ಹೋಗುತ್ತಾರೆ ಆದರೆ ವಿದೇಶಕ್ಕೆ ಹೋಗಬೇಕು ಎಂದರೆ ತುಂಬಾ ಹಣ ಖರ್ಚು ಆಗುತ್ತದೆ ಆದರೆ ಕೇವಲ ಹಣ ಇದ್ದರೆ ಮಾತ್ರ ವಿದೇಶಕ್ಕೆ ಹೋಗಲು ಸಾಧ್ಯವೇ ವಿದೇಶಕ್ಕೆ ಹೋಗಲು ಮುಖ್ಯವಾಗಿ ವೀಸಾ ಬೇಕು ಅಲ್ಲವೇ ಆದರೆ ವಿಸಾವನ್ನು ಮಾಡಿಸುವುದು ಸುಲಭವೇ ವೀಸಾ ಮಾಡಿಸುವ ಒತ್ತಿಗೆ ಯಾವ ವಿದೇಶಕ್ಕೂ ಹೋಗುವುದು ಬೇಡಪ್ಪಾ ಎನ್ನುವಷ್ಟು ಬೇಜಾರು ಆಗುತ್ತದೆ ಏಕೆಂದರೆ ವೀಸಾವನ್ನು ಪಡೆಯಲು ಅರ್ಜಿ ಹಾಕಿ ಅವರು ಅದನ್ನೆಲ್ಲ ಸರಿ ಇದೆಯೇ ಎಂದು ಚೆಕ್ ಮಾಡಿ ನಮ್ಮನ್ನು ಕರೆಸಿ ವೀಸಾ ಏಕೆ ಬೇಕು ಯಾಕೆ ವಿದೇಶಕ್ಕೆ ಹೋಗುತ್ತಿರುವುದು ಎಷ್ಟು ದಿನ ಹೋಗುತ್ತೀರಾ ಎಂದೆಲ್ಲ ಪ್ರಶ್ನೆ ಕೇಳಿ ಮತ್ತೆ ಅ ಡಾಕ್ಯುಮೆಂಟ್ ಸರಿಯಿಲ್ಲ ಇದು ಸರಿಯಿಲ್ಲ ಅಂತ ಹೇಳಿ ರಿಜೆಕ್ಟ್ ಮಾಡುತ್ತಾರೆ ಅಲ್ಲವೇ. ಆದರೆ ನೀವು ವಿದೇಶಕ್ಕೆ ಹೋಗಬೇಕು ನನಗೆ ವೀಸಾ ಸಿಗಲೇಬೇಕು ಎಂದು ನಿರ್ಧಾರ ಮಾಡಿರುವವರು ವೀಸಾ ಸಿಗುತ್ತೋ ಇಲ್ಲವೋ ಎಂದು ಭಯ ಪಡುತ್ತ ಮನೆಯಲ್ಲಿ ಕುಳಿತುಕೊಳ್ಳುವ ಬದಲು ವೀಸಾ ಬಾಲಾಜಿ ದೇವರ ಬಳಿ ಭಕ್ತಿಯಿಂದ ಬೇಡಿದರೆ ಸಾಕು ನಿಮ್ಮ ವೀಸಾ ಯಾವುದೇ ಅಡ್ಡಿಗಳಿಲ್ಲದೆ ನಿಮ್ಮ ಕೈ ಸೇರುತ್ತದೆ.

ವೀಸಾ ಬಾಲಾಜಿ ದೇವರ ಇದು ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ ಬನ್ನಿ ತಿಳಿಯಿರಿ ಬಾಲಾಜಿ ಎಂದರೆ ವೆಂಕಟೇಶ್ವರ. ಶ್ರೀನಿವಾಸ ಎಂದೆಲ್ಲ ನಾನಾ ಹೆಸರುಗಳಿಂದ ಕರೆಯುತ್ತಾರೆ ಆದರೆ ಈ ಸ್ಥಳದಲ್ಲಿ ಬಾಲಾಜಿ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದೇಗುಲವು ಇರುವುದು ತೆಲಂಗಾಣದ ರಾಜಧಾನಿ ಹೈದರಾಬಾದ್ ಸಮೀಪದ ಚಿಲಕೂರು ಎನ್ನುವ ಗ್ರಾಮದಲ್ಲಿ. ಈ ದೇಗುಲದಲ್ಲಿ ತುಂಬಾ ವಿಶೇಷವಾದ ಒಂದು ನಂಬಿಕೆ ಇದೆ ಅದು ಏನು ಗೊತ್ತೆ. ಸಾಮಾನ್ಯವಾಗಿ ಹಿಂದೂಗಳು ಮುಕ್ಕೋಟಿ ದೇವರನ್ನು ಪೂಜಿಸುತ್ತಾರೆ ಹಾಗೆಯೇ ಮುಸಲ್ಮಾನ ರು ಅಲ್ಲ ಎನ್ನುತ್ತಾರೆ. ಕ್ರೈಸ್ತರೂ ಯೇಸು ಎನ್ನುತ್ತಾರೆ. ಜೈನರೂ ವರ್ಧಮಾನ ಮಹಾವೀರ ಎನ್ನುತ್ತಾರೆ. ಬೌದ್ಧರೂ ಭಗವಾನ್ ಬುದ್ಧ ಎಂದು ಆರಾಧಿಸುತ್ತಾರೆ ಅಲ್ಲವೇ ಆದರೆ ಈ ವೀಸಾ ಬಾಲಾಜಿಯನ್ನು ನೋಡಲು ಎಲ್ಲ ಧರ್ಮದವರು ಕೂಡ ಬಂದು ದೇವರನ್ನು ಬಿಡುತ್ತಾರೆ ಸರಿ ಸುಮಾರು ದಿನಕ್ಕೆ ಸಾವಿರಾರು ಮಂದಿ ಇಲ್ಲಿಗೆ ಬರುತ್ತಾರೆ ಆದರೆ ಈ ದೇವರಿಗೆ ವಿಶಿಷ್ಟವಾದ ಪೂಜೆ ಪುನಸ್ಕಾರ ಎಂದು ಏನು ಕೂಡ ನಡೆಯುವುದಿಲ್ಲ ಜೊತೆಗೆ ಈ ದೇವಸ್ಥಾನ ಸುತ್ತ ಮುತ್ತ ಕೂಡ ಹರಕೆ ತೀರಿಸಲು ಯಾವುದೇ ವಸ್ತುಗಳು ಕೂಡ ಸಿಗುವುದಿಲ್ಲ. ಹಾಗೆಯೇ ಇಲ್ಲಿ ಹಣ ಹಾಕಲು ಕೂಡ ಒಂದು ಹುಂಡಿ ಸಹ ಇಲ್ಲ ಈ ದೇವರ ಬಳಿ ನಮ್ಮ ಬೇಡಿಕೆಗಳನ್ನು ಭಕ್ತಿಯಿಂದ ಭಗವಂತನ ಮುಂದೆ

ಇಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡರೆ ಸಾಕು ನಂತರ ನಮ್ಮ ಬೇಡಿಕೆ ಈಡೇರಿದ ಮೇಲೆ ದೇಗುಲಕ್ಕೆ ಬಂದು ದೇವರಿಗೆ 108 ಬಾರಿ ಭಕ್ತಿಯಿಂದ ಪ್ರದಕ್ಷಿಣೆ ಹಾಕಿದರೆ ಅದೇ ಅ ದೇವರಿಗೆ ಹರಕೆ ತೀರಿಸಿದ ಹಾಗೆ ಆಗುತ್ತದೆ ಇಲ್ಲಿ ಪ್ರಮುಖವಾದ ಐತಿಹಾಸಿಕವಾದ ಕುರುಹುಗಳು ಕಾಣಸಿಗುತ್ತವೆ.ಮೊಘಲರು ನಿಜಾಮರು ಕಲ್ಯಾಣಿ ಚಾಲುಕ್ಯರು, ಕಾಕತೀಯರು ಆಳ್ವಿಕೆ ಮಾಡಿರುವ ನಗರ ಎಂದು ಇಲ್ಲಿ ಕಾಣಸಿಗುವ ಕೆಲವು ಶಾಸನಗಳಿಂದ ನಮಗೆ ತಿಳಿದು ಬರುತ್ತದೆ. ಜೊತೆಗೆ ಈ ಗ್ರಾಮದ ಸುತ್ತಲೂ ಕೋಟೆಯ ಕುರುಹುಗಳನ್ನು ಸಹ ಕಾಣಬಹುದು. ಹಾಗೆಯೇ ಈ ಗ್ರಾಮದಲ್ಲಿ ಬಹಳ ಪುರಾತನವಾದ ಆಂಜನೇಯ ದೇವಾಲಯ ಕೂಡ ಇದೆ. ಜೊತೆಗೆ ಹಾಗೆಯೇ ಈ ದೇವಾಲಯ ನಿರ್ಮಾಣಗೊಂಡಿರುವುದರ ಹಿಂದೆ ಒಂದು ಪೌರಾಣಿಕವಾದ ಕಥೆಯೆ ಇದೆ ಅದು ಏನೆಂದರೆ ಸುಮಾರು ವರ್ಷಗಳ ಹಿಂದೆ ಗುಣಲ ಮಾಧವ ರೆಡ್ಡಿ ಎನ್ನುವ ವ್ಯಕ್ತಿ ಚಿಲಕೂರಿನಲ್ಲಿ ವಾಸವಾಗಿದ್ದ ಈತ ತಿರುಪತಿ ವೆಂಕಟೇಶ್ವರನ ಪರಮ ಭಕ್ತ ಹಾಗಾಗಿ ಒಮ್ಮೆ ತಿಮ್ಮಪ್ಪನ ದರ್ಶನ ಮಾಡಲು ತಿರುಪತಿಗೆ ಹೋಗಬೇಕಿತ್ತು ಆದರೆ ಅಂದು ಹೋಗಲು ಸರಿಯಾದ ವ್ಯವಸ್ಥೆ ಇರಲಿಲ್ಲ ಹಾಗಾಗಿ ತಿಮ್ಮಪ್ಪನ ದರ್ಶನಕ್ಕೆ ನೆಡೆದುಕೊಂಡು ಹೋಗಬೇಕಿತ್ತು.

ಆದರೆ ಅವರಿಗೆ ತುಂಬಾ ವಯಸ್ಸು ಆಗಿದ್ದರಿಂದ ನಡೆಯಲು ಸಾಧ್ಯ ಆಗಲಿಲ್ಲ ಹಾಗಾಗಿ ತಿಮ್ಮಪ್ಪನ ದರ್ಶನ ಮಾಡುವುದು ಸಾಧ್ಯವಾಗಲಿಲ್ಲ ಅದಕ್ಕಾಗಿ ಅದನ್ನು ಪರಿತಪಿಸುವುದನ್ನು ಅರಿತ ವೆಂಕಟೇಶ್ವರ ಸ್ವಾಮಿ ತನ್ನ ಭಕ್ತರಿಗಾಗಿ ಸಹ ಧರ್ಮಿಣಿಯರಾದ ಶ್ರೀದೇವಿ ಮತ್ತು ಭೂ ದೇವಿಯ ರೊಂದಿಗೆ ಇಲ್ಲಿಗೆ ಬಂದು ನೆಲೆಸಿದ್ದಾನೆ ಎಂದು ಪುರಾಣ ಹೇಳುತ್ತದೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಚಿಲಕೂರಿನಲ್ಲಿ ನೆಲೆ ನಿಂತು ಬಾಲಾಜಿ ಯಾಗಿ ಭಕ್ತರಿಗೆ ದರ್ಶನ ಕೊಡುತ್ತಿದ್ದಾರೆ. ಹಾಗಾಗಿ ವೀಸಾ ಬೇಕು ಎನ್ನುವವರು ಈ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here