ವ್ಯಾಸಲೆನ್ ಮತ್ತು ಮೊಟ್ಟೆ ಉಪಯೋಗಿಸಿ ಕಪ್ಪು ಕೂದಲು ಪಡೆಯಬಹುದು

52

ನಮ್ಮಲ್ಲಿ ಪ್ರತಿಯೊಬ್ಬರೂ ತಾನು ಸುಂದರವಾಗಿರಬೇಕು ಚಿಕ್ಕ ವಯಸ್ಸಿನವರಂತೆ ಇರಬೇಕು ಬಯಸುತ್ತಾರೆ. ಯಾರಿಗೂ ವಯಸ್ಸಾಗುವುದು ಇಷ್ಟವಿರುವುದಿಲ್ಲ. ಚಿಕ್ಕ ವಯಸ್ಸಿನವರಂತೆ ಕಾಣಲು ಬಿಳಿಯಾದ ಕೂದಲಿಗೆ ಕಪ್ಪು ಬಣ್ಣವನ್ನು ಹಚ್ಚುತ್ತಾರೆ. ಆದರೆ ಕಾಲ ಕಳೆದಂತೆ ವಯಸ್ಸು ಆಗಲೇಬೇಕು. ಹಿರಿಯರಾಗಲೇ ಬೇಕು. ನಾವಿಲ್ಲಿ ತಿಳಿಸುವುದೇನೆಂದರೆ ನಮಗೆ ವಯಸ್ಸಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ನಾವು ಕೊಡುವ ಕೆಲವು ಸಲಹೆಗಳನ್ನು ಅನುಸರಿಸಿದರೆ ವಯಸ್ಸಾದರೂ ಸಹ ವಯಸ್ಸಾಗ ದವರಂತೆ ಕಾಣಬಹುದು. ವಯಸ್ಸಾದಂತೆ ಕೂದಲು ನಮ್ಮ ವಯಸ್ಸನ್ನು ಹೇಗೆ ಪ್ರತಿಬಿಂಬಿಸುವುದೋ ಹಾಗೆಯೇ ಮುಖವು ಕೂಡ ನಮ್ಮ ವಯಸ್ಸನ್ನು ಪ್ರತಿಬಿಂಬಿಸುತ್ತದೆ. ಮುಖದಲ್ಲಿ ಸುಕ್ಕು ನೆರಿಗೆಗಳು ಬೀಳಲು ಆರಂಭವಾಗುತ್ತದೆ. ಹಾಗಾಗಿ ನಾವು ಕೂದಲ ಜೊತೆಗೆ ಮುಖದ ಕಾಳಜಿಯನ್ನು ವಹಿಸುವುದು ಕೂಡ ಮುಖ್ಯವಾಗಿರುತ್ತದೆ. ಆದರೆ ಇದಕ್ಕೆ ದುಬಾರಿ ಖರ್ಚು ಮಾಡಬೇಕೆಂದೇನಿಲ್ಲ. ಮನೆಯಲ್ಲಿಯೇ ಸಿಗುವಂತಹ ವಸ್ತುಗಳಿಂದ ಮದ್ದನ್ನು ತಯಾರಿಸಿ ನಮ್ಮ ತ್ವಚೆಯನ್ನು ಕಾಪಾಡಿ ಕೊಳ್ಳಬಹುದು.

ಅಂತಹ ಒಂದು ಮನೆಮದ್ದನ್ನು ನಾವಿಂದು ನಿಮಗೆ ಹೇಳುತ್ತಿದ್ದೇವೆ. ಎಲ್ಲರ ಮನೆಯಲ್ಲಿ ಸಹಜವಾಗಿ ಸಿಗುವಂತಹ ವಸ್ತು ಎಂದರೆ ಮೊಟ್ಟೆ ಹಾಗು ವ್ಯಾಸಲಿನ್. ಇವುಗಳನ್ನು ಬಳಸಿಯೇ ನಾವೀಗ ಮನೆಮದ್ದು ತಯಾರಿಸುವುದು ಹೇಗೆಂದು ತಿಳಿಯೋಣ. ಮೊಟ್ಟೆಯಲ್ಲಿ ಹೆಚ್ಚು ಪ್ರೊಟೀನ್ ಇರುವುದು ಇದರ ಬಿಳಿಭಾಗದಲ್ಲಿ. ಇದು. ಮುಖದಲ್ಲಿನ ಡೆಡ್ ಸ್ಕಿನ್ ಹಾಗೂ ಓಪನ್ ಪೋರ್ಸ್ ಗಳನ್ನು ತೆಗೆದು ಹಾಕಿ ಚರ್ಮಕ್ಕೆ ಹೊಳಪು ನೀಡುತ್ತದೆ. ಇದನ್ನು ಯಾವುದೇ ರೀತಿಯ ಚರ್ಮಕ್ಕೆ ಅಂದರೆ ಸೆನ್ಸಿಟಿವ್ ಸ್ಕಿನ್ ಆಯಿಲಿ ಸ್ಕಿನ್ ಡ್ರೈ ಸ್ಕಿನ್ ಗಳಿಗೂ ಉಪಯೋಗಿಸಬಹುದು. ಇಂತಹ ಮೊಟ್ಟೆಯ ಬಿಳಿ ಭಾಗ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯನ್ನು ಕೂಡ ತೆಗೆದು ಹಾಕುತ್ತದೆ. ಇನ್ನು ವ್ಯಾಸಲಿನ್ ನಲ್ಲಿರುವ ಪೆಟ್ರೋಲಿಯಂ ಜೆಲ್ ಮುಖಕ್ಕೆ ಒಳ್ಳೆಯ ಮಾಯಿಚರೈಸರ್ ಆಗಿ ಕೆಲಸ ಮಾಡುತ್ತದೆ. ಚರ್ಮದ ಅನೇಕ ತೊಂದರೆಗಳಿಗೆ ವ್ಯಾಸಲಿನ್ ನ್ನು ಉಪಯೋಗಿಸುತ್ತಾರೆ. ಇದನ್ನು ಮುಖಕ್ಕೆ ಉಪಯೋಗಿಸುವುದರಿಂದ ಮುಖದಲ್ಲಿರುವ ಒರಟು ಕಡಿಮೆಯಾಗಿ ಮುಖದ ಚರ್ಮ ಮೃದು ವಾಗುತ್ತದೆ.

ಇದನ್ನು ಮೇಕಪ್ ತೆಗೆದು ಹಾಕಲು ಕೂಡ ಉಪಯೋಗಿಸಬಹುದು. ಮೊಟ್ಟೆಯ ಬಿಳಿಯ ಮಿಶ್ರಣ ಹಾಗು ವ್ಯಾಸಲಿನ್ ನ ಮಿಶ್ರಣ ಒಂದು ಅದ್ಭುತವಾಗಿ ಕೆಲಸ ಮಾಡುತ್ತದೆ. ಇದನ್ನು ಮಿಶ್ರಣ ಮಾಡುವುದು ಹೇಗೆಂದರೆ ಒಂದು ಪಾತ್ರೆಗೆ ಮೊಟ್ಟೆಯಲ್ಲಿನ ಬಿಳಿಯ ಭಾಗವನ್ನು ಹಾಕಿಡಬೇಕು. ಇದಕ್ಕೆ ಒಂದು ಚಮಚ ವ್ಯಾಸಲಿನ್ ನ್ನು ಸೇರಿಸಬೇಕು. ಈ ಮಿಶ್ರಣವನ್ನು ರಾತ್ರಿ ಮಲಗುವ ಮುಂಚೆ ಮುಖ ತೊಳೆದುಕೊಂಡು ಹಚ್ಚಬೇಕು. ನಂತರ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಕೊಳ್ಳಬೇಕು. ದಿನದ ಯಾವುದೇ ಸಮಯದಲ್ಲೂ ಈ ಮಿಶ್ರಣವನ್ನು ಉಪಯೋಗಿಸಬಹುದು. ಆದರೆ ರಾತ್ರಿ ಹಚ್ಚಿದರೆ ಹೆಚ್ಚಿನ ಫಲಿತಾಂಶ ದೊರಕುತ್ತದೆ. ಈ ಮನೆಮದ್ದನ್ನು ಯಾವುದೇ ವಯಸ್ಸಿನ ಮಹಿಳೆಯರು ಅಥವಾ ಪುರುಷರು ಉಪಯೋಗಿಸಬಹುದು. ಇದನ್ನು ನೀವು ಬಳಸುವುದರಿಂದ ಖಂಡಿತವಾಗಿಯೂ ಚಿಕ್ಕವರಂತೆ ಕಾಣುವಿರಿ.

LEAVE A REPLY

Please enter your comment!
Please enter your name here