ಶನಿ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು

54

ಅಥವಾ ಫೋಟೋಗಳನ್ನು ಮನೆಯಲ್ಲಿ ಏಕೆ ಇಡುವುದಿಲ್ಲ ಕಾರಣ ಗೊತ್ತೇ ಸಾಮಾನ್ಯವಾಗಿ ದೇವರು ಎಂದರೆ ಎಲ್ಲರಿಗೂ ಪ್ರೀತಿ,ಅಚ್ಚುಮೆಚ್ಚು ಅಲ್ವಾ ಸ್ನೇಹಿತರೇ ನಮಸ್ಕಾರ ಸ್ನೇಹಿತರೇ ನಮ್ಮ ಎಲ್ಲ ಕಷ್ಟಗಳಿಗೆ ಸ್ಪಂದಿಸುವ ಸಹಾಯ ಮಾಡುವ ಏಕೈಕ ಜೀವ ಶಕ್ತಿ ಎಂದರೆ ಅದುವೇ ದೇವರು. ಆದರೆ ಇದು ಅಸಾಧ್ಯವಾಗಿದೆ ಶನಿ ದೇವರ ವಿಷಯದಲ್ಲಿ. ಇಂದಿನ ಲೇಖನದಲ್ಲಿ ಶನಿ ದೇವರನ್ನು ಏಕೆ ಮನೆಯಲ್ಲಿ ಪೂಜಿಸುವುದಿಲ್ಲ ಎನ್ನುವುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಭಯ ಪಡಿಸುವ ದೇವರು ಎಂದರೆ ಅದು ಶನಿ ದೇವರು. ಶನಿ ದೇವರ ಮುಂದೆ ತಲೆ ಭಾಗದೆ ಇಲ್ಲದವರೆ ಇಲ್ಲ. ಏಕೆಂದರೆ ಶನಿ ದೇವರು ಕೇವಲ ಕಷ್ಟಗಳನ್ನು ಮಾತ್ರ ನೀಡುತ್ತಾನೆ ಹೊರತು ಸುಖಗಳನ್ನು ಅಲ್ಲವೆಂದು. ಪುರಾಣಗಳಲ್ಲಿ ರಾಜರು ಮತ್ತು ಮಹಾರಾಜರು ಸಾಮಾನ್ಯ ಜನರು ಶನಿ ದೇವರ ಕೆಂಗಣ್ಣಿಗೆ ಗುರಿಯಾಗಿರುವುದನ್ನು ನಾವು ಪುರಾಣಗಳಲ್ಲಿ ವೇದಗಳಲ್ಲಿ ಓದಿಕೊಂಡು ತಿಳಿದುಕೊಂಡಿದ್ದೇವೆ. ಶಿವ ಲಯಕಾರನಾದರೂ ಹೆದರದ ಭಕ್ತರು ಶನಿ ದೇವರು ಎಂದರೆ ಭಯ ಹೆಚ್ಚೇ ಪಡುತ್ತಾರೆ. ಕೆಲವೊಮ್ಮೆ ಕೆಲವರಿಗೆ ಜಾತಕದಲ್ಲಿ ದೋಷ ಅಡಗಿ ಅವರಿಗೆ ಶನಿ ದೇವರನ್ನು ಪೂಜಿಸುವ ಹಾಗೂ ಆರಾಧನೆ ಮಾಡುವ ಪರಿಸ್ಥಿತಿ ಕೂಡ ಬಂದು ಒದಗಿ ಬಿಡುತ್ತದೆ.

ಆದರೆ ನಾವು ಎಷ್ಟು ಜಾಗ್ರತೆ ಕಾಳಜಿ ವಹಿಸಿದರೂ ಕಷ್ಟವೇ. ಏಕೆಂದರೆ ಶನಿ ದೇವರ ಸಿಟ್ಟಿಗೆ ತುತ್ತಾದರೆ ತುಂಬಾನೇ ಕಷ್ಟವಾಗುತ್ತದೆ. ಇನ್ನೂ ಶನಿ ದೇವರನ್ನು ಪ್ರಸನ್ನಗೊಳಿಸಲು ಶನಿ ದೇವರ ವಿಗ್ರಹವೋ ಅಥವಾ ಫೋಟೋವನ್ನು ಇಟ್ಟುಕೊಂಡರೆ ಏನಾಗುತ್ತದೆ ಏಕೆ ಯಾರು ಈ ಶನಿ ದೇವರ ಫೋಟೋಗಳನ್ನು ಇಟ್ಟುಕೊಳ್ಳುವುದಿಲ್ಲ ಎಂಬ ಬಗ್ಗೆ ತಿಳಿದುಕೊಳ್ಳೋಣ. ಯಾವ ಕಾರಣಕ್ಕೆ ಶನಿ ದೇವರ ಮೂರ್ತಿಯನ್ನು ಮನೆಯಲ್ಲಿ ಇಡಲ್ಲ. ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ. ದೇವರ ಮನೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತದೆ. ದೇವರ ಕೋಣೆಯಲ್ಲಿ ಎಲ್ಲ ಬಗೆಯ ದೇವರ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಆದರೆ ಶನಿ ದೇವರ ಮೂರ್ತಿಯನ್ನು ಮಾತ್ರ ಇಟ್ಟಿರುವುದಿಲ್ಲ. ಇದಕ್ಕೆ ವಿಶೇಷವಾದ ಕಾರಣವಿದೆ. ಅದುವೇ ಶನಿ ದೇವರಿಂದ ಒಳ್ಳೆದಾದರೂ ಏನಾದರೂ ಎಡವಟ್ಟು ಆಗುತ್ತದೆ ಎಂಬ ಭಯ ಎಲ್ಲರಲ್ಲಿಯೂ ಇದೆ. ಹೀಗಾಗಿ ಶನಿ ದೇವರ ಫೋಟೋಗಳನ್ನು ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡುವುದಿಲ್ಲ.ಒಂದು ವೇಳೆ ಧೈರ್ಯ ಮಾಡಿ ಇಟ್ಟರೆ ಇದರಿಂದ ಅನೇಕ ಕಷ್ಟಗಳು ಎದುರಾಗುತ್ತವೆ ಎಂದು ಜೋತಿಷ್ಯ ಶಾಸ್ತ್ರ ತಿಳಿಸಿಕೊಡುತ್ತದೆ. ಪೌರಾಣಿಕ ಕಾಲದಿಂದಲೂ ಪೂಜೆ ಪುರಸ್ಕಾರಕ್ಕೆ ವಿಶಿಷ್ಟವಾದ ಸ್ಥಾನವಿದೆ. ಯಾರದೇ ಮನೆಯಲ್ಲಿ ಶನಿ ದೇವರ ವಿಗ್ರಹ ಕಾಣುವುದು ವಿರಳವೇ ಸರಿ. ಯಾವತ್ತೂ ಶನಿ ದೇವರ ಮೂರ್ತಿಯನ್ನು ಮನೆಯಲ್ಲಿ ಇಡಬಾರದು.

ಇದನ್ನು ಶಾಸ್ತ್ರ ಮತ್ತು ಪುರಾಣಗಳ ಪ್ರಕಾರವೇ ಹೇಳಲಾಗಿದೆ. ಏಕೆಂದರೆ ಶನಿ ದೇವರಿಗೆ ಒಂದು ಶಾಪವಿದೆ. ಶನಿ ದೇವರು ಯಾರನ್ನು ನೋಡುತ್ತಾನೋ ಅವರಿಗೆ ಅನಿಷ್ಟ ಇಲ್ಲವೇ ದಾರಿದ್ರ್ಯ ಮತ್ತು ಕೆಟ್ಟದಾಗುತ್ತದೆ ಎಂಬ ಉಲ್ಲೇಖವಿದೆ. ಆದ ಕಾರಣವೇ ಶನಿ ದೇವರು ಶಾಪಕ್ಕೆ ಒಳಗಾದ ಕಾರಣ ಮನೆಯಲ್ಲಿ ಶನಿ ದೇವರ ಮೂರ್ತಿಯನ್ನು ಇಡುವುದಿಲ್ಲ. ಒಂದು ವೇಳೆ ಇಟ್ಟರೆ ಶನಿ ದೇವರು ನಮ್ಮನ್ನು ನೋಡುವಂತೆ ಮಾಡಿದರೆ ನಾವೇ ನಮ್ಮ ಮೈ ಮೇಲೆ ಸಮಸ್ಯೆಯನ್ನು ತಂದೊಡ್ಡಿದೆ ಹಾಗೆ ಆಗುತ್ತದೆ ಇನ್ನೂ ಶನಿ ದೇವರು ಯಾರ ಮೇಲೆ ದೃಷ್ಟಿ ಈಡುತ್ತನೋ ಅವರ ಅಭಿವೃದ್ದಿ ಕೂಡ ಆಗುವುದಿಲ್ಲ. ಮನೆಯಲ್ಲಿ ಮಂಗಳ ಕೆಲಸವಾಗುವುದಿಲ್ಲ. ಇದೇ ಕಾರಣಕ್ಕೆ ಶನಿ ದೇವರನ್ನು ಪೂಜೆ ಮಾಡುವುದಿಲ್ಲ. ಇನ್ನೂ ಶನಿ ದೇವರ ದೃಷ್ಟಿಯಿಂದ ದೂರವಿರಬೇಕು. ಇದೇ ಕಾರಣಕ್ಕೆ ಶನಿ ದೇವರನ್ನು ಮನೆಗೆ ತರಬಾರದು ಎನ್ನಲಾಗುತ್ತದೆ. ಶನಿ ದೇವರನ್ನು ದೇವಸ್ಥಾನದಲ್ಲಿ ಮಾತ್ರ ಪೂಜಿಸಬೇಕು. ಹಾಗೆಯೇ ಪೂಜೆ ಮಾಡುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಳ್ಳಬೇಕು. ಇನ್ನೂ ಶನಿ ದೇವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು. ಶನಿ ದೇವರ ದೇವಸ್ಥಾನಕ್ಕೆ ಹೋದಾಗಲೂ ಕೂಡ ತುಂಬಾ ಹೊತ್ತು ದೃಷ್ಟಿಯಿಂದ ನೋಡಬಾರದು.

LEAVE A REPLY

Please enter your comment!
Please enter your name here