ಈ ಊರಲ್ಲಿ ಮನೆಗಳಿಗೆ ಬ್ಯಾಂಕುಗಳಿಗೆ ಬಾಗಿಲೆ ಇಲ್ಲವಂತೆ. ಮನೆ ಬಾಗಿಲು ಇರುವ ಜಾಗದಲ್ಲಿ ಬಾಗಿಲೆ ಇಲ್ಲ ಎಂದ ಮೇಲೆ ಇನ್ನು ಅದಕ್ಕೆ ಬೀಗ ಹಾಕುವುದಾದರು ಹೇಗೆ ಇನ್ನು ಆ ಊರಿನ ಹೆಸರು ಶನಿ ಸಿಂಗ್ನಾಪುರ ಅಥವಾ ಸಿಂಗನಾಪುರ ಇದು ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿದೆ ಹಾಗೆ ಇವತ್ತಿಗೂ ಬಾಗಿಲಿಲ್ಲದ ಆ ಊರಿನಲ್ಲಿ ಕಳ್ಳರೆ ಇಲ್ಲವೆನಿಸುತ್ತದೆ ಹಾಗೇನಾದರೂ ಇದ್ದರೆ ಆ ಊರಿನಲ್ಲಿ ಮಾತ್ರ ಕಳ್ಳ ತನ ಮಾಡುವುದಿಲ್ಲ ನಿಜ ಇಲ್ಲಿಯವರೆಗೂ ಆ ಊರಿನಲ್ಲಿ ಒಂದೇ ಒಂದು ಕಳ್ಳತನವು ನಡೆದಿಲ್ಲವಂತೆ ಹೀಗೆ ಆ ಊರಿನಲ್ಲಿ ತಲೆತಲಾಂತರ ಗಳಿಂದ ಉಳಿದುಕೊಂಡು ಬಂದಿರುವ ಈ ಸತ್ಯವಾದ ಐತಿಹಾಸಿಕ ಮಹಿಮೆಗೆ ಕಾರಣ ಏನು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.
ಆ ಊರಿನಲ್ಲಿ 3000 ನಿವಾಸಿಗಳ ಯಾರ ಮನೆಗೂ ಬಾಗಿಲುಗಳು ಇಲ್ಲದಿರುವುದಕ್ಕೆ ಕಾರಣಗಳಿವೆ ದೇವರ ಬಗ್ಗೆ ಗಾಢವಾದ ಭಕ್ತಿ ಮತ್ತು ನಂಬಿಕೆ ಇರುವ ಆ ಊರ ಜನರು ಶನಿದೇವರು ನಮ್ಮನ್ನು ಅಪರಾಧ ವಿಪತ್ತು ಮತ್ತು ಕೆಡುಗಳಿಂದ ರಕ್ಷಿಸುತ್ತಾನೆ ಎಂದು ನಂಬಿದ್ದಾರೆ ಎಲ್ಲಿಯವರೆಗೆ ಈ ಜನ ಗಾಢವಾದ ನಂಬಿಕೆ ಮತ್ತು ಭಕ್ತಿಗಳನ್ನು ತಮ್ಮ ಹೃದಯದಲ್ಲಿ ಇಟ್ಟು ಕೊಂಡಿರುತ್ತಾರೋ ಅಲ್ಲಿಯವರೆಗೂ ಆ ಊರಲ್ಲಿ ಅಪರಾಧಗಳು ನಡೆಯುವುದಿಲ್ಲ ಊರಿಗೆ ಯಾವತ್ತಿಗೂ ಕೆಡಾಗುವುದಿಲ್ಲ ಎನ್ನುತ್ತಾರೆ. ಹಳೆಯುಗದ ಆರಂಭದಲ್ಲಿ ಶನಿದೇವರು ಕಪ್ಪು ಕಲ್ಲಿನ ರೂಪದಲ್ಲಿ ಭೂಮಿಯಿಂದ ಎದ್ದು ಬಂದಂತೆ ಒಡಮೂಡಿತು ಅಂತಹ ಕಪ್ಪು ಕಲ್ಲಿನಲ್ಲಿ ಭವ್ಯವಾದ ರೂಪು ತಳೆದು ಭೂ ಒಡಲಿನಿಂದ ಅನಾವರಣಗೊಂಡ ಭಗವಂತ ಸಾಕ್ಷಾತ್ ಶನಿದೇವರ ಪ್ರತಿಮೆಯನ್ನು ಆ ಕಾಲದ ಸ್ಥಳೀಯ ಗ್ರಾಮದ ಕುರುಬರು ಕಂಡುಕೊಂಡರು ಆಮೇಲೆ ಮಹಾನ್ ಭಕ್ತ ಸಾಗರವು ಜೀವಂತ ದೇವಸ್ಥಾನ ವೆಂದು ನಂಬಿತು ಹಾಗೆಯೇ ಶನಿಯ ಸ್ವರೂಪವಾಗಿ ಒಡಮೂಡಿದ್ದ ಕರಿ ಕಲ್ಲನ್ನು ಕುರುಬನೊಬ್ಬ ಮುಟ್ಟಿದಾಗ ರ ಕ್ತ ಸುರಿಯಿತು.
ಯಾವಾಗ ರ ಕ್ತ ಕಲ್ಲಿನಿಂದ ಸುರಿಯುತ್ತಲೇ ಇತ್ತೋ ಕುರುಬರೆಲ್ಲರು ಧಿಗ್ಭ್ರಮೆಯಾದರು ಈ ಸುದ್ದಿ ಎಲ್ಲ ಕಡೆ ಹರಡಿತು ಇಡೀ ಗ್ರಾಮ ಆ ಪವಾಡ ನೋಡಿತು ಅವತ್ತು ಭಕ್ತರ ಕನಸಿನಲ್ಲಿ ದೇವರು ಪ್ರತ್ಯಕ್ಷವಾಗಿ ಮಾತನಾಡಿತು. ಶನೇಶ್ವರ ದೇವರು ಹೇಳಿತು ಆಗ ಭಕ್ತರು ಕಪ್ಪು ಕಲ್ಲನ್ನು ನೋಡುತ್ತಾರೆ ಅದಿಗ ನಿಚ್ಚಳವಾಗಿ ಶನೇಶ್ವರನ ರೂಪವೇ ಆಗಿ ಮೈದಳೆದು ನಿಂತಂತೆ ಕಾಣಿಸಿತು. ದೇವಸ್ಥಾನ ಕಟ್ಟುವುದಾಗಿ ಭಕ್ತರು ಕೇಳಿದರು ಆಕಾಶದ ಮೇಲ್ಛಾವಣಿ ಇದೆ ಎಂದು ದೇವರು ಸೂಚಿಸಿತು. ಇನ್ನು ಮುಂದೆ ಈ ಪ್ರದೇಶದಲ್ಲಿ ಕಳ್ಳರ ದರೊಡೆಕೋರರ ಭಯವಿಲ್ಲ ನಿಮಗೆ ಎಂದು ದೇವರು ಹೇಳಿತು ಭಕ್ತರು ಖುಷಿಯಾದರು ಹೀಗೆ ವಿಗ್ರಹ ಕಂಡ ದಿನ ಶನಿ ದೇವರು ಭಕ್ತರ ಕನಸಿನಲ್ಲಿ ಮಾತನಾಡಿತು. ಆದ್ದರಿಂದ 400 ವರ್ಷಗಳ ಹಿಂದಿನಿಂದಲೂ ಕಾಲಾಂತರಗಳಿಂದ ಮಹಾರಾಷ್ಟ್ರದ ಸಿಂಗನಾಪುರದಲ್ಲಿ ಶನೇಶ್ವರ ದೇವರ ಮಹಿಮೆಯಿಂದಾಗಿ ಇವತ್ತಿಗೂ ಆ ಊರಿನಲ್ಲಿ ಮನೆಗಳಿಗೆ ಬ್ಯಾಂಕ್ ಮತ್ತು ಅಂಗಡಿಗಳಿಗೆ ಯಾವುದೇ ಕಾರಣಕ್ಕೂ ಬಾಗಿಲು ಹಾಕುವುದಿಲ್ಲ ಬಿಗವೇ ಇಲ್ಲವಂತೆ ಪ್ರತಿದಿನ 40000 ಭಕ್ತರು ಆ ಊರಿಗೆ ಬಂದು ಹೋಗುತ್ತಾರೆ.