ಶಿವನನ್ನು ಈ ರೀತಿಯಾಗಿ ಪೂಜಿಸಿದರೆ ಬೇಗನೆ ಒಲಿಸಿಕೊಳ್ಳಬಹುದು

59

ಶಿವನನ್ನು ಈ ರೀತಿಯಾಗಿ ಪೂಜಿಸಿದರೆ ಬೇಗನೆ ಒಲಿಸಿಕೊಳ್ಳಬಹುದು. ಈ ಸಕಲ ಸೃಷ್ಟಿಗೆ ಆದಿ ದಂಪತಿಗಳು ಪಾರ್ವತಿ ಪರಮೇಶ್ವರರು ಹಾಗೆ ಸಮಸ್ತ ಸೃಷ್ಟಿಗೆ ಲಯಕಾರನು ಪರಮೇಶ್ವರನು. ಆದಿ ದಂಪತಿಗಳ ಅನುಗ್ರಹ ಒಂದಿದ್ದರೆ ಸಾಕು ಎಂತಹದ್ದೇ ಕಷ್ಟವಿದ್ದರು ಸಹ ನಿವಾರಣೆಯಾಗುತ್ತದೆ ಎಂದು ನಾವು ನಂಬಿದ್ದೇವೆ ಸಾಧಾರಣವಾಗಿ ನಾವು ಶಿವನ ದೇವಾಲಯಕ್ಕೆ ಹೋದಾಗ ಶಿವನಿಗೆ ನಂದಿಗೆ ಕೈ ಜೋಡಿಸಿ ನಮಸ್ಕಾರ ಮಾಡಿ ದೇವಾಲಯದಲ್ಲಿರುವ ಗಂಟೆಯನ್ನು ಹೊಡೆದು ಆಮೇಲೆ ತೀರ್ಥ ಪ್ರಸಾದ ಸ್ವೀಕರಿಸಿ ವಾಪಸ್ಸು ಮನೆಗೆ ಹೋಗುತ್ತೇವೆ ಆದರೆ ಇದು ತಪ್ಪು ಅಂತ ನಮ್ಮ ಹಿರಿಯರು ಹೇಳುತ್ತಾರೆ. ಹೀಗೆ ನಮಸ್ಕರಿಸುವುದು ಒಂದು ಪದ್ಧತಿಯಲ್ಲ ಶಿವನನ್ನು ಪೂಜಿಸಲು ಬೇರೆಯದೇ ಆದಂತಹ ಒಂದು ಪದ್ದತಿ ಇದೆ ಇತರ ಯಾವುದೇ ದೇವತೆಗಳನ್ನು ಪೂಜಿಸುವಾಗ ಎದುರುಗಡೆ ನಿಂತು ಗಂಟೆ ಹೊಡೆದು ನಮಸ್ಕರಿಸಿ ದರ್ಶನ ಪಡೆದರೆ ಸಾಕು ನಮ್ಮ ಸಕಲಾರ್ಥಗಳು ಈಡೇರುತ್ತದೆ ಅಂತ ನಾವು ನಂಬಿದ್ದೇವೆ.

ಆದರೆ ಶಿವನನ್ನು ದರ್ಶಿಸಿ ಅದರ ಪ್ರತಿಫಲ ನಮಗೆ ಸಿಗಬೇಕಾದರೆ ಈ ಒಂದು ಕ್ರಮವನ್ನು ನಾವು ಖಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಯಾವ ಒಂದು ಪದ್ದತಿಗೆ ಅನುಗುಣವಾಗಿ ನಾವು ಶಿವನನ್ನು ಪ್ರಾರ್ಥಿಸಿದರೆ ಅಥವಾ ಬೇಡಿಕೊಂಡರೆ ಆ ಸೃಷ್ಟಿಕರ್ತ ಶಿವ ನಮಗೆ ಒಲಿಯುತ್ತಾನೆ ಎನ್ನುವುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಶಿವಾಲಯಕ್ಕೆ ಹೋದಾಗ ಮೊದಲು ನಮಗೆ ದರುಷನ ಕೊಡುವುದು ನಂದಿ ನಂದಿ ಕೇವಲ ಒಂದು ಶಿವನ ವಾಹನ ಮಾತ್ರವಲ್ಲ ಆತ ಶಿವನ ಪರಮ ಭಕ್ತನಾಗಿದ್ದನು ಆದ್ದರಿಂದ ನಂದಿಯನ್ನು ನಾವು ಪೂಜಿಸಿದರೆ ಪರಮೇಶ್ವರನನ್ನು ಪೂಜಿಸಿದ ಹಾಗೆ ಎನ್ನುವ ಅರ್ಥವಿದೆ. ಇದಕ್ಕಾಗಿ ನಾವು ಭಕ್ತಿಯಿಂದ ಪೂಜಿಸಬೇಕಾಗುತ್ತದೆ ಬೇರೆ ದೇವರುಗಳನ್ನು ನಾವು ಆಯಾ ಮೂರ್ತಿಯಲ್ಲಿ ಮತ್ತು ಆ ಮೂರ್ತಿಯ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ ಪ್ರಾರ್ಥನೆಯನ್ನು ಮಾಡುತ್ತೇವೆ ಆದರೆ ಶಿವನನ್ನು ನಾವು ಲಿಂಗರೂಪದಲ್ಲಿ ಪೂಜಿಸುತ್ತೇವೆ ಆದ್ದರಿಂದ ಶಿವಾಲಯಕ್ಕೆ ಹೋದಾಗ

ನಂದಿಯ ಮೂಲಕ ಶಿವನ ದರ್ಶನ ಮಾಡಬೇಕು ಅದು ಹೆಂಗೆಂದರೆ ನಂದಿಯ ಕೊಂಬುಗಳ ಮೂಲಕ ಸ್ವಾಮಿ ಶಿವನ ದರ್ಶನವನ್ನು ಪಡೆಯಬೇಕು ಅಂತ ನಮ್ಮ ಆಗಿನ ಕಾಲದ ಹಿರಿಯರು ಹೇಳುತ್ತಾರೆ. ಹಾಗೇನೇ ನಮ್ಮ ಬಲಗೈಯನ್ನು ನಂದಿಯ ಬಲ ಕೊಂಬಿನ ಮೇಲೆ ಇಟ್ಟು ಶಿವನ ದರ್ಶನ ಪಡೆದರೆ ತುಂಬಾ ಒಳ್ಳೆಯದು ಇದರಿಂದ ನಮ್ಮ ದೃಷ್ಟಿ ಶಿವನ ಮೇಲೆ ನೇರವಾಗಿ ಕೇಂದ್ರೀಕರಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ನಮ್ಮ ಕೋರಿಕೆಗಳನ್ನು ನಂದಿಯ ಕಿವಿಯಲ್ಲಿ ಹೇಳಿದರೆ ಅದು ಬೇಗನೆ ಪರಮೇಶ್ವರನಿಗೆ ತಲುಪುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ನಂದಿಯ ಕಿವಿಯಲ್ಲಿ ನಮ್ಮ ಕೋರಿಕೆಗಳನ್ನು ನಿಧಾನವಾಗಿ ಹೇಳುವುದರಿಂದ ಅದು ಪರಮೇಶ್ವರನಿಗೆ ತಲುಪುತ್ತದೆ ಅಂತ ಆಗಿನ ಕಾಲದಿಂದಲೂ ಸಹ ನಂಬಿಕೊಂಡು ಬಂದಿದ್ದಾರೆ.

ಹೌದು ಸ್ನೇಹಿತರೆ ಇದು ನಾವು ಶಿವಾಲಯಕ್ಕೆ ಹೋದಾಗ ನಾವು ಪಾಲಿಸಬೇಕಾದಂತಹ ಅತ್ಯಂತ ಸರಳವಾದ ಒಂದು ವಿಧಾನವಾಗಿದೆ. ಇನ್ನು ಮುಂದೆ ನೀವು ಸಹ ಶಿವನ ದೇವಾಲಯಕ್ಕೆ ಹೋದಾಗ ಇಲ್ಲಿ ತಿಳಿಸಿರುವ ಒಂದು ವಿಧಾನವನ್ನು ಅನುಸರಿಸಿ ಶಿವನ ದರ್ಶನವನ್ನು ಪಡೆಯಿರಿ ಜೊತೆಗೆ ಆ ಶಿವನು ನಿಮ್ಮ ಇಷ್ಟಾರ್ಥಗಳೆಲ್ಲವನ್ನು ಈಡೇರಿಸುತ್ತಾನೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು ಪರಿಹಾರ ನಿಶ್ಚಿತ

LEAVE A REPLY

Please enter your comment!
Please enter your name here