ಶಿವನಿಗೆ ಬಿಲ್ವ ಅರ್ಪಣೆ ಮಾಡಿದ್ರೆ ಈ ಲಾಭಗಳು ನಿಮಗೆ ದೊರೆಯಲಿದೆ

80

ಶಿವನಿಗೆ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸುವುದರ ಹಿಂದಿನ ಪೌರಾಣಿಕ ಕಥೆ. ಕೈಲಾಸನಾಥ ನಿಲಕಂಟನಿಗೆ ಬಿಲ್ವಪತ್ರೆ ಎಂದರೆ ತುಂಬಾ ಪ್ರೀತಿ ಶಿವನನ್ನು ಆರಾಧಿಸುವಾಗ ಬಿಲ್ವಪತ್ರೆಯ ಜೊತೆಗೆ ಪೂಜಿಸಿದರೆ ಶಿವನಿಗೆ ತುಂಬಾ ಪ್ರಿಯವಾಗುವುದು ಎಂದು ಶಿವನಿಗೆ ಪೂಜೆ ಸಲ್ಲಿಸುವಾಗ ಬಿಲ್ವ ಪತ್ರೆಯನ್ನು ಉಪಯೋಗ ಮಾಡುತ್ತಾರೆ ಅದರಲ್ಲೂ ಸೋಮವಾರದ ಶಿವನ ಪೂಜೆಗೆ ವಿಶೇಷವಾದ ದಿನ ಈ ದಿನದಂದು ಬಿಲ್ವಪತ್ರೆಯಿಂದ ಪೂಜೆ ಸಲ್ಲಿಸಲಾಗುತ್ತದೆ ಮುಕ್ಕಣನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವುದರ ಹಿಂದಿರುವ ಪೌರಾಣಿಕ ಕಥೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಬಿಲ್ವ ಪತ್ರೆ ಮರ ಒಂದು ದಂಟಿನಲ್ಲಿ 3 ಎಲೆಗಳು ಇರುತ್ತವೆ ಈ ಬಿಲ್ವಪತ್ರೆ ಎಲೆಯಲ್ಲಿ ತ್ರಿಮೂರ್ತಿಗಳು ಎಂದರೆ ಬ್ರಹ್ಮ ವಿಷ್ಣು ಮತ್ತು ಶಿವ ನೆಲೆಸಿದ್ದಾರೆ ಎಂಬ ನಂಬಿಕೆ ಕೂಡ ಇದೆ ಬಿಲ್ವ ಪತ್ರೆಯ ಮುಂಬಾಗದಲ್ಲಿ ಅಮೃತ ಹಿಂಬಾಗದಲ್ಲಿ ಯಕ್ಷರು ಇರುತ್ತಾರೆ ಈ ಬಿಲ್ವ ಪಾತ್ರೆ ಮರ ಕಾಶಿ ಕ್ಷೇತ್ರಕ್ಕೆ ಸಮವಾದ ಮರವಾಗುತ್ತದೆ ಎಂದು ಹೇಳಲಾಗುತ್ತದೆ.

ಈ ಬಿಲ್ವ ಪತ್ರೆ ಮರದ ಹುಟ್ಟಿನ ಬಗ್ಗೆಯೂ ಸ್ಕಂದ ಪುರಾಣದಲ್ಲಿ ಹೇಳಲಾಗಿದೆ ಈ ಪವಿತ್ರವಾದ ಮರ ಪಾರ್ವತಿಯ ಬೆವರು ಹನಿ ಮಂದಾರ ಪರ್ವತದ ಮೇಲೆ ಬಿದ್ದಾಗ ಬಿಲ್ವ ಪತ್ರೆಮರ ಹುಟ್ಟಿಕೊಂಡಿತು ಎನ್ನಲಾಗುತ್ತದೆ. ಪಾರ್ವತಿ ದೇವಿ ಗಿರಿಜೆಯಾಗಿ ಈ ಮರದ ಬೇರುಗಳಲ್ಲಿ ನೆಲೆಸಿರುತ್ತಾಳೆ ಆದ್ದರಿಂದ ಶಿವನಿಗೆ ಈ ಮರದ ಎಲೆಗಳು ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಈ ಮರದಲ್ಲಿ ಲಕ್ಷ್ಮೀದೇವಿಯು ವಿವಿಧ ರೂಪಗಳಲ್ಲಿ ನೆಲೆಸಿರುತ್ತಾಳೆ ಕಾಂಡಗಳಲ್ಲಿ ಮಹೇಶ್ವರಿಯಾಗಿ ಕೊಂಬೆಯಲ್ಲಿ ದ್ರಾಕ್ಷಾಯಿನಿಯಾಗಿ ಎಲೆಗಳಲ್ಲಿ ಪಾರ್ವತಿದೆವಿಯಾಗಿ ಹಾಗೂ ಕಾತ್ಯಾಯಿನಿಯಾಗಿ ಹಣ್ಣಿನಲ್ಲಿ ಗೌರಿಯಾಗಿ ಹೂವುಗಳಲ್ಲಿ ನೆಲೆಸಿರುತ್ತಾಳೆ ಆದ್ದರಿಂದ ಈ ಮರದ ಸಮೀಪ ಹೋದರೆ ಆ ಮರ ಎಲೆ ಹೂವು ಕಾಯಿಗಳನ್ನು ಮುಟ್ಟಿದರೆ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ ಆದ್ದರಿಂದಲೆ ಶಿವಾಲಯದ ಸಮೀಪ ಬಿಲ್ವಪತ್ರೆ ಗಿಡ ಬೆಳೆಯಲಾಗುವುದು ಬಿಲ್ವಪತ್ರೆ ಎಲೆಗಳನ್ನು ಶಿವನ ಪೂಜೆಗೆ ಅರ್ಪಿಸುವುದರ ಮಹತ್ವದ ಬಗ್ಗೆ ಕೂಡ ಒಂದು ಶ್ಲೋಕವಿದೆ ಮೂಲತೋ ಭವ ರೂಪಾಯ ಮಧ್ಯತೋ ಮೃದು ರೂಪಿಣಿ

ಅಗ್ರತಹ ಶಿವರೂಪಾಯ ಪತ್ರೆವೆರ್ಧ ಸ್ವರೂಪಿಣಿ ಸ್ಕಂದೆ ವೇದಾಂತ ರೂಪೇಯ ತರುರಾಜಯೇತೆ ನಮಹ ಸರ್ವಕಾಮ ಪ್ರದಾಮ್ ಬಿಲ್ವಮ್ ದಾರಿದ್ರಶ್ಯ ಪ್ರಣಾಶನಮ್ ಬಿಲ್ವಾಪ್ರಾತಮ್ ನಾಸ್ಟಿಯೇನತುಷ್ಯತಿ ಶಂಕರ. ಬಿಲ್ವ ಮರ ಶಿವನ ಭಾವರೂಪ ಅದರ 3 ಎಲೆಗಳು 3 ವೇದಗಳು ಕೊಂಬೆಗಳು ಉಪನಿಷತ್ತುಗಳು ಬಿಲ್ವಪತ್ರೆಮರ ಮರಗಳರಾಜ ಈ ಬಿಲ್ವಪತ್ರೆ ಮರವನ್ನು ಭಕ್ತಿಯಿಂದ ಪೂಜಿಸಿದರೆ ಬಡತನ ದೂರವಾಗುವುದು. ಶಿವನಿಗೆ ಈ ಮರದ ಎಲೆಗಳನ್ನು ಅರ್ಪಣೆ ಮಾಡಿದರೆ ತುಂಬಾ ಖುಷಿಯಾಗುತ್ತಾನೆ ಎಂಬುದು ಈ ಶ್ಲೋಕದ ಅರ್ಥವಾಗಿದೆ. ಇನ್ನು ಶಿವಪೂಜೆಗೆ ಬಿಲ್ವಪತ್ರೆ ಎಲೆಗಳ ಆಯ್ಕೆ ಮಾಡುವಾಗ ಯಾವುದೇ ಹುಳುಗಳು ಕುಳಿತು ಹಾಳಾಗಿರಬಾರದು ಅದರ ಮೇಲೆ ಬಿಳಿ ಚುಕ್ಕೆಗಳು ಇರಬಾರದು ಇನ್ನು ತರುವ ಎಲೆ ಹರಿದಿರಬಾರದು 3 ಎಲೆಗಳಿರುವ ದಂಟನ್ನು ಕಿತ್ತುತಂದು ಶಿವನಿಗೆ ಅರ್ಪಿಸಬೇಕು ಶಿವನಿಗೆ ಬಿಲ್ವಪತ್ರೆ ಮಾಲೆಯನ್ನು ಮಾಡಿ ಹಾಕಬಹುದು.

ಈ ಎಲೆ ಜೊತೆಗೆ ಕಾಯಿಗಳನ್ನು ಪೂಜೆಗೆ ಅರ್ಪಿಸಬಹುದು. ಶಿವನಿಗೆ ಬಿಲ್ವಪತ್ರೆಗಳನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖವಾಗಿ ತೊಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು ಹೀಗೆ ಮಾಡುವುದರಿಂದ 3 ಎಲೆಗಳಿಂದ ಬರುವ ಶಕ್ತಿಯಿಂದ ಬರುವ ಶಕ್ತಿ ನಮ್ಮ ಕಡೆಗೆ ಬರುತ್ತದೆ ಎಲೆಗಳ ತುದಿಗಳಿಂದ ಶಿವತತ್ವವು ವಾತಾವರಣದಲ್ಲಿ ಹರಡಿ ನಮಗೆ ಧನಾತ್ಮಕ ಶಕ್ತಿಯ ಅನುಭವ ಉಂಟಾಗುವುದು. ಬಿಲ್ವಪತ್ರೆಯ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ ಎಲೆಗಳ ತುದಿಗಳನ್ನು ಶಿವನ ಕಡೆಗೆ ಇರುವಂತೆ ಅರ್ಪಿಸಿದರೆ ಆಗ ಬಿಲ್ವಪತ್ರೆ ಯಾರು ಅರ್ಪಿಸುತ್ತಾರೋ ಅವರಿಗೆ ಮಾತ್ರ ಶಿವತತ್ವ ಸಿಗುತ್ತದೆ. ಇನ್ನು ಸೋಮವಾರ ಶಿವಪೂಜೆಗೆ ಶ್ರೇಷ್ಠವಾದ ದಿನವಾಗಿದೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಬಿಳಿಬಣ್ಣದ ಮಡಿ ಬಟ್ಟೆಯನ್ನು ಧರಿಸಬೇಕು ಬಿಲ್ವಪತ್ರೆ ಅರ್ಪಿಸುವಾಗ ಓಂ ನಮ ಶಿವಾಯ ಎಂಬ ಮಂತ್ರ ಪಠನೆ ಮಾಡುತ್ತ ಶಿವಲಿಂಗಕ್ಕೆ ಒಂದೊಂದೇ ಎಲೆಗಳನ್ನು ಅರ್ಪಿಸಬೇಕು ಈ ಎಲೆಗಳು ಶಿವಲಿಂಗವನ್ನು ಮುಚ್ಚುವಂತೆ ಅರ್ಪಣೆ ಮಾಡಬೇಕು ಬಿಲ್ವಪತ್ರೆ ಎಲೆಗಳ ಜೊತೆಗೆ ಶ್ರೀಗಂಧ ಹೂವುಗಳು ಹಣ್ಣುಗಳು ಮತ್ತು ಎಳ್ಳುಗಳನ್ನು ಕೂಡ ಅರ್ಪಿಸಬಹುದು.

LEAVE A REPLY

Please enter your comment!
Please enter your name here