ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳು ಬರುವುದು ಸಹಜ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಜೀವಿತಾ ಅವಧಿಯಲ್ಲಿ ಕಷ್ಟಗಳನ್ನು ಪಡುತ್ತಲೇ ಇರುತ್ತಾರೆ ಜೀವನದ ತಕ್ಕಡಿಯಲ್ಲಿ ಸರಿ ದುಗಿಸಲು ಭಗವಂತ ಯಾವುದೋ ಒಂದು ರೀತಿಯಲ್ಲಿ ಕಷ್ಟಗಳನ್ನು ಕೊಡುತ್ತಲೇ ಇರುತ್ತಾನೆ ಈ ಕಷ್ಟದಿಂದ ಪರೀಕ್ಷೆಯನ್ನು ಪಾರು ಮಾಡುವಷ್ಟರಲ್ಲಿ ಅರ್ಧ ಆಯಸ್ಸು ಮುಗಿದು ಹೋಗಿರುತ್ತದೆ ಈ ಕಷ್ಟ ಕೆಲವೊಮ್ಮೆ ದಿನಗಳ ವರೆಗೆ ಕೆಲವೊಮ್ಮೆ ತಿಂಗಳುಗಳ ವರೆಗೆ ಇನ್ನು ಕೆಲವೊಮ್ಮೆ ಹಲವಾರು ವರ್ಷಗಳ ವರೆಗೆ ಇದ್ದರೆ ಕಷ್ಟ ಪಡಲೆಂದೆ ಹುಟ್ಟಿದ್ದೇವೆ ಎಂದು ಎನಿಸುತ್ತದೆ.ಇದರಲ್ಲಿ ಬಹಳ ಮುಖ್ಯವಾದದ್ದು ಸಾಲ ಬಾಧೆ. ಸಾಲ ಬಾಧೆ ಬರುವುದು ಆರ್ಥಿಕ ಸಮಸ್ಯೆಯಿಂದ ಇದರಿಂದ ಮನುಷ್ಯ ಕೆಲವೊಮ್ಮೆ ತನ್ನ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳುತ್ತಾನೆ.
ಇದಕ್ಕೆಲ್ಲಾ ಪರಿಹಾರವಾಗಿ ನಾವು ಹೇಳಿದ ರೀತಿ ಶುಕ್ರವಾರ ಅಥವಾ ಸಪ್ತಮಿ ತಿಥಿಗಳಂದು ಪರಿಹಾರವನ್ನು ಮಾಡಿಕೊಂಡರೆ ಬಹಳ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ ಶುಕ್ರವಾರ ಮತ್ತು ಸಪ್ತಮಿ ತಿಥಿಗಳು ಕೂಡಿ ಬಂದರೆ ಇನ್ನು ಒಳ್ಳೆಯ ಫಲಿತಾಂಶಗಳು ದೊರೆಯುತ್ತದೆ. ಬೆಳಗ್ಗೆ ಪ್ರಾತಃ ಕಾಲ ಸೂರ್ಯೋದಯಕ್ಕೆ ಮುನ್ನ ನಿದ್ರೆಯಿಂದ ಎದ್ದು ಶುಭ್ರವಾಗಿ ತಲೆ ಸ್ನಾನ ಮಾಡಬೇಕು ಸ್ನಾನ ಮಾಡುವ ನೀರಿನಲ್ಲಿ ಪರಿಶುದ್ಧವಾದ ಅರಿಷಿಣ ಪುಡಿಯನ್ನು ಬೆರೆಸಬೇಕು ಸ್ನಾನವಾದ ನಂತರ ದೇವರ ಮನೆಯನ್ನು ಸ್ವಚ್ಛ ಗೊಳಿಸಿ ದೇವರ ಪೂಜೆಯನ್ನು ಮಾಡಬೇಕು.
ಪೂಜೆಯನ್ನು ಮಾಡುವ ಸಮಯದಲ್ಲಿ ಮೂರು ಅರಿಶಿಣದ ಕೊಂಬುಗಳನ್ನು ತೆಗೆದುಕೊಂಡು ಅದಕ್ಕೆ ಅರಿಶಿಣ ಶ್ರೀಗಂಧ ಕುಂಕುಮ ಮತ್ತು ಪುಷ್ಪವನ್ನು ಸಮರ್ಪಿಸಬೇಕು ಈ ಅರಿಶಿಣದ ಕೊಂಬುಗಳನ್ನು ದೇವರ ಪೀಠದ ಮೇಲೆ ಇಟ್ಟು ಓಂ ಬೃಹಸ್ಪತಯೇ ನಮಃ ಎಂದು ಪ್ರಾರ್ಥಿಸಬೇಕು ಬಾಳೆ ಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಬೇಕು ಈ ಮೂರು ಅರಿಶಿಣದ ಕೊಂಬುಗಳನ್ನು ಹಳದಿ ದಾರದಿಂದ ಕಟ್ಟಿ ದೇವರ ಪೀಠದ ಮೇಲೆ ಇಟ್ಟಿರಬೇಕು ಈ ದಿನ ಸಾಯಂಕಾಲ 6 ರಿಂದ ಆರುವರೆ ಸಮಯ ಒಳಗೆ ನೀವು ವ್ಯಾಪಾರ ಮಾಡುವ ಸ್ಥಳ ಅಥವಾ ನಿಮಗೆ ಹಣ ಬರುವ ಸ್ಥಳದ ಪ್ರಧಾನ ದ್ವಾರದ ಅಂದರೆ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಈ ಮೂರು ಅರಿಶಿಣ ಕೊಂಬುಗಳನ್ನು ಕಟ್ಟಿ ಧೂಪ ದೀಪಗಳನ್ನು ತೋರಿಸಬೇಕು.
ಹೀಗೆ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶಗಳು ಲಭಿಸುತ್ತದೆ ನಿಮಗೆ ಶೀಘ್ರ ಗುರುವಿನ ಅನುಗ್ರಹ ನಿಮಗೆ ದೊರೆಯುತ್ತದೆ ಮತ್ತು ಮಹಾ ಲಕ್ಷ್ಮಿಯು ನಿಮ್ಮ ಮನೆಗೆ ಸದಾ ಬರುತ್ತಾಳೆ. ಹಾಗೂ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿ ನಿಮ್ಮ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುತ್ತಾರೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ಅನುಸರಿಸಲು ಹೇಳಿರಿ. ಹಾಗೆಯೇ ಈ ಲೇಖನ ಉಪಯುಕ್ತ ಅನಿಸಿದರೆ ನಿಮ್ಮ ಎಲ್ಲಾ ಆಪ್ತರಿಗೆ ಕೂಡಲೇ ಶೇರ್ ಮಾಡಲು ಮಾತ್ರ ಮರೆಯದಿರಿ. ಇಂತಹ ಹಲವು ಮಾಹಿತಿಗಾಗಿ ತಪ್ಪದೇ ಈ ಪೇಜ್ ಲೈಕ್ ಮಾಡಿರಿ.