ಶೇಂಗಾ ಬೀಜದಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು

92

ಚಳಿಗಾಲದಲ್ಲಿ ಶೇಂಗಾ ಬೀಜವು ಒಂದು ಒಳ್ಳೆಯ ಆಹಾರ ಅಂತ ಹೇಳುತ್ತಾರೆ. ಈ ಶೇಂಗಾ ಕಾಯಿಯನ್ನು ಅಥವಾ ಕಡಲೆ ಬೀಜವನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ. ಯಾಕೆಂದರೆ ಬಾದಾಮಿಯಲ್ಲಿ ಇರುವ ನ್ಯುಟ್ರೀಷಿಯನ್ ಅಂಶ ಈ ಕಡಲೆ ಕಾಯಿಯಲ್ಲಿ ಅಡಗಿದೆ. ಇದರಲ್ಲಿ ಪ್ರೊಟೀನ್ ವಿಟಮಿನ್ಸ್ ಇ ವಿಟಮಿನ್ಸ್ ಬಿ ಸಿ ಮತ್ತು ಫೈಬರ್ ಪೊಟ್ಯಾಷಿಯಂ ಮೆಗ್ನಿಸಿಯುಂ ಐರನ್ ಕ್ಯಾಲ್ಸಿಯಂ ಜಿಂಕ್ ಮತ್ತು ಒಳ್ಳೆಯ ಆರೋಗ್ಯಕರ ಫ್ಯಾಟ್ ಆಗಿರುವ ಸ್ಯಾಚುರೆಟೆಡ್ ಅಂಶ ಇರುತ್ತದೆ. ಈ ಎಲ್ಲ ಪೌಷ್ಟಿಕಾಂಶಗಳು ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಕಡಲೆ ಕಾಯಿಯ ಆರೋಗ್ಯ ಮಹತ್ವ ಏನೆಂದರೆ ಇದರಲ್ಲಿ ಇರುವ ಐರನ್ ಅಂಶ ರಕ್ತ ಹೀನತೆ ಕಾಯಿಲೆಯನ್ನು ಗುಣ ಪಡಿಸುತ್ತದೆ. ಮತ್ತು ದೇಹದಲ್ಲಿ ಹಿಮೋ ಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶೇಂಗಾದ ಸಿಪ್ಪೆಯಲ್ಲಿ ಇರುವ ಒಮೆಗಾ ಸಿಕ್ಸ್ ಪ್ಯಾಕ್ ಆಸಿಡ್ ಗಳು ಮತ್ತು ವಿಟಮಿನ್ ಇ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಇದು ಆಂಟಿ ಏಜಿಂಗ್ ಥರವಾಗಿ

ಕೆಲಸವನ್ನು ಮಾಡುತ್ತದೆ. ಮತ್ತು ದೇಹದಲ್ಲಿ ಇರುವ ಫ್ರೀ ರಾಡಿಕಲ್ಸ್ ಅನ್ನು ಕಡಿಮೆ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಶೇಂಗಾ ಬೀಜವು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುವುದರಿಂದ ಚರ್ಮದ ಕೊಲಾಜಿನ್ ಪ್ರೊಡಕ್ಷನ್ ಅನ್ನು ಅಭಿವೃದ್ದಿ ಮಾಡುತ್ತದೆ. ಈ ಕಡಲೆ ಕಾಯಿಯಲ್ಲಿ ಇರುವ ಫೈಬರ್ ಅಂಶ ಮಲಬದ್ಧತೆ ಕಾಯಿಯೆಯನ್ನು ನಿವಾರಣೆ ಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಚೆನ್ನಾಗಿ ಜೀರ್ಣಾಕ್ರಿಯೆ ಆಗಲು ಸಹಾಯ ಮಾಡುತ್ತದೆ. ಕಡಲೆ ಕಾಯಿಯಲ್ಲಿ ಇರುವ ಮ್ಯಾಂಗ್ನಿಷಿಯಂ ಅಂಶ ಬ್ಲಡ್ ಪ್ರೆಷರ್ ಅನ್ನು ಕಡಿಮೆ ಮಾಡುತ್ತದೆ. ಶೇಂಗಾ ಬೀಜವನ್ನು ಬ್ರೈನ್ ಫುಡ್ ಎಂದು ಕರೆಯುತ್ತಾರೆ. ಏಕೆಂದರೆ ಇದು ಮೆದುಳಿನ ಚಟುವಟಿಕೆಗಳನ್ನೂ ಆರೋಗ್ಯವಾಗಿ ನಡೆಸಲು ಸಹಾಯ ಮಾಡುತ್ತದೆ. ಕಡಲೆ ಬೀಜದಲ್ಲಿ ಮೊನೊ ಮತ್ತು ಪೋಲೊ ಅನ್ ಸ್ಯಾಚುರಟೆಡ್ ಅಂಶ ಆರೋಗ್ಯಕರ ಫ್ಯಾಟ್ ಇರುತ್ತದೆ. ಇದು ನಮ್ಮ ದೇಹದಲ್ಲಿ ಇರುವ ಕೆಟ್ಟ ಕೊಬ್ಬು ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿ

ಆರೋಗ್ಯವಾಗಿ ಕೊಬ್ಬನ್ನು ಹೆಚ್ಚಿಸುತ್ತದೆ. ತೂಕವನ್ನು ಕಡಿಮೆ ಮಾಡಲು ಶೇಂಗಾ ಬೀಜವು ಒಳ್ಳೆಯ ಸ್ನ್ಯಾಕ್ಸ್ ಅಂತ ಹೇಳಲಾಗುತ್ತದೆ. ಇದರಲ್ಲಿ ಸ್ಯಾಚುರೇಟೆಡ್ ಅಂಶ ತುಂಬಾ ಕಡಿಮೆ ಇರುವುದರಿಂದ ದೇಹದಲ್ಲಿ ಫ್ಯಾಟ್ ತುಂಬಿಕೊಳ್ಳುವುದಿಲ್ಲ. ಶೆಂಗದಲ್ಲಿ ವಿಟಮಿನ್ಸ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಇದು ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಈ ಕಡಲೆ ಕಾಯಿಯಲ್ಲಿ ಇರುವ ಜಿಂಕ್ ಖನಿಜಾಂಶ ತಲೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಕಡಲೆ ಕಾಯಿಯಲ್ಲಿ ಇರುವ ಫ್ಯಾಟ್ ಅಂಶ ಹೃದಯ ಬಡಿತ ಸಮಸ್ಯೆಯನ್ನು ದೂರ ಮಾಡುತ್ತದೆ. ಮತ್ತು ಗರ್ಭಿಣಿಯರಿಗೆ ಮತ್ತು ಹುಟ್ಟುವ ಮಗುವಿಗೆ ಶೇಂಗಾ ಬೀಜವು ತುಂಬಾ ಲಾಭದಾಯಕವಾಗಿದೆ. ಕಡಲೆ ಕಾಯಿ ಶಕ್ತಿಯುತವಾಗಿ ದೇಹದಲ್ಲಿ ಕೆಲಸ ಮಾಡುತ್ತದೆ. ಈ ಕಡಲೆ ಕಾಯಿಯನ್ನು ಸತತವಾಗಿ ಸೇವಿಸುತ್ತಿದ್ದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಡಲೆ ಕಾಯಿಯನ್ನು ಎಣ್ಣೆಯಲ್ಲಿ ಹುರಿದು ತಿನ್ನಬಾರದು ಆದಷ್ಟು ಹಾಗೆಯೇ ತಿನ್ನಬೇಕು. ಎಣ್ಣೆಯಲ್ಲಿ ಹುರಿದು ತಿಂದರೆ ಬೇಗನೇ ದೇಹಕ್ಕೆ ಲಾಭಗಗಳು ಸಿಗುವುದಿಲ್ಲ.

LEAVE A REPLY

Please enter your comment!
Please enter your name here