ಶ್ರೀಮಂತರ ಹಣ ಕಿತ್ತುಕೊಂಡು ಬಡವರಿಗೆ ಹಂಚುತ್ತಾ ಇರೋ ಜಪಾನ್ ಕಳ್ಳರು

68

ದರೊಡೆಕೋರರ ಗುಂಪೊಂದು ಸಮಾಜ ಸೇವೆ ಮಾಡುತ್ತಿರುವುದು ಜಪಾನಿನಲ್ಲಿ ವಿಶೇಷವಾಗಿದೆ. ನಮಗೆ ಭದ್ರತೆ ಒದಗಿಸುವ ಪೊಲೀಸ್ ವಿಭಾಗ ಎಷ್ಟೇ ಬಲಗೊಂಡರು ಅದಕ್ಕಿಂತಲೂ ಬುದ್ಧಿವಂತರಾಗಿ ಕಳ್ಳರು ಖದೀಮರು ಬೆಳೆಯುತ್ತಾನೆ ಇರುತ್ತಾರೆ ಜಪಾನ್ ನಲ್ಲಿ ಎಕೋಜಾ ಎನ್ನುವ ಗುಂಪು ಇದೆ ಇದು ತುಂಬಾ ಅಪಾಯಕಾರಿ ಮತ್ತು ರಹಷ್ಯವಾಗಿ ಕೆಲಸ ಮಾಡುತ್ತದೆ ಇದರ ರಹಸ್ಯಮಯ ವಿಷಯವನ್ನು ಈಗ ತಿಳಿಯೋಣ. ಈ ಎಕೋಜಾ ಗುಂಪಿನವರು ಜಪಾನಿನ ಅತ್ಯಂತ ಹಿಂದುಳಿದ ವರ್ಗ ಬುರಾಕುಮಿನ್ ಎಂಬ ಜಾತಿಯವರು 19ನೇ ಶತಮಾನದಲ್ಲಿ ಇವರಿಗೆ ಸಮಾಜದಲ್ಲಿ ಯಾವುದೇ ಗೌರವ ಸೌಲಭ್ಯಗಳು ಇದ್ದಿಲ್ಲ ಇವರನ್ನು ತುಚ್ಯವಾಗಿ ನೋಡುತ್ತಿದ್ದರು ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿರಲಿಲ್ಲ ಯಾರು ಗುರುತಿಸದ ಒಂದು ಬಡ ಹಿಂದುಳಿದ ಜನಾಂಗವಾಗಿ ಬೆಳೆದಿದ್ದರು.

ಇವರು ಕಳ್ಳತನ ಮಾಡಿ ಆ ಸಾಮಗ್ರಿಗಳನ್ನು ಜಾತ್ರೆಯಲ್ಲಿ ಮಾರತೊಡಗಿದರು ಕಾನೂನು ಬಾಹಿರ ಜುಗಾರಿ ಅಡ್ಡೆಗಳನ್ನು ತೆರೆಯಿತು. ಈಗ ಸಣ್ಣ ಪುಟ್ಟ ಕೃತ್ಯಗಳಲ್ಲಿ ಬಾಗಿಯಾಗುತ್ತಿದ್ದ ಈ ಜನರು ದೊಡ್ಡ ದೊಡ್ಡ ಕಾನೂನು ಬಾಹಿರ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇವರು ತಮ್ಮ ತಂಡವನ್ನು ಎಕೋಜಾ ಎಂದು ಕರೆಯುತ್ತಾರೆ. ಹಾಗೇನೇ ಈ ತಂಡ ಅಪಹರಣ ಡ್ರಗ್ಸ್ ನಂತಹ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ ಇದರಿಂದ ಈ ಎಕೋಜ ತಂಡ ತನ್ನ ಪ್ರಭಾವವನ್ನು ಸರ್ಕಾರದ ಮೇಲು ಬಿರಲು ಪ್ರಾರಂಭಿಸುತ್ತವೆ. ಇದರಿಂದ ಸರ್ಕಾರಕ್ಕೂ ಕೂಡ ಇವರ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಈ ಗುಂಪಿನ ಕೆಲವು ರಹಷ್ಯ ವಿಷಯಗಳು ಹೀಗಿವೆ. ಈ ಗುಂಪಿಗೆ ಎಕೋಜಾ ಎಂದು ನಾಮಕರಣ ಮಾಡಿದ ನಂತರ ಈ ಗುಂಪಿಗೆ ಸೇರುವ ಬುರಾಕುಮಿನ್ ಜನಾಂಗದವರಿಗೆ ಹಲವು ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ ಇದಕ್ಕೆ ಸೇರುವ ಸದಸ್ಯನಿಗೆ ಕೋಬುನ್ ಎನ್ನುವ ಟ್ಯಾಗ್ ನೀಡಿಸಲಾಗುತ್ತದೆ. ಕೋಬುನ್ ಎಂದರೆ ಮಗು ಎಂದರ್ಥ ಈ ಗುಂಪಿನ ನಾಯಕನ ಜೊತೆ ಈ ಕೋಬುನ ಗೆ ಜಪಾನಿನ ಸಾಕಿ ಎನ್ನುವ ಮದ್ಯವನ್ನು ಕುಡಿಯಬೇಕಾಗುತ್ತದೆ. ಈ ನಾಯಕನನ್ನು ಒಯಬುನ ಎಂದು ಕರೆಯಲಾಗುತ್ತದೆ ಈ ಒಯಬುನ ಜೊತೆ ಮದ್ಯ ಕುಡಿಯುವಾಗಲು ಕೋಬುನ ಹಲವು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ 2 ಲೋಟದಲ್ಲಿ ಸಾರಾಯಿಯನ್ನು ಸುರಿಯಲಾಗುತ್ತದೆ ಇಲ್ಲಿ ನಾಯಕನ ಲೋಟಕ್ಕೆ ಹೆಚ್ಚು ಸಾರಾಯಿಯನ್ನು ಸುರಿಯಲಾಗುತ್ತದೆ ಮತ್ತು ಕೋಬುನ ಮಣ್ಣಿನ ಲೋಟದಲ್ಲಿ ಕಡಿಮೆ ಸಾರಾಯಿ ಸುರಿಯಲಾಗುತ್ತದೆ.

ಇದನ್ನು ಇಬ್ಬರು ಒಟ್ಟಿಗೆ ಕುಡಿದ ನಂತರ ಆವ್ಯಕ್ತಿ ಅಂದರೆ ಕೋಬುನ ಎಕುಜಾ ಗುಂಪಿನ ಅಧಿಕೃತ ಸದಸ್ಯನಾಗುತ್ತಾನೆ. ಇದರ ನಂತರ ಹಲವಾರು ಪದ್ಧತಿಗಳನ್ನು ಆ ಸದಸ್ಯ ನಡೆಸಿಕೊಡಬೇಕು. ಈ ಸದಸ್ಯ ತನ್ನ ದೇಹವಿಡಿ ಮಚ್ಚೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಈ ಮಚ್ಚೆಗಳನ್ನು ಸೂಜಿಯಿಂದ ಮಾಡಲಾಗುತ್ತದೆ ಅಂದರೆ ಇಲ್ಲಿ ಆತ ತುಂಬಾ ನೋವನ್ನು ಸಹಿಸಿಕೊಳ್ಳಬೇಕು. ಈ ಸದಸ್ಯ ಏನಾದರೂ ತಪ್ಪು ಮಾಡಿದರೆ ಆತನ ಒಂದು ಬೆರಳನ್ನು ಎಕೋಜಾ ನಾಯಕನಿಗೆ ನೀಡಬೇಕು ಹೀಗೆ ಪ್ರತಿಯೊಂದು ತಪ್ಪಿಗೂ ಆತ ಒಂದೊಂದು ಬೆರಳುಗಳನ್ನು ಕತ್ತರಿಸಿ ಕೊಡಬೇಕು. ಎಕುಜಾ ಗುಂಪಿನವರು ಹೆಚ್ಚಾಗಿ ಈ ವೈಟ್ ಕಾಲರ್ ಕ್ರೈಮ್ ಗಳಲ್ಲಿ ಭಾಗಿಯಾಗುತ್ತಾರೆ. ಇವರು ದೊಡ್ಡ ದೊಡ್ಡ ಕಂಪನಿಗಳ ಷೇರುಗಳನ್ನು ಖರೀದಿಸುತ್ತಾರೆ ಕಂಪನಿಗಳ ಮೇಲೆ ಪ್ರಭುತ್ವ ಸಾಧಿಸುವವರೆಗೂ ಖರೀದಿಸುತ್ತಾರೆ.

ನಂತರ ಉಳಿದ ಕಂಪನಿಗಳನ್ನು ಬೆದರಿಸಿ ಅವರಿಗಾಗಿ ಕೆಲಸ ಮಾಡುವಂತೆ ಮಾಡುತ್ತಾರೆ ಜಪಾನ್ ನ ಹುಮನ್ ಟ್ರಾಪಿಕಿಂಗ್ ನಲ್ಲಿಯೂ ಎಕೋಜಾ ಗುಂಪಿನದೆ ಪ್ರಭುತ್ವವಿದೆ ಅಲ್ಲದೆ ಇವರು ಇಲ್ಲೀಗಲ್ ಡ್ರಗ್ಸ್ ನಂತಹ ದಂದೇ ಮುಕಾಂತರ ಇಡೀ ಜಪಾನ್ನಲ್ಲಿ ತನ್ನ ಕರಾಳ ಮುಖದಿಂದ ಪರಿಚಿತರಾಗುತ್ತಾರೆ ಮತ್ತು ಅವರನ್ನು ತಡೆಯುವುದು ಕಷ್ಟವಾಗುತ್ತದೆ. ಎಕೋಜಾ ಗುಂಪಿನಿಂದ ಬೇಸತ್ತ ಜಪಾನ ಸರ್ಕಾರ 2007 ರಲ್ಲಿ ಎಕೋಜಾ ಗುಂಪಿನ ನಿಯಂತ್ರಣಕ್ಕಾಗಿ ಕಾನೂನುಗಳನ್ನು ರಚಿಸುತ್ತದೆ ಈ ಕಾನೂನಿನ ಕೆಲಸ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಈ ಗುಂಪಿನ ಪ್ರಭಾವ ಇಲ್ಲದಂತೆ ಮಾಡುವುದು ನಂತರ ಈ ಗುಂಪಿನ ಪ್ರಭಾವ ಕಡಿಮೆಯಾಗಿ ಈಗ ಶ್ರೀಮಂತರನ್ನು ಮಾತ್ರ ಸುಲಿಗೆ ಮಾಡಲು ಪ್ರಾರಂಭಿಸುತ್ತದೆ. ತನ್ನ ಪ್ರಭಾವ ಉಳಿಸಿಕೊಳ್ಳಲು ಸಮಾಜಸೇವೆ ಕೆಲಸಗಳನ್ನು ಮಾಡುತ್ತದೆ 2011 ರಲ್ಲಿ ಜಪಾನಿನಲ್ಲಿ ಸುನಾಮಿ ಬಂದಾಗ ಎಕೋಜಾ ಗುಂಪಿನ ಸದಸ್ಯರು ಸರ್ಕಾರಕ್ಕೂ ಮೊದಲೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಇದರಿಂದ ಸಮಾಜದಲ್ಲಿ ತಮ್ಮ ಹಿಡಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ ಬಡವರ ಪಾಲಿಗೆ ದೇವರಂತೆ ಇದ್ದಾರೆ.

LEAVE A REPLY

Please enter your comment!
Please enter your name here