ಸಾಲು ಮರದ ತಿಮ್ಮಕ್ಕ ಬೆಳೆಸಿದ ಮರಗಳ ಒಟ್ಟು ಮೌಲ್ಯ ಗೊತ್ತಾದ್ರೆ

77

ಸಾಲು ಮರದ ತಿಮ್ಮಕ್ಕ ಬೆಳೆಸಿದ ಒಟ್ಟು ಮರಗಳ ಬೆಲೆ ಈಗ ಇಷ್ಟು ಲಕ್ಷಗಳು. ಸಾಲು ಮರದ ತಿಮ್ಮಕ್ಕ ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ ತಮಗೆ ಮಕ್ಕಳು ಇಲ್ಲ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳು ಎಂದು ಬೆಳೆಸಿದ ಓರ್ವ ಅನಕ್ಷರಸ್ಥ ಮಹಿಳೆ, ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿರುವ ಇವರಿಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿದೆ ಇವರ ಜೀವನದ ಬಗ್ಗೆ ತಿಳಿಯಬೇಕು ಎಂದರೆ ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ಇವರ ತಂದೆ ಚಿಕ್ಕ ರಂಗಯ್ಯ ತಾಯಿ ವಿಜಯಮ್ಮ ಪತಿ ಚಿಕ್ಕಯ್ಯ ಇಬ್ಬರು ಅನಕ್ಷರಸ್ಥ ಆಗಿದ್ದು ಇವರಿಗೆ ಮಕ್ಕಳು ಇರಲಿಲ್ಲ ಇವರು ತಮಗೆ ಮಕ್ಕಳು ಇರದ ದುಃಖವನ್ನು ಮರೆಯಲು ಆಲದ ಮರವನ್ನು ನೆಡಲು ಆರಂಭಿಸಿದರು ಎಂದು ಹೇಳಲಾಗಿದೆ.

ಕುದೂರುನಿಂದ ಹುಲಿಕಲ್ ವರೆಗೆ ಇರುವ ರಾಜ್ಯ ಹೆದ್ದಾರಿ 94 ರಲ್ಲೀ ತಿಮ್ಮಕ್ಕ ಬೆಳೆಸಿದ ಆಲದ ಮರಗಳು ಮೊದಲನೇ ವರ್ಷದಲ್ಲಿ 80 ಸಸಿಗಳನ್ನು ಕುದೂರು ಹಳ್ಳಿಯ ಬಳಿ ನಾಲ್ಕು ಕಿಮೀ ಉದ್ದಳತೆಯ ದೂರ ನಡೆಸಲಾಗಿತ್ತು ಹಾಗೆಯೇ ಎರಡನೇ ವರ್ಷ 140 ಮತ್ತು ಮೂರನೆಯ ವರ್ಷ 180 ಸಸಿಗಳನ್ನು ನೆಟ್ಟರು ಸಸಿಗಳಿಗೆ ನೀರಿನ ಅವಶ್ಯಕತೆ ಹೆಚ್ಚು ಇರುವುದರಿಂದ ನೀರು ಉಣಿಸಲು ಬಿಂದಿಗೆ ಕೊಳಗಳಲ್ಲಿ ನೀರನ್ನು ನಾಲ್ಕು ಕಿಮೀ ದೂರ ಸಾಗಿಸುತ್ತಾ ಇದ್ದರು ಒಟ್ಟಾರೆ ಲೆಕ್ಕ ಇಲ್ಲದಷ್ಟು ಸಸಿಗಳನ್ನು ನೆಡಲಾಗಿದೆ ಇಂದಿನ ಅವುಗಳ ಮೌಲ್ಯ 8 ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ತಮ್ಮ ಸಾಧನೆಗಾಗಿ ತಿಮ್ಮಕ್ಕ ಗೆ ಸನ್ಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಗಿದೆ ಅವು ಯಾವುವು ಎಂದರೆ ರಾಷ್ಟ್ರೀಯ ಪೌರ ಪ್ರಶಸ್ತಿ 1995 ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ವೀರ ಚಕ್ರ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿವೆ.

ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ ಗಾಡ್ ಫ್ರೀ ಫಿಲಿಪ್ಸ್ ಧೀರತ ಪ್ರಶಸ್ತಿ ಪಂಪಾಪತಿ ಪರಿಸರ ಪ್ರಶಸ್ತಿ ಬಾಬಾ ಸಾಹೇಬ್ ಅಂಬೇಡ್ಕರ ಪ್ರಶಸ್ತಿ ವನಮಾತೆ ಪ್ರಶಸ್ತಿ ಶ್ರೀಮಾತ ಪ್ರಶಸ್ತಿ ಕರ್ನಾಟಕ ಪರಿಸರ ಪ್ರಶಸ್ತಿ ಮಹಿಳಾ ರತ್ನ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ ನಾಡೋಜ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇಂದು ಹಲವಾರು ಕಾಡು ಬೆಳೆಸುವ ಕಾರ್ಯಕ್ರಮ ಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸುತ್ತಾರೆ. ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗೆ ಮಳೆ ನೀರನ್ನು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣವು ಸೇರಿದಂತೆ ಇವರು ಇತರೆ ಸಮಾಜ ಸೇವೆ ಕೆಲಸಗಳಲ್ಲಿ ತೊಡಗಿದ್ದಾರೆ. ನೋಡಿದಿರ ಸ್ನೇಹಿತರೆ ತಿಮ್ಮಕ್ಕ ಅವರ ರೀತಿ ನಾವು ಪರಿಸರ ಸಂರಕ್ಷಣೆ ಮಾಡೋಣ ಮನೆಗೆ ಒಂದು ಮಗು ಎಂಬಂತೆ ಮನೆಗೆ ಒಂದು ಮರ ಎಂಬಂತೆ ಎಲ್ಲರೂ ಮರ ಬೆಳೆಸಿ ನಮ್ಮ ಪರಿಸರ ಮತ್ತು ಭೂಮಿಯನ್ನು ಕಾಪಾಡೋಣ. ಈ ಮಾಹಿತಿ ಇಷ್ಟ ಆಗಿದ್ದರೆ ತಪ್ಪದೆ ಎಲ್ಲರಿಗೂ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here