ಸೀಬೆ ಎಲೆಗಳಿಂದ ಕೂದಲು ಉದುರುವುದನ್ನು ತಡೆಯಿರಿ

35

ಸೀಬೆ ಎಲೆಗಳಿಂದ ಹೀಗೆ ಮಾಡಿ ಕೂದಲು ಉದುರುವುದನ್ನು ತಡೆಯಿರಿ. ನಮಸ್ಕಾರ ಪ್ರಿಯ ಓದುಗರೇ ಮನುಷ್ಯನಿಗೆ ಇಂದು ಒಂದಲ್ಲ ಒಂದು ಅಂತ ಸಣ್ಣ ಪುಟ್ಟ ಕಾಯಿಲೆಗಳು ಅಥವಾ ಏನೇ ಒಂದು ತೊಂದರೆ ಕೂಡ ಇದ್ದೆ ಇರುತ್ತದೆ ನಿಜ ಹೇಳಬೇಕೆಂದರೆ ಇವತ್ತಿನ ದಿನಮಾನಗಳಲ್ಲಿ ಯಾವ ಒಬ್ಬ ವ್ಯಕ್ತಿಗೂ ಕೂಡ ಇಂತಹ ಒಂದು ಸಮಸ್ಯೆ ಇಲ್ಲ ಅಂತ ಹೇಳೋದು ತುಂಬಾನೇ ಕಷ್ಟ ಸಾಧ್ಯ ಏಕೆಂದರೆ ದಿನನಿತ್ಯದ ನಮ್ಮ ಬದುಕು ಕೂಡ ಹಾಗೆ ಇದೆ ಈ ಒಂದು ಒತ್ತಡದ ಬದುಕನ್ನು ಸಾಗಿಸುವಲ್ಲಿ ಮನುಷ್ಯ ತುಂಬಾನೇ ಹೆಣಗಾಡ ಬೇಕಾಗಿದೆ ಹೇಗೋ ಈ ಜೀವನವನ್ನು ಸರಿ ದುಗಿಸಿಕೊಂಡು ಹೋಗಬೇಕು ಹಾಗಾಗಿ ಮಾಲಿನ್ಯ ಭರಿತ ವಾತಾವರಣ ಕಲುಷಿತ ಆಹಾರ ಪದ್ಧತಿ ಜೊತೆಗೆ ಮಾಲಿನ್ಯತೆಯಿಂದ ಕುಡಿದ ನಾವು ಸೇವಿಸುವುಂತಹ ಗಾಳಿ ಕೂಡ ನಮಗೆ ಈಗ ಉಸಿರು ಗಟ್ಟಿಸುವ ಹಾಗೆ ಪರಿಣಮಿಸುತ್ತಿದೆ ಇದಕ್ಕೆಲ್ಲ ಮೂಲ ಕಾರಣ ನಾವೇ ಪ್ಲಾಸ್ಟಿಕ್ ಬಳಕೆ ಆಗಿರಬಹುದು ಅಥವಾ ಬಳಸುವ ಆಹಾರ ಕ್ರಮವಾಗಿರಬಹುದು

ಹೀಗೆ ಪ್ರತಿಯೊಂದು ಕೂಡ ಮನುಷ್ಯನನ್ನು ತೊಂದರೆಗೆ ಇಡು ಮಾಡುತ್ತಿದೆ. ಹೀಗಿರುವಾಗ ಮನುಷ್ಯನಿಗೆ ಕ್ಯಾನ್ಸರ್ ಸಕ್ಕರೆಕಾಯಿಲೆ ರಕ್ತದೊತ್ತಡ ಹೀಗೆ ಅನೇಕ ಕಾಯಿಲೆಗಳ ಜೊತೆಗೆ ಈ ಕೂದಲು ಉದುರುವುದು ಕೂಡ ಒಂದು ಎಲ್ಲದಕ್ಕಿಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಹಾಗಾದರೆ ಈ ಕೂದಲು ಉದುರುವ ಸಮಸ್ಯೆಗೆ ಬೇರೆ ಚಿಕಿತ್ಸೆ ಪಡೆಯುವ ಬದಲು ನಾವೇ ನಮ್ಮ ಸುತ್ತ ಮುತ್ತ ಸಿಗುವಂತಹ ವನ ಮೂಲಿಕೆಯಿಂದ ಮನೆ ಮದ್ದನ್ನು ತಯಾರಿಸಿಕೊಂಡು ಅದರಿಂದ ಮುಕ್ತಿ ಹೊಂದಬಹುದು ಹಾಗಾದರೆ ಅದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಅತ್ಯಧಿಕ ಪೋಷಕಾಂಶ ಹೊಂದಿರುವ ಸೀಬೆ ಹಣ್ಣಿನ ಎಲೆಗಳು ಕೂದಲಿಗೆ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತವೆ ಕೂದಲು ಉದುರುವುದನ್ನು ನಿವಾರಿಸುವುದರ ಜೊತೆಗೆ ಕೂದಲು ಇನ್ನು ಹೆಚ್ಚಾಗಿ ಬೆಳೆಯಲು ಸಹಾಯ ಮಾಡುತ್ತದೆ ಇದಕ್ಕೆ ಕಾರಣ ಅವಶ್ಯಕವಾದ ಪೋಷಕಾಂಶಗಳು ಸಿಬೆ ಎಲೆಯಲ್ಲಿ ಇರುವುದಾಗಿದೆ

ಇದರಲ್ಲಿ ಮುಖ್ಯವಾಗಿ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೂದಲಿನ ಮೇಲೆ ಪ್ರಭಾವ ಬೀರುತ್ತದೆ ವಿಟಮಿನ್ ಬಿ5 ಬಿ6 ಬಿ3 ಚರ್ಮದಲ್ಲಿ ಟೀಶ್ಯೂಸ್ ಸುಧಾರಿಸಲು ಕಾರಣವಾಗುತ್ತದೆ. ವಿಟಮಿನ್ ಬಿ2 ಚರ್ಮದಲ್ಲಿ ಮೃತ ಕಣಗಳನ್ನು ನಿವಾರಿಸುವುದರ ಜೊತೆಗೆ ಸುಧಾರಿತ ಕಣಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ಒಂದು ಎಲೆಗಳ ರಸವನ್ನು ತಯಾರಿಸುವ ವಿಧಾನ ನಿಮಗೆ ಬೇಕಾದಷ್ಟು ಸೀಬೆ ಎಲೆಗಳನ್ನು ತೊಳೆದು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬೇಕು ನಂತರ ಆ ನೀರು ತಣ್ಣಗಾದ ಮೇಲೆ ಆ ನೀರನ್ನು ತಲೆಯ ಮೇಲೆ ನಿಧಾನವಾಗಿ ಹಾಕುತ್ತ ಕೈಬೆರಳುಗಳಿಂದ ಆ ನೀರು ಕೂದಲಿನ ಬುಡಕ್ಕೆ ತಾಗುವಂತೆ ನಿಧಾನವಾಗಿ ಉಜ್ಜುತ್ತಿರಬೇಕು ಹೀಗೆ ಮಾಡಿದ ಮೇಲೆ ಒಂದು ಗಂಟೆಯ ನಂತರ ತಲೆ ಸ್ನಾನ ಮಾಡಬೇಕು ನಿರಂತರವಾಗಿ ಒಂದು ತಿಂಗಳ ಕಾಲ ಹೀಗೆ ಮಾಡುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ನಿವಾರಣೆಯಾಗುತ್ತದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here