ಸಾಮಾನ್ಯವಾಗಿ ನಮ್ಮ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಅದು ಕೂದಲುದುರುವ ಸಮಸ್ಯೆ. ಕೂದಲಿನ ಬಗ್ಗೆ ಪ್ರತಿ ಮಹಿಳೆಯರು ಹೆಚ್ಚಾಗಿ ಬಯಸುವುದು ತಮಗೆ ಉದ್ದವಾದ ದಟ್ಟವಾದ ಹೊಳಪಾದ ಕೂದಲು ಬೇಕೆಂದು ಅಂಗಡಿಗಳಲ್ಲಿ ಸಿಗುವ ರಾಸಾಯನಿಕ ಯುಕ್ತ ಶ್ಯಾಂಪು ಎಣ್ಣೆ ಇತ್ಯಾದಿಗಳನ್ನು ಬಳಸುತ್ತಾರೆ. ಆದರೆ ಇದರಿಂದ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ನಿಮಗೆ ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯಬೇಕೆ. ಹಾಗಿದ್ದರೆ ಇದಕ್ಕಾಗಿ ನಮ್ಮ ಹತ್ತಿರದಲ್ಲಿಯೇ ಸಿಗುವಂತಹ ಸೀಬೆ ಹಣ್ಣಿನ ಗಿಡದ ಎಲೆಯಿಂದ ಉತ್ತಮ ಮನೆ ಮದ್ದನ್ನು ತಯಾರಿಸಬಹುದು. ಅದು ಹೇಗೆಂದು ತಿಳಿಯೋಣ. ಸೀಬೆ ಎಲೆಯನ್ನು ಎಲ್ಲರೂ ನೋಡಿರುತ್ತೀರಿ ಹಾಗು ಸಾಮನ್ಯವಾಗಿ ಎಲ್ಲಾ ಕಡೆಗಳಲ್ಲಿ ಸೀಬೆ ಹಣ್ಣಿನ ಗಿಡ ಇರುತ್ತದೆ. ಈಗ ನಾವು ಹೇಳುವ ರೀತಿ ಮಾಡಿದರೆ ನಿಮ್ಮ ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ.
ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಸೀಬೆ ಅಥವಾ ಪೇರಳೆ ಹಣ್ಣಿನ ಗಿಡದ ಎಲೆ. ಇದರ ಹತ್ತರಿಂದ ಹದಿನೈದು ಎಲೆಗಳನ್ನು ತೆಗೆದುಕೊಂಡು ಅವುಗಳಿಗೆ ಸ್ವಲ್ಪ ನೀರು ಹಾಕಿ ಒಂದು ಪಾತ್ರೆಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಚೆನ್ನಾಗಿ ಕುದಿಸಿದ ನಂತರ ತಣ್ಣಗಾಗಲು ಬಿಡಬೇಕು. ಈ ನೀರಿನಿಂದ ತಲೆಯನ್ನು ತೊಳೆಯಬೇಕು. ನಂತರ ಕೂದಲು ಸ್ವಲ್ಪ ಒಣಗಿದ ಮೇಲೆ ನಿಮ್ಮ ಕೂದಲಿನ ಬುಡದಿಂದ ಇದನ್ನು ಚೆನ್ನಾಗಿ ಹಚ್ಚುತ್ತಾ ಸ್ವಲ್ಪ ಹೊತ್ತು ಮೃದುವಾಗಿ ಮಸಾಜ್ ಮಾಡುತ್ತಾ ಬರಬೇಕು. ಇಲ್ಲಿ ನೆನಪಿಡಬೇಕಾದ ವಿಷಯವೇನೆಂದರೆ ಯಾವುದೇ ಕಾರಣಕ್ಕೂ ಕೂದಲನ್ನು ತುಂಬಾ ಬಿಸಿ ನೀರಿನಿಂದ ತೊಳೆಯಬಾರದು. ನೀರು ಸ್ವಲ್ಪ ಉಗುರು ಬೆಚ್ಚಗೆ ಇದ್ದರೆ ಸಾಕು ಈ ನೀರನ್ನು ಬಳಸುವುದರಿಂದ ಕಂಡೀಷನರ್ ಬಳಸುವ ಅಗತ್ಯವಿಲ್ಲ. ಹಾಗೆಯೇ ಹೆಚ್ಚು ರಾಸಾಯನಿಕ ಯುಕ್ತ ಶ್ಯಾಂಪೂವನ್ನು ಬಳಸಬಾರದು. ಈ ನೀರಿನಿಂದ ಚೆನ್ನಾಗಿ ಮಸಾಜ್ ಮಾಡಿ ಹದಿನೈದು ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಶ್ಯಾಂಪು ಹಾಕದೆ ಕೂದಲನ್ನು ತೊಳೆಯಿರಿ.
ದಪ್ಪನೆಯ ಉದ್ದವಾದ ಕೂದಲು ಬೇಕೆಂದರೆ ಈ ರೀತಿ ನೀವು ವಾರದಲ್ಲಿ ಮೂರು ಬಾರಿ ತಪ್ಪದೇ ಮಾಡಬೇಕು. ಹೀಗೆ ಎರಡು ತಿಂಗಳುಗಳ ಸತತವಾಗಿ ಮಾಡಿದರೆ ನಿಮ್ಮ ಕೂದಲಿನಲ್ಲಾಗುವ ಬದಲಾವಣೆಯನ್ನು ಕಾಣಬಹುದು. ಹಾಗು ಸುಂದರವಾದ ನೀವು ಬಯಸಿದ ಕೂದಲು ನಿಮ್ಮದಾಗುತ್ತದೆ. ಹಾಗೆಯೇ ಇತ್ತೇಚೆಗೆ ಭಾರತದ ಪ್ರಖ್ಯಾತ ತಜ್ಞರೊಬ್ಬರು ಶಾಂಪೂ ಬಗ್ಗೆ ಸಂಶೋಧನೆ ನಡೆಸಿದ್ದಾರೆ ಇದರ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಶಾಂಪೂ ಬಳಕೆ ನಮ್ಮ ಕೂದಲಿಗೆ ಅಷ್ಟೇ ಅಲ್ಲದೆ ನಮ್ಮ ಚರ್ಮ ರೋಗಗಳಿಗೂ ಸಹ ಆಹ್ವಾನ ನೀಡಲಿದೆ ಎಂದು ತಿಳಿಸುತ್ತಾರೆ. ಹೀಗಿರುವ ಕಾರಣ ನಾವು ಪ್ರತಿ ನಿತ್ಯ ಶಾಂಪೂ ಬಳಕೆ ಮಾಡಿದ್ರೆ ಖಂಡಿತ ಅದರಿಂದ ಸಾಕಷ್ಟು ಬಾಧೆ ಅನುಭವಿಸುವ ಸಾಧ್ಯತೆ ಇರುತ್ತದೆ. ಈ ಒಂದು ಆರೋಗ್ಯಕರ ಮಾಹಿತಿ ಮರೆಯದೆ ಶೇರ್ ಮಾಡಿರಿ ಖಂಡಿತ ಎಲ್ಲರಿಗು ಸಹ ಸಹಾಯ ಆಗಲಿದೆ.