ಸೀಬೆ ಹಣ್ಣಿನ ಪ್ರತಿ ನಿತ್ಯ ಈ ಸಮಯದಲ್ಲಿ ತಿಂದರೆ ಹತ್ತಾರು ಲಾಭ

62

ಸೇಬುಹಣ್ಣಿ ನಷ್ಟೇ ಪೌಷ್ಟಿಕಾಂಶಗಳು ಈ ಒಂದು ಹಣ್ಣಿನಲ್ಲಿವೆ ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತ. ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳೆ ಹಣ್ಣು ಅಥವಾ ಚೆಪೆ ಕಾಯಿ ಅಂತ ಕರೆಯುತ್ತಾರೆ ಇದು ಕಾಯಿಲೆಗಳಿಗೆ ರಾಮಬಾಣ ವಿದ್ದಂತೆ ಸೇಬಿನ ಬದಲು ದಿನಕ್ಕೊಂದು ಸೀಬೆ ಹಣ್ಣನ್ನು ತಿಂದು ವೈದ್ಯರಿಂದ ದೂರವಿರಿ ಎಂದು ನಮ್ಮ ಹಿರಿಯರು ಆಗಿನಿಂದ ಹೇಳುತ್ತಾ ಬಂದಿದ್ದಾರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಈ ಹಣ್ಣು ಹೊಂದಿರುತ್ತದೆ. ತೆಳ್ಳಗೆ ಆಗಬೇಕು ಎನ್ನುವರು ನಿಮ್ಮ ಪತ್ಯದಲ್ಲಿ ಸೀಬೆಹಣ್ಣನ್ನು ತಿನ್ನಬಹುದು ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣು ದೇಹಕ್ಕೆ ವಿಟಮಿನ್ ಗಳ ಮಹಾಪುರವನ್ನೇ ಪೂರೈಸುತ್ತದೆ ಕೊಬ್ಬಿನಂಶದ ಪ್ರಮಾಣವನ್ನು ಕುಂಠಿತಗೊಳ್ಳುವಂತೆ ಮಾಡುತ್ತದೆ ಎನ್ನುತ್ತಾರೆ ಕೆಲವೊಂದು ಸಂಶೋಧನೆಗಳು.

ಕಿತ್ತಳೆ ಹಣ್ಣಿಗಿಂತ ಅತೀ ಹೆಚ್ಚು ವಿಟಮಿನ್ ಅಂಶಗಳನ್ನು ಹೊಂದಿರುವ ಈ ಹಣ್ಣಿನ ಸೇವನೆಯಿಂದ ಅಲ್ಜೆಮರ್ ಅರ್ಥಾರೈಟಿಸ್ ಹಾಗೂ ಕಣ್ಣಿನ ಪೊರೆಯುಂಟಾಗುವಂತಹ ಕಾಯಿಲೆಗಳನ್ನು ದೂರಮಾಡಿಕೊಳ್ಳಬಹುದು. ಇನ್ನು ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶ ದೇಹದಲ್ಲಿನ ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ ಅಷ್ಟೇ ಅಲ್ಲದೆ ಕ್ಯಾನ್ಸರ್ ಮತ್ತು ಹೃದಯದ ಕಾಯಿಲೆಗಳನ್ನು ದೂರಮಾಡುತ್ತದೆ. ಹಾಗೇನೇ ಕೆಲವೊಂದು ಸಂಶೋಧನೆಯ ಪ್ರಕಾರ ಮಧುಮೇಹ ಕಾಯಿಲೆಯಿಂದ ಬಳಲುವವರು ಸೀಬೆ ಹಣ್ಣನ್ನು ತಿನ್ನುವಾಗ ಅದರ ಮೇಲಿನ ಹಸಿರು ಸಿಪ್ಪೆಯನ್ನು ತೆಗೆದು ಸೇವಿಸಿದರೆ ಒಳ್ಳೆಯದು ಏಕೆಂದರೆ ಅದರಲ್ಲಿರುವ ಆತ್ಯಧಿಕ ಗ್ಲುಕೋಸ್ ಪ್ರಮಾಣ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ವಿಟಮಿನ್ ಎ ಬಿ ಸಿ ಮತ್ತು ಪೊಟ್ಯಾಷಿಯಂ ಅಂಶಗಳನ್ನು ಹೊಂದಿರುವ ಸೀಬೆಹಣ್ಣು ತ್ವಚೆಯ

ಕಾಂತಿಯನ್ನು ಹೆಚ್ಚಿಸುತ್ತದೆ ಅದಕ್ಕಾಗಿ ಸೀಬೆ ಎಲೆಗಳ ಪೇಸ್ಟ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ ತೆಳೆದರೆ ಜಿಡ್ಡಿನಂಶ ಮಾಯವಾಗಿ ಚರ್ಮ ಬಿಗಿಯಾಗಿ ಕಾಂತಿಯುತವಾಗಿ ಕಾಣುತ್ತದೆ ಅಂತ ಕೆಲವೊಂದು ಸೌಂದರ್ಯ ತಜ್ಞರು ಹೇಳಿದ್ದಾರೆ. ಈ ಸೀಬೆಹಣ್ಣಿನಲ್ಲಿರುವ ವಿಟಮಿನ್ ಬಿ6 ನಿಂದ ಮೆದುಳು ಚುರುಕಾಗುತ್ತದೆ ಓದುವ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಇದರಲ್ಲಿರುವ ಅಧಿಕ ನಾರಿನಂಶವು ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಜಾಸ್ತಿ ಆಗದಂತೆ ತಡೆಗಟ್ಟುತ್ತದೆ. ಕೆಲವರಿಗೆ ಸೀಬೆಹಣ್ಣಿನಿಂದ ಗಂಟಲಿನಲ್ಲಿ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ ಅಂತವರು ಸೀಬೆಹಣ್ಣಿಗೆ ಉಪ್ಪು ಬೆರೆಸಿ ಸೇವಿಸಬೇಕು ವಯಸ್ಸಾದವರು ಮತ್ತು ಹಲ್ಲಿನ ತೊಂದರೆ ಇರುವವರು ಸೀಬೆ ಹಣ್ಣಿನ ರಸವನ್ನು ಸೇವಿಸಬಹುದು ಸೀಬೆ ಹಣ್ಣಿನಿಂದ ಶೀತ ಮತ್ತು ನೆಗಡಿ ಉಂಟಾಗುವುದಿಲ್ಲ ಬದಲಿಗೆ ಶೀತ ಮತ್ತು ನೆಗಡಿಯನ್ನು ಉಂಟುಮಾಡುವ ಬ್ಯಾಕ್ಟೀರಿಯಾ ನಾಶ ಮಾಡುತ್ತದೆ

ಈ ಒಂದು ಸೀಬೆಹಣ್ಣು ಅಥವಾ ಚೆಪೆಹಣ್ಣು ಈ ಗುಣದಿಂದ ಇದನ್ನು ಅತಿಸಾರ ಮತ್ತು ವಾಂತಿಬೇದಿ ಇರುವ ಜನರು ಸೇವಿಸುವುದು ತುಂಬಾ ಉಪಯುಕ್ತವಾಗಿದೆ ಆದ್ದರಿಂದ ನಾವು ರಸ್ತೆ ಪಕ್ಕದಲ್ಲಿ ಮರುತ್ತಿರುವ ಈ ಹಣ್ಣನ್ನು ನೋಡಿಯು ನೋಡದ ಹಾಗೆ ಹೋಗುತ್ತೇವೆ ಆದರೆ ಕಡಿಮೆ ಬೆಲೆಯಲ್ಲಿ ಸಿಗುವ ಈ ಸೀಬೆಹಣ್ಣು ಸೇಬುಹಣ್ಣಿನಷ್ಟೇ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ಈಗ ಸೀಬೆಹಣ್ಣಿನ ಆರೋಗ್ಯಕರ ಅಂಶಗಳ ಬಗ್ಗೆ ತಿಳಿದ ಮೇಲೆ ಖಂಡಿತವಾಗಿಯೂ ಇನ್ನು ಮುಂದೆ ಸಿಬೆಹಣ್ಣು ತಿನ್ನಲು ಪ್ರಾರಂಭಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here