ಸೂರ್ಯನಿಂದ ಕಪ್ಪಾಗಿರುವ ತ್ವಚೆ ಬಣ್ಣವನ್ನು ಬದಲು ಮಾಡಲು ಸೂಕ್ತ ಮದ್ದು

54

ಇಂದಿನ ಲೇಖನದಲ್ಲಿ ಬಿಸಿಲಿನಲ್ಲಿ ನಿಮ್ಮ ಮುಖ ಕಪ್ಪಾದರೆ ಏನು ಮಾಡಬೇಕೆಂದು ತಿಳಿಸಿಕೊಡುತ್ತದೆ. ಕೆಲವರ ಮುಖದಲ್ಲಿ ಮೊಡವೆಗಳು ಕಪ್ಪು ಕಲೆಗಳು ಚುಕ್ಕೆಗಳು ತುಂಬಾನೇ ಹೆಚ್ಚಾಗಿ ಇರುತ್ತವೆ. ಅಂಥವರಿಗೆ ಇಲ್ಲಿದೆ ಸುಲಭವಾದ ಮನೆಮದ್ದು. ನಾವು ನೀಡುವ ಈ ಮನೆಮದ್ದು ಮನೆಯಲ್ಲಿ ಸಿಗುವ ಸುಲಭವಾದ ಪದಾರ್ಥಗಳಿಂದ ಸ್ನೇಹಿತರೇ ನಿಮಗೆ ಯಾವುದೇ ದುಡ್ಡು ವ್ಯಯ ಮಾಡುವ ಅವಶ್ಯಕತೆ ಬರುವುದಿಲ್ಲ. ನೀವು ಎಲ್ಲರೂ ಬಳಕೆ ಮಾಡಬಹುದು. ಬನ್ನಿ ಹಾಗಾದ್ರೆ ಪ್ರಾರಂಭಿಸೋಣ. ಈಗ ಒಂದು ಚಿಕ್ಕ ಬೌಲ್ ಅನ್ನು ತೆಗೆದುಕೊಳ್ಳಿ. ಒಂದು ಚಮಚದಷ್ಟು ಅಕ್ಕಿ ಹಿಟ್ಟು ಹಾಕಿಕೊಳ್ಳಬೇಕು. ನಂತ್ರ ಇದಕ್ಕೆ ಎರಡು ಚಿಟಿಕೆ ಅರಿಶಿನ ಪುಡಿಯನ್ನು ಹಾಕಿಕೊಳ್ಳಿ. ಆಮೇಲೆ ಇದಕ್ಕೆ ಮೊಸರು ಬೆರೆಸಿಕೊಳ್ಳಿ. ಒಂದು ವೇಳೆ ನಿಮ್ಗೆ ಪಿಗ್ಮೆಂಟೇಷನ್ ಅಥವಾ ಭಂಗು ಇದ್ದರೆ ನೀವು ಇದ್ರಲ್ಲಿ ಆಲೂಗಡ್ಡೆ ರಸವನ್ನು ಸೇರಿಸಿಕೊಳ್ಳಬಹುದು. ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೂ ಕೆಲವರಿಗೆ ಮೊಸರು ನಿಮ್ಮ ಚರ್ಮಕ್ಕೆ ಸರಿಯಾಗಿ ಹೊಂದಿಕೊಳ್ಳದಿದ್ದರೆ ನೀವು ಮೊಸರು ಬದಲಾಗಿ ನಿಂಬೆ ರಸ ಅಥವಾ ಟೊಮ್ಯಾಟೋ ರಸವನ್ನು ಬಳಕೆ ಮಾಡಿ. ಈಗ ಈ ಫೇಸ್ ಪ್ಯಾಕ್ ರೆಡಿ ಆಗಿದೆ. ಇನ್ನೂ ಇದನ್ನು ಹೇಗೆ ಅಪ್ಲೈ ಮಾಡಿಕೊಳ್ಳೋದು ಎಂದು ಹೇಳುವುದಾದರೆ ಮೊದಲನೆಯದು

ನೀವು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ಕ್ಲೀನ್ ಆಗಿ ಒರೆಸಿಕೊಳ್ಳಿ. ಆನಂತರ ಇದನ್ನು ಲೇಪಿಸಿ ಸ್ವಲ್ಪ ಹೊತ್ತು ಮಸಾಜ್ ಮಾಡಿಕೊಳ್ಳಬೇಕು. ಇದು ಹತ್ತು ನಿಮಿಷ ಚೆನ್ನಾಗಿ ಒಣಗಲು ಬಿಡಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮಸಾಜ್ ಮಾಡಿಕೊಳ್ಳುತ್ತಾ ತೊಳೆದುಕೊಳ್ಳಿ. ಇದ್ರಿಂದ ಡೆತ್ ಸ್ಕಿನ್ ಅನ್ನೋದು ಕಡಿಮೆಯಾಗುತ್ತದೆ. ಮೊಡವೆಗಳು ಕಣ್ಮರೆಯಾಗುತ್ತದೆ. ಸನ್ ಟ್ಯಾನ್ ಕಡಿಮೆಯಾಗುತ್ತದೆ. ಈ ಪ್ಯಾಕ್ ನಲ್ಲಿ ಬಳಸುವ ವಸ್ತುಗಳ ಮಹತ್ವ ಹೇಳುವುದಾದರೆ, ಅರಿಶಿಣ ಪುಡಿಯನ್ನು ಬಳಕೆ ಮಾಡಿದ್ದೇವೆ. ಇದು ಮೊಡವೆಗಳನ್ನು, ಕಲೆಗಳನ್ನು, ಸನ್ ಟ್ಯಾನ್ ಎಲ್ಲವನ್ನು ಕ್ರಮೇಣ ಕಡಿಮೆಯನ್ನಾಗಿಸುತ್ತದೆ. ಇನ್ನೂ ಕೆಲವರ ಪ್ರಶ್ನೆ ಇದಾಗಿರಬಹುದು. ಅರಿಶಿಣವನ್ನು ಬಳಕೆ ಮಾಡಿದರೆ ಮುಖ ಕಪ್ಪಾಗುತ್ತದೆ ಎಂದು ಹೌದು ಇದು ನಿಜ. ಯಾಕೆ ಕಪ್ಪಾಗುತ್ತದೆ ಎಂದರೆ ನೀವೂ ಫೇಸ್ ಪ್ಯಾಕ್ ಹಚ್ಚಿಕೊಂಡು ನೀವು ಅದನ್ನು ತೊಳೆಯದೆ ಬಿಸಿಲಿಗೆ ಹೋದರೆ ಮುಖ ಅನ್ನುವುದು ಕಪ್ಪಾಗುತ್ತದೆ. ಆದ್ದರಿಂದ ಮುಖವನ್ನು ನೀಟಾಗಿ ವಾಶ್ ಮಾಡಿಕೊಂಡು ಸನ್ ಸ್ಕ್ರೀನ್ ಹಚ್ಚುವುದರಿಂದ ಕಪ್ಪಾಗುವುದಿಲ್ಲ. ಇನ್ನೂ ಮೊಸರು ಮೊಸರು ಬಳಕೆ ಮಾಡುವುದರಿಂದ ಇದು ಬ್ಲೀಚಿಂಗ್ ರೀತಿಯಲ್ಲಿ ಸಹಾಯ ಮಾಡುತ್ತದೆ.

ಹಾಗೆ ಮೊಡವೆಗಳನ್ನು ನಿವಾರಿಸುತ್ತದೆ. ಅದರ ಜೊತೆಗೆ ಮುಖಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಮುಂದೆ ಇದ್ರಲ್ಲಿ ನಾವು ಅಕ್ಕಿ ಹಿಟ್ಟು ಉಪಯೋಗಿಸಿದ್ದೇವೆ ಅಲ್ವಾ ಸ್ನೇಹಿತರೇ ಅಕ್ಕಿ ಹಿಟ್ಟು ಒಳ್ಳೆಯ ಸ್ಕ್ರಬ್ ಅಂತಾನೆ ಹೇಳಬಹುದು. ಇದು ಭಂಗುಗಳನ್ನು ಕಡಿಮೆ ಮಾಡುತ್ತದೆ. ಮತ್ತು ಇನ್ಸ್ಟಂಟ್ ಫೇರ್ನೆಸ್ ನೀಡುತ್ತದೆ. ಈ ಪ್ಯಾಕ್ ಅನ್ನು ನೀವು ಮುಖಕ್ಕೆ ಮಾತ್ರವಲ್ಲದೆ ನಿಮ್ಮ ಕುತ್ತಿಗೆ ಕೈಗೆ ಕಾಲುಗಳಿಗೆ ಎಲ್ಲ ಭಾಗಗಳಿಗೂ ಹಚ್ಚಿಕೊಳ್ಳಬಹುದು.ಇದು ತುಂಬಾ ಚೆನ್ನಾಗಿ ಪರಿಣಾಮಕಾರಿಯಾಗಿ ಫಲಿತಾಂಶವನ್ನು ನೀಡುತ್ತದೆ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ಚೆನ್ನಾಗಿ ಮಾಡಿಕೊಳ್ಳಬೇಕು. ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ನಿಮ್ಮ ಚರ್ಮ ಹೊಳೆಯುತ್ತದೆ. ಹಾಗೂ ಸಾಫ್ಟ್ ಆಗುತ್ತದೆ. ಇದನ್ನು 18 ವರ್ಷ ಮೇಲ್ಪಟ್ಟ ಯುವಕರು ಮತ್ತು ಯುವತಿಯರು ಬಳಕೆ ಮಾಡಬಹುದು. ಹೊರತಾಗಿ ಮಕ್ಕಳಿಗೆ ಉಪಯೋಗಿಸಬೇಡಿ. ನಿಮಗೆ ಪೂರ್ತಿಯಾಗಿ ಸನ್ ಟ್ಯಾನ್ ನಿಂದ ಮುಕ್ತಿ ಪಡೆಯಬೇಕೆಂದರೆ ಈ ಫೇಸ್ ಪ್ಯಾಕ್ ಅನ್ನು ನಿತ್ಯವೂ ಬಳಕೆ ಮಾಡಿಕೊಳ್ಳಬಹುದು. ಅಥವಾ ವಾರದಲ್ಲಿ ಎರಡು ಮೂರು ಬಾರಿ ಬಳಕೆ ಮಾಡಿಕೊಳ್ಳಬಹುದು. ಈ ಮನೆಮದ್ದು ಒಂದು ಬಾರಿ ಬಳಕೆ ಮಾಡಿ ಖಂಡಿತವಾಗಿ ಫಲಿತಾಂಶ ದೊರೆಯುತ್ತದೆ.

LEAVE A REPLY

Please enter your comment!
Please enter your name here