ಸೊಂಟದ ಸುತ್ತ ಇರುವ ಕೊಬ್ಬನ್ನು ಕರಗಿಸಲು ಸುಲಭವಾದ ಮನೆಮದ್ದು

60

ಸೊಂಟದ ಸುತ್ತ ಇರುವ ಕೊಬ್ಬನ್ನು ಕರಗಿಸುವುದು ನಿಜವಾಗ್ಲೂ ಒಂದು ಕಷ್ಟದಾಯಕ ಕೆಲಸ. ಸೊಂಟದ ಸುತ್ತ ಇರುವ ಬೊಜ್ಜನ್ನು ಕರಗಿಸದೆ ಇದ್ದರೆ ಚಯಾಪಚಯ ಕ್ರಿಯೆಯ ತೊಂದರೆ ಉಂಟು ಮಾಡುತ್ತದೆ. ಮತ್ತು ಹೃದಯ ಸಂಭದಿಸಿದ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಕೊಬ್ಬನ್ನು ಕರಗಿಸಲು ಪ್ರತಿನಿತ್ಯವೂ ವ್ಯಾಯಾಮ ಮತ್ತು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ದೇಹದ ತೂಕವನ್ನು ಇಳಿಸುವುದರ ಜೊತೆಗೆ ದೇಹದ ಕೊಬ್ಬನ್ನು ಕರಗಿಸುವುದು ಹೇಗೆ ಎಂದು ತಿಳಿಯೋಣ. ನಿಂಬೆ ಹಣ್ಣು ಈ ಹಣ್ಣು ಹೊಟ್ಟೆಯ ಕೊಬ್ಬನ್ನು ಕರಗಿಸುವದರಲ್ಲಿ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಇದು ದೇಹದಲ್ಲಿ ಸರಿಯಾಗಿ ಕೆಲಸವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆರಸ ಮತ್ತು ಜೇನತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಹಲವಾರು ಬದಲಾವಣೆಗಳು ಕಾಣುತ್ತದೆ. ನಿಂಬೆ ರಸ ಮತ್ತು ಜೇನತುಪ್ಪವನ್ನು ಮಿಶ್ರಣ ಮಾಡಿ ಬೆಳಿಗ್ಗೆ ಉಪಹಾರ ಮಾಡುವ ಮುನ್ನ ಈ ಮಿಶ್ರಣವನ್ನು ಕುಡಿಯಬೇಕು. ಶುಂಠಿ ಚಹಾ ಗಂಟಲು ನೋವು ಕಡಿಮೆ ಮಾಡುವುದರಿಂದ ಮುಟ್ಟಿನ ನೋವನ್ನು ನಿವಾರಿಸುತ್ತದೆ. ಶುಂಠಿ ಚಹಾದಲ್ಲಿ ಔಷಧಿಯ ಗುಣ ಹೆಚ್ಚಾಗಿ ಇರುತ್ತದೆ.

ಮತ್ತು ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಶುಂಠಿ ಥರ್ಮೋಜನ್ ಆಗಿದೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಮತ್ತು ಕೊಬ್ಬನ್ನು ಪರಿಣಾಮಕಾರಿಯಾಗಿ ಸುಡಲು ಸಹಾಯ ಮಾಡುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿ ಕೊಳ್ಳುವವರು ಪ್ರತಿನಿತ್ಯವೂ ಶುಂಠಿ ಚಹಾವನ್ನು ಕುಡಿಯಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಬೇಕು. ಇದಕ್ಕೆ ತುಂಡು ತುಂಡಾಗಿ ಕತ್ತರಿಸಿದ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಸೋಸಿ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನೂ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಬೇಕು. ಬೆಳ್ಳುಳ್ಳಿ ಬೊಜ್ಜನ್ನು ಕರಗಿಸುವಲ್ಲಿ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ದೇಹದಲ್ಲಿ ಕೊಬ್ಬುನ್ನು ಕರಗಿಸುವ ಗುಣ ಈ ಬೆಳ್ಳುಳ್ಳಿಗೆ ಇದೆ ಎಂದು ಆರೋಗ್ಯಕರ ಅಧ್ಯಾಯಗಳು ಹೇಳಿವೆ. ಹೆಚ್ಚು ಬೆಳ್ಳುಳ್ಳಿಯನ್ನು ಆಗೆಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಒಂದು ಲೋಟ ನೀರಿಗೆ ನಿಂಬೆ ರಸವನ್ನು ಸೇರಿಸಬೇಕು. ನಂತರ ಬೆಳ್ಳುಳ್ಳಿ ಎಸಳಗಳನ್ನು ಅಗೆದು ಬೆಚ್ಚಗಿನ ನಿಂಬೆ ನೀರನ್ನು ಕುಡಿಯಬೇಕು. ಉತ್ತಮವಾದ ಫಲಿತಾಂಶ ದೊರೆಯಬೇಕು ಎಂದರೆ ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಬಾದಾಮಿ ಕೊಬ್ಬನ್ನು ಕರಗಿಸಲು ಇದು

ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಕೊಬ್ಬಿನ ಆಮ್ಲಗಳು ದೇಹದಲ್ಲಿ ಸಂಗ್ರಹನೆಯಾಗಿರುವ ಕೊಬ್ಬನ್ನು ಕರಗಿಸುತ್ತದೆ. ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ರಾತ್ರಿ ಹೊತ್ತು ಆರರಿಂದ ಎಂಟು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳ್ಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು. ಇದು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಆ್ಯಪಲ್ ಸೈಡರ್ ವಿನೆಗರ್ ಇದು ಆಹಾರಕ್ಕೆ ಒಳ್ಳೆಯ ಪರಿಮಳ ಕೊಡುವುದಲ್ಲದೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಚೆನ್ನಾಗಿ ಕೆಲಸವನ್ನು ಮಾಡುತ್ತದೆ. ಇದು ಹಸಿವನ್ನು ನಿಗ್ರಹಿಸಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಒಂದು ಲೋಟದಲ್ಲಿ ಆ್ಯಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ ಊಟದ ಮುಂಚೆ ಕುಡಿಯಬೇಕು. ಪುದೀನಾ ಪಿತ್ತಕೋಶದಿಂದ ಹೆಚ್ಚುವರಿ ಪಿತ್ತ ರಸವನ್ನು ತೆಗೆದು ಹಾಕುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಪುದೀನಾ ಸಹಾಯ ಮಾಡುತ್ತದೆ. ಕೊಬ್ಬನ್ನು ಸಂಗ್ರಹಿಸಲು ಪಿತ್ತರಸ ಸಹಾಯ ಮಾಡುತ್ತದೆ. ಆದರೆ ಪುದೀನಾ ಸ್ವಾಭಾವಿಕವಾಗಿ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಮತ್ತು ಉತ್ಕರ್ಷಣ ನಿರೋಧಕಗಳು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೆಯೇ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here