ಸೊಳ್ಳೆಗಳನ್ನು ಓಡಿಸಲು ಮನೆಮದ್ದು

85

ಸೊಳ್ಳೆಗಳನ್ನು ಓಡಿಸಲು ನಾವು ಗೂಡ್ ನೈಟ್ ಮಸೀನ್ ಗಳನ್ನು ಬಳಸುತ್ತೇವೆ ಅವುಗಳು ತುಂಬಾ ರಾಸಾಯನಿಕಗಳಿಂದ ತುಂಬಿರುತ್ತವೆ ಆದರೆ ಈಗ ಮನೆಯಲ್ಲೇ ಈ ಗೂಡ್ ನೈಟ್ ಮಸೀನ್ ಗಳನ್ನು ಹೇಗೆ ಮರು ತುಂಬಿಸುವುದು ಎಂಬುದನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಈ ಮಿಶನ್ ಬಾಟಲಿ ಖಾಲಿ ಆದ ತಕ್ಷಣ ನೀವು ಅವುಗಳನ್ನು ಬಿಸಾಡುತ್ತೀರಿ ಮತ್ತೆ ದುಡ್ಡು ಕೊಟ್ಟು ಬೇರೆ ಮಿಶನ್ ಬಾಟಲಿಗಳನ್ನು ತೆಗೆದುಕೊಂಡು ಬರುತ್ತಿರ ಆದರೆ ಅದರ ಬದಲು ನಾವು ಇವುಗಳನ್ನೇ ಮರಳಿ ಉಪಯೋಗಿಸಬಹುದು ಅದು ಹೇಗೆ ಎಂದರೆ ಈ ಬಾಟಲಿನ ಮೇಲಿನ ಮುಚ್ಚಳವನ್ನು ತೆಗೆಯಬೇಕು ಈಗ ಅದರ ಒಳಗೆ ಒಂದು ಕಪ್ಪು ಬಣ್ಣದ ಕಡ್ಡಿಯ ತರ ಇರುತ್ತದೆ ಇದನ್ನು ಸಹ ತೆಗೆಯಬೇಕು ಈಗ ಇದಕ್ಕೆ ನಾವು ಕರ್ಪುರವನ್ನು ಬಳಸೋಣ ಈ ಕರ್ಪುರವು ಸಹ ಸೊಳ್ಳೆಗಳನ್ನು ಓಡಿಸಲು ಸಹಕಾರಿಯಾಗಿದೆ ಈ ಒಂದು ವಿಧಾನಕ್ಕೆ ನಾವು 10 ಕರ್ಪುರಗಳನ್ನು ತೆಗೆದುಕೊಳ್ಳಿ ಈ ಕರ್ಪುರವನ್ನು ಕೈಯಿಂದ ಒತ್ತಿ ಪುಡಿಮಾಡಿಕೊಳ್ಳಿ ಇದನ್ನು ಒಂದು ಕಾಗದದ ಮೇಲೆ ಪುಡಿಯನ್ನು ಮಾಡಿ ಇಟ್ಟುಕೊಳ್ಳಿ ಅಂದರೆ

ಬಾಟಲಿಗೆ ಹಾಕಲು ಸುಲಭವಾಗುತ್ತದೆ ಈ ಪುಡಿಯನ್ನು ಈಗ ಬಾಟಲಿಗೆ ನಿಧಾನವಾಗಿ ಹಾಕಿಕೊಳ್ಳಿ ನಂತರ ಈ ಬಾಟಲಿಗೆ ಕಹಿಬೇವಿನ ಎಣ್ಣೆಯನ್ನು ಹಾಕಿಕೊಳ್ಳಿ ಕಹಿಬೇವು ಎಂದರೆ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಸೊಳ್ಳೆಗಳನ್ನು ಓಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ ಇದು ಎಲ್ಲ ಔಷಧಿ ಅಂಗಡಿಗಳಲ್ಲಿಯು ಸಹ ಕಹಿಬೇವಿನ ಎಣ್ಣೆ ಸಿಗುತ್ತದೆ. ನಿಮ್ಮ ಉಪಯೋಗಕ್ಕೆ ತಕ್ಕಂತೆ ಎಷ್ಟು ಎಣ್ಣೆ ಬೇಕೋ ಅಷ್ಟು ಎಣ್ಣೆಯನ್ನು ನೀವು ಈ ಬಾಟಲಿಗೆ ಹಾಕಿಕೊಳ್ಳಿ ಇದರ ವಾಸನೆ ಸ್ವಲ್ಪ ಬೇರೆ ತರಾನೇ ಇರುತ್ತದೆ ಇದರ ಜೊತೆಗೆ ಸ್ವಲ್ಪ ಸುಗಂಧ ಬರಿತ ಎಣ್ಣೆಯನ್ನು ಸಹ ಹಾಕಿರುತ್ತಾರೆ. ಈ ಎಣ್ಣೆಯನ್ನು ಹಾಕಿ ಈಗ ನಾವು ಆ ಬಾಟಲಿಯ ಮೇಲಿನ ಕಡ್ಡಿಯನ್ನು ಹೊರಗೆ ತೆಗೆದು ಇಟ್ಟುಕೊಂಡಿದ್ದ ಕಡ್ಡಿಯನ್ನು ಸಹ ಈ ಬಾಟಲಿಯ ಒಳಗೆ ಹಾಕಬೇಕು ನಂತರ ಈ ಬಾಟಲಿಯನ್ನು ನಾವು ಚೆನ್ನಾಗಿ ಮಿಶ್ರಣ ಮಾಡಬೇಕು ಹಾಗೇನೇ ಇದರಲ್ಲಿ ಈಗಾಗಲೇ ನಾವು ಕರ್ಪುರದ ಪುಡಿಯನ್ನು ಸಹ ಹಾಕಿದ್ದೇವೆ ಅದು ಕೂಡ ಚೆನ್ನಾಗಿ ಮಿಶ್ರಣ ಆಗುವಂತೆ ಮಾಡಿಕೊಳ್ಳೋಣ ಆದ್ದರಿಂದ ಸ್ನೇಹಿತರೆ ಈಗ ನಿಮ್ಮ ಮನೆಗೆ ಬರುವ ಸೊಳ್ಳೆಯನ್ನು

ಓಡಿಸಲು ಈ ರಿಫಿಲ್ ಪ್ಯಾಕ್ ತಯಾರಾಗಿದೆ ಇದನ್ನು ನೀವು ಈ ಬಾಟಲಿಯ ಮಿಷನ್ ಗೆ ಹಾಕಿ ತಯಾರಿಸಿಕೊಳ್ಳಿ ಇದೆಲ್ಲ ಮುಗಿದ ನಂತರ ನೀವು ಇದನ್ನು ಉರಿಸಬಹುದು ಅಂದರೆ ವಿದ್ಯುತ್ ಸ್ವಿಚಗೆ ಹಾಕಿ ಬಳಸಬಹುದು. ಹಾಗೇನೇ ಸ್ನೇಹಿತರೆ ಇದನ್ನು ನೀವು ಕೇವಲ ಸೊಳ್ಳೆ ಓಡಿಸಲು ಮಾತ್ರವಲ್ಲದೆ ನಿಮ್ಮ ಮಲಗುವ ಕೋಣೆಯ ಸುವಾಸನೆ ಭರಿತ ಪರಿಮಳಕ್ಕಾಗಿಯೂ ಸಹ ಬಳಸಬಹುದು. ಇದರಲ್ಲಿ ಸುಗಂಧ ಭರಿತ ಯಾವುದಾದರೂ ಎಣ್ಣೆಯನ್ನು ಹಾಕಿರುವುದರಿಂದ ಇದನ್ನು ಉರಿಸಿದಾಗ ಒಳ್ಳೆಯ ಪರಿಮಳ ಬರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಕೆಟ್ಟ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಸಿಧ್ದ ಸೊಳ್ಳೆ ಬಾಟಲಿಗಳನ್ನು ತರುವ ಬದಲು ನೀವೇ ಮನೆಯಲ್ಲೇ ನೈಸರ್ಗಿಕವಾಗಿ ತಯಾರಿಸಿದ ಈ ಒಂದು ಸೊಳ್ಳೆ ಔಷಧಿ ತಯಾರಿಸಿ ಬಳಸುವುದು ತುಂಬಾ ಉತ್ತಮ. ಇದು ಸೊಳ್ಳೆ ಓಡಿಸಲು ಸಹ ಸಹಕಾರಿಯಾಗುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here