ಸೋಂಕಿನಿಂದ ಕಾಪಾಡಿಕೊಳ್ಳಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ

73

ಸೋಂಕಿನಿಂದ ಕಾಪಾಡಿಕೊಳ್ಳಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಅದಕ್ಕಾಗಿ ಇಲ್ಲದೆ ಮಾರ್ಗಸೂಚಿಗಳು ನಮಸ್ಕಾರ ಸ್ನೇಹಿತರೇ ಸದ್ದಿಲ್ಲದೆ ಜನರ ದೇಹದಲ್ಲಿ ಕಾಡುವಂತಹ ಮದ್ದಿಲ್ಲದೇ ಇರುವ ಸೋಂಕಿನಿಂದ ವಿಶ್ವದೆಡೇ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇನ್ನೂ ಇದಕ್ಕೆ ಮದ್ದು ಇಲ್ಲದಿದ್ದರೂ ಕೆಲವರು ಗುಣಮುಖವಾಗಿ ಮನೆಯನ್ನು ಸೇರುತ್ತಿದ್ದಾರೆ. ಆದ್ರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನೆಂದರೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಬಲಿಷ್ಠವಾದರೆ ಅಂಥಹ ವ್ಯಕ್ತಿಗಳಿಗೆ ಸೋಂಕಿನ ಅಪಾಯ ಕಡಿಮೆ. ಕೇಂದ್ರ ಆರೋಗ್ಯ ಸಚಿವರು ಆರೋಗ್ಯವಾಗಿರಲು ಸಲಹೆ ಮತ್ತು ಸಹಾಯಗಳನ್ನು ಮಾಡುತ್ತದೆ. ಇದನ್ನು ಯೋಗತಜ್ಞರು ಕೂಡ ಬೆಂಬಲಿಸಿದ್ದಾರೆ. ಇದರಿಂದ ನಮ್ಮ ದೇಹ ಸೋಂಕಿನಿಂದ ವಿರುದ್ಧ ಹೋರಾಡಲು ಸಜ್ಜಾಗುತ್ತದೆ. ಹಾಗೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಈ ಸಲಹೆಗಳು ಯಾವುದೆಂದು ಇಂದು ತಿಳಿದುಕೊಳ್ಳೋಣ. ನಮ್ಮ ದೈನಂದಿಕ ಚಟುವಟಿಕೆಯಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯೂರ ಸಚಿವಾಲಯ ಸೂಚಿಸುವ ಮಾರ್ಗ ಸೂಚಿಗಳು. ಆಗಾಗ ಬಿಸಿ ನೀರು ಕುಡಿಯಿರಿ. ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಬೆಳಿಗ್ಗೆ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿರುವ

ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬಿಸಿ ನೀರು ಕುಡಿಯುವುದರಿಂದ ಶ್ವಾಸಕೋಶ ಚೆನ್ನಾಗಿ ಇರುತ್ತದೆ. ಅಡುಗೆಯಲ್ಲಿ ಅರಿಶಿಣ ಜೀರಿಗೆ ಮತ್ತು ಕೊತ್ತಂಬರಿ ಬೆಳ್ಳುಳ್ಳಿಯನ್ನು ಬಳಸಬೇಕು. ಈ ಮಸಾಲೆ ಸಾಮಗ್ರಿಗಳು ಔಷಧಿಯ ಗುಣವನ್ನು ಹೊಂದಿದೆ. ಭಾರತೀಯ ಆಹಾರದಲ್ಲಿ ಇವುಗಳನ್ನು ಬಳಕೆ ಮಾಡುವುದು ಸಾಮಾನ್ಯ. ಇವುಗಳಿಗೆ ಸೋಂಕು ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ದಿನದಲ್ಲಿ 30 ನಿಮಿಷ ಯೋಗ ಧ್ಯಾನ ಮಾಡಿ. ಅದರಲ್ಲೂ ಮುಖ್ಯವಾಗಿ ಪ್ರಾಣಾಯಾಮ ಮಾಡುವುದು. ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಮತ್ತು ಮನಸ್ಸು ಶಾಂತವಾಗಿ ಇರುತ್ತದೆ. ಮತ್ತು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತುಪ್ಪ ಎಳ್ಳೆಣ್ಣೆ, ತೆಂಗಿನ ಎಣ್ಣೆ ಮೂಗಿಗೆ ಹಚ್ಚಿ. ಇವುಗಳಲ್ಲಿ ಒಂದನ್ನು ಮೂಗಿಗೆ ಸವರುವುದರಿಂದ ಇದು ಉಸಿರಾಡುವ ಸೊಂಕಾನು ಮತ್ತು ಬ್ಯಾಕ್ಟೀರಿಯಾ ವನ್ನೂ ಒಳಗೆ ಹೋಗದಂತೆ ತಡೆಯುತ್ತದೆ. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ದೇಹದ ಮೂಲಕ ಒಳಗೆ ಹೋಗುವುದಿಲ್ಲ. ಹಾಗೂ ಮೂಗು ಕಟ್ಟುವ ಸಮಸ್ಯೆ ಉಂಟಾಗುವುದಿಲ್ಲ. ಅರಿಶಿಣ ಹಾಕಿದ ಹಾಲನ್ನು ಕುಡಿಯಿರಿ. ಇದನ್ನು ಚಿನ್ನದ ಹಾಲು ಎಂದು ಕರೆಯಲಾಗುತ್ತದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ

ಹೆಚ್ಚುತ್ತದೆ. ಮತ್ತು ಕೆಮ್ಮು ಗಂಟಲು ಕೆರೆತ ಈ ಸಮಸ್ಯೆಗಳು ಇರುವುದಿಲ್ಲ. ಆದ್ದರಿಂದ ತಪ್ಪದೇ ದಿನದಲ್ಲಿ ಒಂದು ಬಾರಿ ಅರಿಶಿಣ ಹಾಲನ್ನು ಕುಡಿಯಿರಿ. ಕಷಾಯವನ್ನು ಕುಡಿಯಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯೂರ ಸಚಿವಾಲಯ ಕಷಾಯವನ್ನು 1 ರಿಂದ 2 ಬಾರಿ ಸೇವಿಸಿ. ಇದರಲ್ಲಿ ಇರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಮ್ಮು ಜ್ವರ ಬಾರದಂತೆ ತಡೆಯಲು ಸಹಾಯ ಮಾಡುವುದುಂಟು. ಈ ಕಷಾಯವನ್ನು ತಯಾರಿಸಲು ಬೇಕಾದ ಸಾಮಾನುಗಳು ತುಳಸಿ, ದಾಲ್ಚಿನ್ನಿ ಕರಿಮೆಣಸು ಒಣಶುಂಠಿ ಮತ್ತು ಒಣದ್ರಾಕ್ಷಿ. ತಯಾರಿಸುವ ವಿಧಾನ ಒಂದು ಚಿಕ್ಕ ತುಂಡು ಒಣಶುಂಠಿ ಮತ್ತು ಚಕ್ಕೆ ಹಾಗೂ 3 ರಿಂದ 4 ಕರಿಮೆಣಸು ಇವೆಲ್ಲವನ್ನೂ ಜಜ್ಜಿ ಪುಡಿ ಮಾಡಿ ಈಗ ಇಂದು ಪಾತ್ರೆಗೆ ನೀರು ಹಾಕಿ ಈ ಪುಡಿಯನ್ನು ಸೇರಿಸಿ, 4 ಕಪ್ಪು ಒಣದ್ರಾಕ್ಷಿ ಹಾಕಿ 4 ರಿಂದ 5 ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಒಂದು ಕುದಿಸಿ. ರುಚಿಗೆ ಒಂದು ತುಂಡು ಬೆಲ್ಲ ಅಥವಾ ನಿಂಬೆ ರಸವನ್ನೂ ಸೇರಿಸಿ ಕುಡಿಯಿರಿ. ಈ ಕಷಾಯವನ್ನು 1ರಿಂದ 2 ಬಾರಿ ದಿನದಲ್ಲಿ ಸೇವಿಸಿ. ಇನ್ನೂ ಕೊಬ್ಬರಿ ಎಣ್ಣೆ 2 ರಿಂದ 3 ನಿಮಿಷ ಬಾಯಿಯನ್ನು ಮುಕ್ಕಳಿಸಿ. ನಂತ್ರ ಉಗುಳಿ ಬಿಸಿನೀರಿನಿಂದ ತೊಳೆದರೆ ಸಾಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದರೆ ಇದನ್ನು ನುಂಗಬೇಡಿ. ನಿತ್ಯವೂ ಚಾವನ್ ಬ್ರಷ್ ಸೇವಿಸಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲ ಸಲಹೆಗಳನ್ನು ಪಾಲಿಸುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋಣ.

LEAVE A REPLY

Please enter your comment!
Please enter your name here