ಹಲ್ಲಿನಲ್ಲಿ ಆಗುವ ಪೈರಿಯಾ ಸಮಸ್ಯೆಗೆ ಸೂಕ್ತ ಮನೆ ಮದ್ದು

57

ಹಲ್ಲಿನಲ್ಲಿ ರಕ್ತಸ್ರಾವವಾದರೆ ಅಥವಾ ಪೈರಿಯಾ ಸಮಸ್ಯೆಗೆ ಮನೆಮದ್ದು. ಪೈರಿಯಾ ಇದು ಹಲ್ಲಿಗೆ ಸಂಭಂದಿಸಿದ ಕಾಯಿಲೆಯಾಗಿದೆ. ಹಲ್ಲಿನಲ್ಲಿ ರಕ್ತಸ್ರಾವ ಆಗುವುದಕ್ಕೆ ಪೈರಿಯಾ ಎಂದು ಕರೆಯುತ್ತಾರೆ. ಈ ಕಾಯಿಲೆಯು ನ್ಯೂಟ್ರಿಷನ್ ಕಡಿಮೆ ಆಗುವ ಕಾರಣದಿಂದ ಬರುತ್ತದೆ. ಇನ್ನು ಕೆಲವೊಂದು ಭಾರಿ ಅನ್ ಹೈಜೇನಿಕ್ ಇಂದ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಪೈರಿಯಾ ಸಮಸ್ಯೆಯನ್ನು ಹೋಗಲಾಡಿಸ ಬಹುದು. ಹಾಗಾದರೆ ಸ್ನೇಹಿತರೆ ಈ ಒಂದು ಉತ್ತಮವಾದ ಮನೆಮದ್ದು ಕೊನೆವರೆಗೆ ಓದಿರಿ. ಒಸಡುಗಳು ಮತ್ತು ಹಲ್ಲುಗಳನ್ನು ತಿಂದ ನಂತರ ಅಥವಾ ಹಲ್ಲುಜ್ಜಿದ ನಂತರ ಸುಲಭವಾಗಿ ರಕ್ತಸ್ರಾವ ಆಗುತ್ತದೆ. ಇದು ಪೈರಿಯ ಆರಂಭಿಕ ಆಕ್ರಮಣ ಆಗಿರುತ್ತದೆ. ಇದು ಸಾಮಾನ್ಯವಾಗಿ ಹಲ್ಲಿನ ನೈರ್ಮಲ್ಯದ ಲಕ್ಷಣವಾಗಿದೆ. ಪೈರಿಯಾದ ಸ್ಪಷ್ಟ ಚಿಹ್ನೆಗಳು ಹಲ್ಲಿನ ಒಸಡುಗಳು ಮತ್ತು ಹಲ್ಲುಗಳ ನಡುವೆ ರೂಪುಗೊಳ್ಳುವ ಪ್ಯಾಕೆಟ್ ಗಳಾಗಿವೆ. ಇದು ಹಿಮ್ಮೆಟ್ಟಿನ ಒಸಡುಗಳಿಗೆ ಕಾರಣವಾಗುತ್ತದೆ. ಇದು ಹಲ್ಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತದೆ ಮತ್ತು ಸಡಿಲಗೊಳಿಸುತ್ತದೆ. ಹಾಗೂ ಹಲ್ಲುಗಳನ್ನು ಅಂಕು ಡೊಂಕು ಗಳಾಗಿ ಬೆಳೆಯುವಂತೆ ಮಾಡುತ್ತದೆ. ಮುಖ್ಯವಾಗಿ ಹಲ್ಲುಜ್ಜಿದ ನಂತರ

ಒಸಡುಗಳಲ್ಲಿ ರಕ್ತಸ್ರಾವ ಆಗುತ್ತದೆ. ಈ ಪೈರಿಯಾ ಸಮಸ್ಯೆ ಯಾವುದೇ ನೋವನ್ನು ಹೆಚ್ಚು ರೀತಿಯಲ್ಲಿ ಉಂಟು ಮಾಡದೆ, ಹಾಗೇ ಬೆಳೆದು ದೊಡ್ಡ ಕಾಯಿಲೆಯಾಗಿ ರೂಪುಗೊಳ್ಳುತ್ತದೆ. ಹಾಗಾದರೆ ಈ ಪೈರಿಯಾ ಸಮಸ್ಯೆಯನ್ನು ಸುಲಭವಾಗಿ ಮನೆಯ ಸಾಮಗ್ರಿಯನ್ನು ಬಳಸಿ ಮನೆಮದ್ದು ಮಾಡಿ ಹೇಗೆ ಹೋಗಲಾಡಿಸಬಹುದು ಎಂದು ನೋಡೋಣ. ಮೊದಲನೆಯ ಮನೆಮದ್ದು ಇದರಲ್ಲಿ ನಮಗೆ ಬೇಕಾಗಿರುವ ಸಾಮಗ್ರಿಗಳು ಎಂದರೆ ವೀಳ್ಯದೆಲೆ ಮತ್ತು ಕರ್ಪೂರ. ಒಂದು ವೀಳ್ಯದೆಲೆಯಲ್ಲಿ ಒಂದು ಚಿಕ್ಕ ಕರ್ಪೂರ ತುಂಡನ್ನು ಬೇರಿಸಬೇಕು. ಕರ್ಪೂರದ ತುಂಡು ಚಿಕ್ಕದಾಗಿ ತೆಗೆದುಕೊಳ್ಳಬೇಕು. ಹೆಚ್ಚು ಕರ್ಪೂರದ ಅವಶ್ಯಕತೆ ಇರುವುದಿಲ್ಲ. ಈ ಮಿಶ್ರಣವನ್ನು ಚೆನ್ನಾಗಿ ಅಗಿದು ಉಗುಳಬೇಕು. ಇದನ್ನು ಯಾವುದೇ ಕಾರಣಕ್ಕೂ ನುಂಗಬಾರದು. ಈ ಮನೆಮದ್ದು ದಿನದಲ್ಲಿ ಒಂದು ಬಾರಿ ಮಾಡಬೇಕು. ಹೀಗೆ ಮಾಡುವುದರಿಂದ ಪೈರೀಯಾ ಸಮಸ್ಯೆ ಒಂದು ವಾರದಲ್ಲಿ ಕಡಿಮೆಯಾಗುತ್ತದೆ. ಪೈರಿಯಾ ಸಮಸ್ಯೆ ಅಂದರೆ ಹಲ್ಲಿನಲ್ಲಿ ರಕ್ತಸ್ರಾವ ಆಗುವುದರ ಜೊತೆಗೆ

ಕೆಲವರಿಗೆ ಒಸಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು. ಬೆಳ್ಳುಳ್ಳಿ ಜೊತೆಗೆ ಜೇನುತುಪ್ಪವನ್ನು ಸೇರಿಸಿ ಜಗಿದು ತಿನ್ನಬೇಕು. ಈ ರೀತಿ ಮಾಡುವುದರಿಂದ ಪೈರೀಯಾ ಸಮಸ್ಯೆ ನಿವಾರಣೆಯಾಗುತ್ತದೆ. ಹಲ್ಲಿನಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದಕ್ಕೆ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆ ಎಂದು ಸೂಚಿಸುತ್ತದೆ. ಆದ್ದರಿಂದ ವಿಟಮಿನ್ ಸಿ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬೆಟ್ಟದ ನೆಲ್ಲಿಕಾಯಿ ಮತ್ತು ಹುಳಿ ಪದಾರ್ಥಗಳನ್ನು, ಆಮ್ಲಗಳು ಹೆಚ್ಚಾಗಿ ಇರುವ ಹಣ್ಣುಗಳನ್ನು ಸೇವಿಸಬೇಕು. ದಿನಕ್ಕೆ ಒಂದು ಬೆಟ್ಟದ ನೆಲ್ಲಿಕಾಯಿ ಯನ್ನೂ ತಿನ್ನಬೇಕು. ಇದರಿಂದ ದೇಹದಲ್ಲಿ ವಿಟಮಿನ್ ಸಿ ಅಂಶ ಜಾಸ್ತಿ ಬೆಳೆಯುತ್ತದೆ. ಉದಾಹರಣೆಗೆ ಸಿಟ್ರಸ್ ಹಣ್ಣುಗಳ ಕಿತ್ತಳೆ, ದ್ರಾಕ್ಷಿ ಹಣ್ಣು, ನಿಂಬೆ ಹಣ್ಣುಗಳಿಂದ ಸಿಗುವ ವಿಟಮಿನ್ ಸಿ ಗಮ್ ಅನ್ನು ಪುನಃ ಸ್ಥಾಪನೆ ಮಾಡುತ್ತದೆ. ಮತ್ತು ಹಾಲು, ಮೊಸರು, ಸೊಪ್ಪು ಕ್ಯಾಲ್ಸಿಯಂ ಇಡುವ ತರಕಾರಿಯನ್ನು ಹೆಚ್ಚಾಗಿ ಸೇವಿಸಬೇಕು. ಕ್ಯಾಲ್ಸಿಯಂ ಇರುವ ಆಹಾರಗಳನ್ನು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗಿ ಮತ್ತು ಮೂಳೆಗಳು ಬಲಶಾಲಿ ಆಗಿ ಬೆಳೆಯುತ್ತವೆ. ಮತ್ತು ಇದರಿಂದ ಹಲ್ಲಿನಲ್ಲಿ ಆಗುವ ರಕ್ತಸ್ರಾವ ಕೂಡ ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here