ನಾವು ನಮ್ಮ ದಿನನಿತ್ಯದ ಅಡುಗೆಯಲ್ಲಿ ಹಲವಾರು ವಿಧದ ಆಹಾರವನ್ನು ತಿನ್ನುತ್ತೇವೆ ಅದು ಖಾರದ ಒಂದು ಆಹಾರವೇ ಆಗಿರಬಹುದು ಅಥವಾ ಸಿಹಿ ಪಧಾರ್ಥವು ಆಗಿರಬಹುದು ಹೀಗೆ ಸಿಹಿ ತಿನಿಸುಗಳನ್ನು ತಿಂದಾಗ ಅವು ಹಲ್ಲುಗಳಲ್ಲಿ ಹಾಗೆ ಉಳಿದುಕೊಂಡು ಬಿಡುವುದರಿಂದ ನಮಗೆ ಹಲ್ಲುನೋವು ಕಾಣಿಸುತ್ತದೆ ಆದ್ದರಿಂದ ಈ ಹಲ್ಲುನೋವನ್ನು ನಿವಾರಿಸಲು ಮನೆಮದ್ದುಗಳನ್ನು ಬಳಸುವುದು ತುಂಬಾ ಮುಖ್ಯ. ಹಲ್ಲುನೋವಿಗೆ ಈಗ ಈ ಒಂದು ಲೇಖನದಲ್ಲಿ ನಾವು ಕೆಲವೊಂದು ಮನೆಮದ್ದುಗಳನ್ನು ತಿಳಿಸುತ್ತೇವೆ. ಮೊದಲನೇ ಮನೆಮದ್ದು ಬೆಳ್ಳುಳ್ಳಿ ಈ ಬೆಳ್ಳುಳ್ಳಿಯಲ್ಲಿ ವಿಶೇಷವಾದ ಔಷಧಿ ಗುಣಗಳಿವೆ ಹಾಗೂ ಬ್ಯಾಕ್ಟೀರಿಯಾಗಳನ್ನು ತಡೆಯುವಂತಹ ಸಾಮರ್ಥ್ಯ ಕೂಡ ಇದೆ ಆದ್ದರಿಂದ 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಚನ್ನಾಗಿ ಜಜ್ಜಿ ಪೇಸ್ಟ ಮಾಡಿ ನಂತರ ಇದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ
ನೋವಿರುವ ಜಾಗದಲ್ಲಿ ಈ ಪೇಸ್ಟನ್ನು ಇಟ್ಟುಕೊಂಡಾಗ ಹಲ್ಲುನೋವು ಗುಣವಾಗುತ್ತದೆ. ಎರಡನೇ ಮನೆಮದ್ದು ನಾಲ್ಕೈದು ಹನಿ ನಿಂಬೆರಸಕ್ಕೆ ಸ್ವಲ್ಪ ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನೀವು ಹಲ್ಲು ನೋವಿರುವ ಜಾಗದಲ್ಲಿ ಹಚ್ಚಿದರೆ ಹಲ್ಲುನೋವು ಗುಣವಾಗುತ್ತದೆ. ಮೂರನೇ ಮನೆಮದ್ದು ಸ್ವಲ್ಪ ಕಾಳುಮೆಣಸು ತೆಗೆದುಕೊಂಡು ಅದನ್ನು ಸಣ್ಣಗೆ ಪುಡಿಮಾಡಿ ಈ ಪುಡಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಸಣ್ಣ ಉಂಡೆ ರೀತಿಯಲ್ಲಿ ಮಾಡಿಕೊಳ್ಳಬೇಕು ಇದಕ್ಕೆ ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು ಈ ಒಂದು ಉಂಡೆಯನ್ನು ನೀವು ಹಲ್ಲುನೋವಿರುವ ಜಾಗದಲ್ಲಿ ಇಟ್ಟುಕೊಂಡಾಗ ಹಲ್ಲುನೋವು ಕಡಿಮೆ ಆಗುತ್ತದೆ. ಇನ್ನು ನಾಲ್ಕನೇ ಮನೆಮದ್ದು ನಿಮಗೆ ಹಲ್ಲುನೋವು ತುಂಬಾ ಇದೆ ಎಂದರೆ ಹಾಗೂ ಏನು ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದರೆ ನೀವು ಈ ಒಂದು ಮನೆಮದ್ದನ್ನು ಉಪಯೋಗಿಸಿ ನೋಡಿ ಅದೇನೆಂದರೆ ಇಲ್ಲಿ ಈ ಒಂದು ಮನೆಮದ್ದಿಗಾಗಿ 5 ಲವಂಗವನ್ನು ತೆಗೆದುಕೊಳ್ಳಬೇಕು.
ಹಾಗೇನೇ ಸ್ವಲ್ಪ ಚೆಕ್ಕೆಯ ತುಂಡನ್ನು ತೆಗೆದುಕೊಳ್ಳಬೇಕು ಹಾಗೂ ಒಂದು ಏಲಕ್ಕಿಯನ್ನು ತೆಗೆದುಕೊಳ್ಳಬೇಕು ಏಲಕ್ಕಿ ಸಿಪ್ಪೆ ಸಮೇತ ಬಳಸಬೇಕು ಇವೆಲ್ಲವನ್ನು ಕುಟ್ಟಿ ಪುಡಿ ಮಾಡಬೇಕು ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಳ್ಳೆಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಬೇಕು ಅದಾದ ನಂತರ ಕುಟ್ಟಿ ಪುಡಿ ಮಾಡಿಕೊಂಡ ಈ ಪುಡಿಯನ್ನು ಬಿಸಿ ಮಾಡಿದ ಎಳ್ಳೆಣ್ಣೆಗೆ ಹಾಕಬೇಕು ಜೊತೆಗೆ ಇದಕ್ಕೆ ಕಾಲು ಚಮಚಗಿಂತ ಕಡಿಮೆ ಒಣಶುಂಠಿಯ ಪುಡಿಯನ್ನು ಸೇರಿಸಬೇಕು ನಂತರ ಇದಕ್ಕೆ ಸ್ವಲ್ಪ ಇಂಗನ್ನು ಕೂಡ ಸೇರಿಸಬೇಕು ನಂತರ ಈ ಎಣ್ಣೆ ಸ್ವಲ್ಪ ತಣ್ಣಗಾದ ಮೇಲೆ ಸೋಸಿಕೊಂಡು ಶೇಖರಿಸಿ ಇಟ್ಟುಕೊಳ್ಳಬೇಕು ನಂತರ ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಈ ಎಣ್ಣೆಯಲ್ಲಿ ಅದ್ದಿ ಹಲ್ಲುನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಹಲ್ಲುನೋವು ಗುಣವಾಗುತ್ತದೆ. ಆದ್ದರಿಂದ ಸ್ನೇಹಿತರೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಹೇಗೆ ಹಲ್ಲುನೋವಿಗೆ ಮನೆ ಮದ್ದು ಮಾಡುವುದು ಎಂದು ಈಗ ತಿಳಿದುಕೊಂಡಿರಿ ಇನ್ನು ಮುಂದೆ ನೀವು ಸಹ ಹಲ್ಲು ನೋವು ಬಂದರೆ ಈ ಮನೆಮದ್ದುಗಳನ್ನು ಮಾಡಿಕೊಂಡು ಉಪಯೋಗಿಸಿರಿ.