ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಸುಲಭ ಮನೆಮದ್ದು

52

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಸುಲಭ ಮನೆಮದ್ದು. ಹಲ್ಲುಗಳಲ್ಲಿರುವ ಹಳದಿ ಬಣ್ಣವನ್ನು ಬೆಳ್ಳಗೆ ಮಾಡುವ ಒಂದು ಸಲಹೆಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ ಬನ್ನಿ ಅದೇನು ತಿಳಿಯೋಣ. ಯಾವುದೇ ರೀತಿಯ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಈ ಮನೆ ಮದ್ದು ಉಪಯೋಗ ಮಾಡಿರಿ.  ಮೊದಲಿಗೆ ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು ಈಗ ಅದಕ್ಕೆ ಅರ್ಧ ಚಮಚದಷ್ಟು ಅರಿಷಿಣ ಪುಡಿಯನ್ನು ಹಾಕಿ ಈ ಅರಿಷಿಣ ಪುಡಿ ಹಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ ಬಾಯಲ್ಲಿ ಬರುವಂತಹ ದುರ್ವಾಸನೆಯನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ನಂತರ ಇದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಹಾಕಿಕೊಳ್ಳಿ. ಹಾಗೇನೇ ಸ್ನೇಹಿತರೆ ಕೆಲವರು ಮಾತಾಡುವಾಗ ಮತ್ತು ನಗುವ ಸಂದರ್ಭದಲ್ಲಿ ಅವರ ಬಾಯಿಂದ ನಮಗೆ ದುರ್ವಾಸನೆ ಬರುತ್ತದೆ ವಸಡುಗಳು ಆರೋಗ್ಯವಾಗಿ ಇರಬೇಕು ಅಂದರೆ ಹಲ್ಲುಗಳು ಫಳಫಳ ಅಂತ ಹೊಯುತ್ತಿರಬೇಕು ಎಂದರೆ ಇವೆಲ್ಲವಕ್ಕೂ ನಾವು ಅಡುಗೆಗೆ ಬಳಸುವ ಉಪ್ಪಿನಿಂದ ತುಂಬಾನೇ ಪ್ರಯೋಜನವಿದೆ.

ಜೊತೆಗೆ ಈ ಉಪ್ಪು ಬಾಯಲ್ಲಿರುವ ಬ್ಯಾಕ್ಟೀರಿಯವನ್ನು ಸಾಯಿಸಿ ನಮ್ಮ ವಸಡುಗಳು ಮತ್ತು ಹಲ್ಲುಗಳು ಆರೋಗ್ಯವಾಗಿ ಇರುವಂತೆ ಮಾಡುತ್ತದೆ ಹಾಗೇನೇ ಇನ್ನೊಂದು ಈ ಒಂದು ಮನೆ ಮದ್ದಿಗೆ ಬಳಸುವಂತಹ ವಸ್ತು ಎಂದರೆ ಅದು ಅಡುಗೆ ಸೋಡಾ ಈ ಸೋಡಾವನ್ನು ಒಂದು ಚಿಟಿಕೆ ಅಥವಾ ಒಂದು ಕಾಲು ಚಮಚದಷ್ಟು ಹಾಕಿ ಇವೆಲ್ಲವನ್ನು ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಅರಿಷಿನಪುಡಿ ಉಪ್ಪು ಮತ್ತು ಅಡುಗೆ ಸೋಡಾ ಇವುಗಳನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ಡಬ್ಬಿಯಲ್ಲಿ ಹಾಕಿ ಇಟ್ಟುಕೊಂಡು ಪ್ರತಿದಿನ ನೀವು ಇದನ್ನು ಬಳಸಬಹುದು. ನೋಡಿದಿರೆಲ್ಲ ಸ್ನೇಹಿತರೆ ಈ 3 ಪಧಾರ್ಥಗಳನ್ನು ಬಳಸಿಕೊಂಡು ಹೀಗೆ ಮಾಡಿಕೊಳ್ಳಿ. ಆಮೇಲೆ ಇರೀತಿ ಬೇಡ ತಕ್ಷಣಕ್ಕೆ ಬೇಕು ಅಂದರೆ ಈ ತರ ತಯಾರಿ ಮಾಡಿಕೊಂಡಿರುವ ಈ ಪಧಾರ್ಥಗಳಿಗೆ ನೀರನ್ನು ಸೇರಿಸಿ ಪೇಸ್ಟ ಮಾಡಿಕೊಂಡು ಬಳಸಬಹುದು.

ಹಾಗೇನೇ ಅಡುಗೆ ಸೋಡಾ ನಮ್ಮ ಹಲ್ಲುಗಳನ್ನು ಶುದ್ಧಿಮಾಡುವುದಲ್ಲದೆ ನಮ್ಮ ಹಲ್ಲುಗಳ ಮೇಲೆ ಇರುವ ಕಲೆಗಳನ್ನು ಕೂಡ ಸಂಪೂರ್ಣವಾಗಿ ಹೋಗಲಾಡಿಸುತ್ತದೆ ಅದಕ್ಕಾಗಿ ನೀವು ಈ ಪೇಸ್ಟನ್ನು ಬ್ರಶಿಗೆ ಹಾಕಿ ಉಜ್ಜುವುದರಿಂದ ಕೇವಲ 2 ನಿಮಿಷದಲ್ಲಿ ನಿಮ್ಮ ಹಲ್ಲುಗಳು ಬೆಳ್ಳಗೆ ಆಗುತ್ತವೆ. ಹಾಗಾಗಿ ಹಲ್ಲಿನ ಕಲೆಯನ್ನು ಹೋಗಲಾಡಿಸಲು ಮತ್ತು ಬಾಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಮುಖ್ಯವಾಗಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬೇಕು ಎನ್ನುವವರು ಈ ಒಂದು ಸಲಹೆಯನ್ನು ಒಮ್ಮೆ ಬಳಸಿ ನೋಡಿ ಇದನ್ನು ನೀವು ವಾರದಲ್ಲಿ 3 ಬಾರಿ ಅಥವಾ 4 ಬಾರಿ ಮಾಡಿದರೆ ಸಾಕು ಇದರಿಂದ ನಿಮ್ಮ ಹಲ್ಲುಗಳು ತುಂಬಾ ಆರೋಗ್ಯವಾಗಿ ಬೆಳ್ಳಗೆ ಕಾಣಿಸುತ್ತವೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ  ಮರೆಯದೆ ಶೇರ್ ಮಾಡಿ.

LEAVE A REPLY

Please enter your comment!
Please enter your name here