ಹಾಲುಣಿಸುವ ತಾಯಂದಿರು ಮೆಂತೆ ಕಾಳು ಸೇವಿಸಿದ್ರೆ

47

ಹಾಲುಣಿಸುವ ತಾಯಂದಿರಿಗೆ ಮೆಂತ್ಯೆ ಕಾಳು ಎಷ್ಟು ಉತ್ತಮ. ಮೆಂತ್ಯೆ ಕಾಳು ಇದನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುತ್ತಾರೆ. ಮೆಂತ್ಯೆ ಕಾಳು ಮೆಂತ್ಯೆ ಸೊಪ್ಪು ಕೇವಲ ತರಕಾರಿ ಮಾತ್ರವಲ್ಲ. ಇದನ್ನು ಔಷಧಿ ರೂಪದಲ್ಲಿ ಕೂಡ ಬಳಸುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಈ ಒಗ್ಗರಣೆ ಡಬ್ಬಿಯಲ್ಲಿ ತುಂಬಾ ರುಚಿಕರವಾದ ಅಗತ್ಯವಾದ ಆರೋಗ್ಯಕರವಾದ ಸಾಂಬಾರ ಪದಾರ್ಥ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾದ್ರೆ ಸ್ನೇಹಿತರೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಈ ಮಾಹಿತಿಯನ್ನು ಕೊನೆವರೆಗೂ ಓದಿರಿ. ಮೆಂತ್ಯೆ ಕಾಳುಗಳಲ್ಲಿ ವಿಟಮಿನ್ ಏ ವಿಟಮಿನ್ ಬಿ ಬಿ6 ಕ್ಯಾಲ್ಸಿಯಂ ಪೊಟ್ಯಾಷಿಯಂ ಮ್ಯಂಗ್ನಿಷಿಯಮ್ ಹೆಚ್ಚಾಗಿ ಇರುವುದರಿಂದ ಈ ಕಾಳು ಆರೋಗ್ಯಕರ ಲಾಭಗಳನ್ನು ಕೊಡುತ್ತದೆ. ಈ ಮೆಂತ್ಯೆ ಕಾಳುಗಳು ಹಾಲುಣಿಸುವ ತಾಯಂದಿರಗೆ ದೇವರು ಕೊಟ್ಟ ವರ ಎಂದು ಹೇಳಬಹುದು. ಏಕೆಂದರೆ ಹಾಲುಣಿಸುವ ತಾಯಂದಿರು ದೇಹದ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ಯೋಚಿಸುತ್ತಾರೆ. ಅಂಥಹ ಸಮಯದಲ್ಲಿ ಅವರು ತಮ್ಮ ಆಹಾರದಲ್ಲಿ ಈ ಮೆಂತ್ಯೆ ಕಾಳನ್ನು ಸೇವಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬು ಕರಗಿ ಅವರ ದೇಹವು ಮೊದಲಿನ ಸ್ಥಿತಿಗೆ ಬರುವಂತೆ ಮಾಡುತ್ತದೆ. ಮತ್ತು ದೇಹದಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ.

ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸುವ ಗುಣ ಈ ಮೆಂತ್ಯೆ ಕಾಳುಗಳಲ್ಲಿ ಅಡಗಿದೆ. ಒಂದು ಕಡೆ ಎದೆ ಹಾಲು ಹೆಚ್ಚಿಸುವುದರ ಜೊತೆಗೆ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರಿನ ಜೊತೆ ಪ್ರತಿನಿತ್ಯವೂ ಎರಡು ಚಮಚ ಸೇವಿಸಬೇಕು. ಮೆಂತ್ಯೆ ಪುಡಿ ಮಾಡಿಕೊಂಡು ಹಾಲಿನ ಜೊತೆ ಸೇವಿಸಬಹುದು. ಅಥವ ಮೆಂತ್ಯೆಯನ್ನು ಮೊಳಕೆ ರೂಪದಲ್ಲಿ ಶೇಖರಣೆ ಮಾಡಿ ಸೇವಿಸಬಹುದು. ಆದರೆ ಇದನ್ನು ಹೆಚ್ಚಾಗಿ ತಿನ್ನಬಾರದು. ನಿಯಮಿತವಾಗಿ ಸೇವಿಸಬೇಕು. ಹೆರಿಗೆ ಆದ ನಂತರ ಬಾಣಂತಿಯರಿಗೆ ಮೆಂತ್ಯೆ ಲಾಡುಗಳನ್ನೂ ತಿನ್ನಲು ಕೊಡುತ್ತಾರೆ. ಏಕೆಂದರೆ ಕಳೆದು ಹೋದ ಶಕ್ತಿಯನ್ನು ಹೆಚ್ಚಿಸಲು ಕೊಡುತ್ತಾರೆ. ತಾಯಂದಿರಿಗೆ ಶಕ್ತಿ ಹೆಚ್ಚಾದಷ್ಟೂ ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಮಗುವಿಗೆ ಸಾಕಾಗುವಷ್ಟು ಎದೆ ಹಾಲನ್ನು ಕುಡಿಸಬಹುದು. ಮತ್ತು ಇದರ ಜೊತೆಗೆ ಅತಿಯಾದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿನಿತ್ಯವೂ ಮೆಂತ್ಯೆ ಕಾಳುಗಳನ್ನು ತಿನ್ನುವುದರಿಂದ ಬ್ರೀಸ್ಟ್ ಕ್ಯಾನ್ಸರ್ ಕಾಯಿಲೆಗಳಿಂದ ದೂರ ಉಳಿಯಬಹುದು. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ತಮ್ಮ ಆಹಾರದಲ್ಲಿ ಈ ಮೆಂತ್ಯೆ ಸೊಪ್ಪನ್ನೂ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆಯೇ ಪಿಸಿಓಡಿ, ಪಿಸಿಒಎಸ್ ಸಮಸ್ಯೆ ಇರುವವರಿಗೆ ಈ ಮೆಂತ್ಯೆ ಕಾಳು ರಾಮಬಾಣವಾಗಿದೆ.

ಮತ್ತು ಹಾರ್ಮೋನುಗಳನ್ನು ಸಮತೋಲನದಲ್ಲಿ ಇಡುತ್ತದೆ. ಈ ಮೆಂತ್ಯೆ ಕಾಳಿನ ಆರೋಗ್ಯಕರ ಲಾಭಗಳೆಂದರೆ ಇದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ. ಮತ್ತು ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸುತ್ತದೆ. ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. ಮೆಂತ್ಯೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶ ದೇಹದಲ್ಲಿ ಫ್ರೀ ರಾಡಿಕಲ್ಸ್ ಕಡಿಮೆ ಮಾಡುತ್ತದೆ. ಫ್ರೀ ರಾಡಿಕಲ್ಸ್ ವಿರುದ್ಧ ಹೊರಡುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ಮಧುಮೇಹ ರೋಗಿಗಳಿಗೆ ಇದು ಒಂದು ಉತ್ತಮವಾದ ಆಹಾರವಾಗಿದೆ. ಮೆಂತ್ಯೆಯನ್ನೂ ಸೇವಿಸುವುದರಿಂದ ಪಿಗ್ಮೆಂಟೇಶನ್, ಮೊಡವೆಗಳು, ಕಪ್ಪು ಗೆರೆಗಳು, ಕಪ್ಪು ಕಲೆಗಳು ಕ್ರಮೇಣವಾಗಿ ಕಡಿಮೆಯಾಗಲು ಈ ಮೆಂತ್ಯೆ ತುಂಬಾ ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಈ ಮೆಂತ್ಯೆ ಕಾಳು ಸಹಾಯ ಮಾಡುತ್ತದೆ. ಮೆಂತ್ಯೆ ಸೊಪ್ಪಿನಿಂದ ಹಲವಾರು ಲಾಭಗಳಿವೆ. ಜ್ವರ ಬಂದಾಗ ಕಿಡ್ನಿ ಸಮಸ್ಯೆ ಉಂಟಾದಾಗ ಮೆಂತ್ಯೆ ಸೊಪ್ಪನ್ನು ಸೇವಿಸಬೇಕು. ಇದರಿಂದ ಜ್ವರ ಮತ್ತು ಕಿಡ್ನಿ ಸಮಸ್ಯೆ ಮಾಯವಾಗುತ್ತದೆ. ಮೆಂತ್ಯೆ ಸೊಪ್ಪನ್ನು ತಿನ್ನುವುದರಿಂದ ಕೀಲುನೋವು ಗ್ಯಾಸ್ಟ್ರಿಕ್ ಆಯಾಸ ಸುಸ್ತು ಮತ್ತು ಹೊಟ್ಟೆಗೆ ಸಂಭಂದಿಸಿದ ಕಾಯಿಲೆಗಳನ್ನು ಬರದಂತೆ ತಡೆಯುತ್ತದೆ. ಇದು ದೇಹಕ್ಕೆ ತಂಪು ಕೂಡ ನೀಡುತ್ತದೆ. ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

LEAVE A REPLY

Please enter your comment!
Please enter your name here