ಹುಡುಗರ ಗುಪ್ತ ಸಮಸ್ಯೆಗಳು ನಿವಾರಣೆ ಆಗಲು ಈರುಳ್ಳಿ ಈ ಸಮಯದಲ್ಲಿ ಸೇವಿಸಿ

74

ವೀರ್ಯಾ ಣು ಸಂಖ್ಯೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಈರುಳ್ಳಿ ಸೇವನೆ ಉತ್ತಮ. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಈರುಳ್ಳಿ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲ ಪ್ರಯೋಜನಗಳು ಇವೆ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಈರುಳ್ಳಿಯಲ್ಲಿ ಹಲವಾರು ಜಾತಿಗಳಿವೆ. ಜಾತಿಯಲ್ಲಿ ವಿವಿಧತೆ ಹೊಂದಿದ್ದರು ಕೂಡ ಆರೋಗ್ಯದ ದೃಷ್ಟಿಯಿಂದ ಒಂದೇ ಬಗೆಯ ಪರಿಣಾಮವನ್ನು ನೀಡುತ್ತವೆ. ಈರುಳ್ಳಿಯನ್ನು ಆಹಾರದಲ್ಲಿ ಉಪಯೋಗ ಮಾಡುವುದರಿಂದ ಆಹಾರದ ರುಚಿ ಮತ್ತು ಸ್ವಾದವನ್ನು ಹೆಚ್ಚಿಸುವುದಲ್ಲದೆ ಇದರಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಸೆಪ್ಟಿಕ್ ಗುಣಗಳು ನಮ್ಮ ದೇಹವನ್ನು ರಕ್ಷಿಸುತ್ತದೆ. ಇನ್ನೂ ಈರುಳ್ಳಿ ಯಾವೆಲ್ಲ ನ್ಯುಟ್ರಿಷನ ಅಂಶಗಳನ್ನು ಒಳಗೊಂಡಿದೆ ಎಂದರೆ ಇದರಲ್ಲಿ ಕ್ಯಾಲೋರಿ ಫ್ಯಾಟ್ ಸೋಡಿಯಂ ಮತ್ತು ಕಾರ್ಬೋಹೈಡ್ರೇಟ್, ಶುಗರ್, ಪ್ರೊಟೀನ್, ವಿಟಮಿನ್ಸ್, ಕ್ಯಾಲ್ಸಿಯಂ, ಐರನ್ ಮತ್ತು ಪೊಟ್ಯಾಷಿಯಂ ಇದೆ. ನೋಡಿ ಇಷ್ಟೆಲ್ಲಾ ಪೌಷ್ಟಿಕಾಂಶಗಳು ಈ ಈರುಳ್ಳಿಯಲ್ಲಿ ಸಿಗುತ್ತದೆ. ಆದರೆ ಕೆಲವರು ಈರುಳ್ಳಿ ಸೇವನೆ ಮಾಡಿದರೆ ಬಾಯಿ ವಾಸನೆ ಬರುತ್ತದೆ ಅಂತ ಈರುಳ್ಳಿ ಸೇವನೆ ಮಾಡುವುದನ್ನು ಅಲ್ಲಗಳೆಯುತ್ತಾರೆ. ಈ ಈರುಳ್ಳಿ ಸೇವನೆ ಮಾಡುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿ ಇರುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಹಾಗೂ ಈರುಳ್ಳಿಯನ್ನು 3 ರಿಂದ 4 ಜಗಿದು ತಿನ್ನುವುದರಿಂದ ಇದು ನಿಮ್ಮ ಹಲ್ಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ಇನ್ನೂ ಆಯುರ್ವೇದ ಆಚಾರ್ಯರು ಗಂಡಸರಿಗೆ ನ್ಯುಮಿರೋ

ದೌರ್ಬಲ್ಯದಲ್ಲಿ ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಚಲನ ಶೀಲತೆಯನ್ನು ಹೆಚ್ಚಿಸಲು ಉಪಯೋಗಿಸುವಂತೆ ಶಿಫಾರಸು ಮಾಡುತ್ತಾರೆ. ನೀವು ಗಮನಿಸಿರಬಹುದು ಹಿಂದಿನ ಕಾಲದಲ್ಲಿ ಊಟಕ್ಕೆ ಕುಳಿತಾಗ ಒಂದು ಹಸಿ ಈರುಳ್ಳಿಯನ್ನು ಸೇವನೆ ಮಾಡುತ್ತಾ ಇದ್ದರು. ಅವರಿಗೆ ಯಾವುದೇ ರೀತಿಯ ವೀರ್ಯಾಣು ಕೊರತೆ ಇದ್ದಿರಲಿಲ್ಲ. ಮನೆಯ ತುಂಬಾ ಮಕ್ಕಳು ಇರುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ವೀರ್ಯಾಣುಗಳ ಕೊರತೆಯಿಂದ 1-2 ಮಕ್ಕಳು ಕೂಡ ಆಗುತ್ತಿಲ್ಲ. ಕಾರಣ ನಮ್ಮ ಬಾಯಿಗೆ ರುಚಿ ಇರುವಂತಹ ಆಹಾರವನ್ನು ಮಾತ್ರ ಸೇವನೆ ಮಾಡುತ್ತೇವೆ. ಯಾವುದು ಬಾಯಿಗೆ ರುಚಿ ಅನ್ನಿಸುವುದಿಲ್ಲವೋ ಅಂಥಹ ಆಹಾರವನ್ನು ತ್ಯಜಿಸುತ್ತೇವೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೆ, ನಿಯಮಿತವಾಗಿ ಈರುಳ್ಳಿಯನ್ನು ಸೇವನೆ ಮಾಡುತ್ತಾ ಬನ್ನಿ. ಇದರಿಂದ ವೀರ್ಯಾಣುಗಳು ಹೆಚ್ಚು ಉತ್ಪತ್ತಿಯಾಗುತ್ತದೆ. ಮತ್ತು ನ್ಯುಮಿರೋ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ಅನ್ನು ಕಡಿಮೆ ಮಾಡಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆಯಬಹುದು. ಇನ್ನೂ ಯಾರಿಗೆ ಜೀರ್ಣಕ್ರಿಯೆ ಸಮಸ್ಯೆ ಇರುತ್ತದೆ ಅಂಥವರಿಗೆ ಇದು ಬಹಳ ಉತ್ತಮ ಏಕೆಂದರೆ ಉತ್ತಮ ಪ್ರಮಾಣದ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಹಾಗೂ ಈರುಳ್ಳಿ ಕರುಳಿಗೆ ಅನುಕೂಲಕರವಾದ

ಬ್ಯಾಕ್ಟೀರಿಯಾವನ್ನು ಆಹಾರದ ಮೂಲಕ ಒದಗಿಸುತ್ತದೆ. ಇದರಲ್ಲಿ ಫೈಬರ್ ಸಮೃದ್ಧವಾಗಿ ಇರುವುದರಿಂದ ಆರೋಗ್ಯಕರವಾದ ಬ್ಯಾಕ್ಟೀರಿಯಾದ ಉತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ನಿಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಹಾಗೂ ಈರುಳ್ಳಿ ಅತಿಸಾರ ಮತ್ತು ಮಲಬದ್ಧತೆಯನ್ನೂ ತಡೆಗಟ್ಟಲು ಉತ್ತಮವಾಗಿದೆ. ಇನ್ನೂ ಯಾರಿಗೆ ರಕ್ತ ಮೂಲವ್ಯಾಧಿ ಇರುವಂತಹವರು ಸಣ್ಣ ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಸಣ್ಣ ಈರುಳ್ಳಿ ಏಕೆಂದರೆ ಇದರಲ್ಲಿ ಮೆಡಿಸಿನ್ ಪ್ರಾಪರ್ಟಿ ತುಂಬಾ ಇರುವುದರಿಂದ ಸಣ್ಣ ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ರಕ್ತ ಮೂಲವ್ಯಾಧಿ ಬೇಗನೆ ಗುಣಮುಖವಾಗುವುದು. ಇನ್ನೂ ನಿಯಮಿತವಾಗಿ ಈರುಳ್ಳಿ ಸೇವನೆ ಮಾಡುವುದರಿಂದ ಮೂಳೆ ಆರೋಗ್ಯ ಚೆನ್ನಾಗಿರುತ್ತದೆ. ಇನ್ನೂ ಅಸ್ತಮಾ ಇದ್ದರೆ, ಈರುಳ್ಳಿ ರಸಕ್ಕೆ ಜೇನುತುಪ್ಪ ಬೆರೆಸಿ ಸಮ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅಸ್ತಮಾ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಹಾಗೂ ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ಕ್ಯಾನ್ಸರ್ ಅಂಥಹ ರೋಗಗಳನ್ನು ಗುಣಪಡಿಸುವಲ್ಲಿ ಸಹಾಯಕಾರಿಯಾಗಿದೆ. ಮತ್ತು ಇದು ದೇಹದಲ್ಲಿರುವ ರಕ್ತವನ್ನು ಶುದ್ಧೀಕರಿಸುತ್ತದೆ. ಹಾಗೂ ಕಣ್ಣಿನ ಆರೋಗ್ಯವನ್ನೂ ರಕ್ಷಣೆ ಮಾಡುತ್ತದೆ. ಮತ್ತು ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ.

LEAVE A REPLY

Please enter your comment!
Please enter your name here