ಹೆಂಗಸರ ಗುಪ್ತ ಸಮಸ್ಯೆಗೆ ಇಲ್ಲಿದೆ ಸೂಕ್ತ ರೀತಿಯ ಸಲಹೆಗಳು

70

ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳುವ ಆಹಾರ ಪದ್ಧತಿ. ಋತುಚಕ್ರ ಅಥವ ಮುಟ್ಟಿನ ಸಮಯದಲ್ಲಿ ಮಹಿಳೆಯರು ತುಂಬಾ ಸಮಸ್ಯೆಯಿಂದ ಬಳಲುತ್ತಾರೆ. ನಮಗೆ ಗೊತ್ತಿರುವ ಹಾಗೆ ಈ ಸಮಯದಲ್ಲಿ ಹೊಟ್ಟೆ ನೋವು ಬೆನ್ನುನೋವು ಕೈ ಕಾಲು ನೋವು ಸಾಮಾನ್ಯವಾಗಿ ಎಲ್ಲರಲ್ಲಿಯೂ ಬರುತ್ತದೆ. ಹಾಗಾದರೆ ಇದಕ್ಕೆ ಸರಿಯಾದ ಮನೆಮದ್ದು ಯಾವುದು ಮತ್ತು ಯಾವ ಆಹಾರವನ್ನು ತಿಂದರೆ ಋತುಚಕ್ರ ಆರೋಗ್ಯವಾಗಿ ಆಗುತ್ತದೆ. ಮತ್ತು ಸುಸ್ತು, ಆಯಾಸವನ್ನು ನೀಗಿಸುತ್ತದೆ. ಇದೆಲ್ಲವನ್ನೂ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಇದನ್ನು ಕೊನೆವರೆಗೂ ಓದಿರಿ. ಪೀರಿಯಡ್ಸ್ ಸಮಯದಲ್ಲಿ ಈ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ಪಿರಿಯಡ್ಸ್ ಆರೋಗ್ಯವಾಗಿ ಆಗುತ್ತದೆ. ಬರೀ ಪಿ ಸಿ ಓ ಡಿ ಪ್ರಾಬ್ಲಮ್ ಇರುವವರು ಮಾತ್ರವಲ್ಲದೆ ಸಾಮಾನ್ಯ ರೀತಿಯ ಹೆಂಗಸರು ಕೂಡ ಆದಷ್ಟು ಪಿರಿಯಡ್ಸ್ ಸಮಯದಲ್ಲಿ ತಿನ್ನುತ್ತಿರಬೇಕು. ಮೊದಲನೆಯದಾಗಿ ಪೀರಿಯಡ್ಸ್ ಸಮಯದಲ್ಲಿ ಟೀ ಮತ್ತು ಕಾಫೀ ಕುಡಿಯಬಾರದು. ಟೀ ಮತ್ತು ಕಾಫೀ ಬದಲು ಗ್ರೀನ್

ಟೀಯನ್ನು ಕುಡಿಯಬೇಕು. ಇದರಿಂದ ಪರಿಯಡ್ಸ್ ಸಮಯದಲ್ಲಿ ಆಗುವ ಆಯಾಸವು ಕಡಿಮೆಯಾಗುತ್ತದೆ. ಗ್ರೀನ್ ಟೀಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ಎನರ್ಜಿ ಯನ್ನೂ ಬೂಸ್ಟ್ ಅಪ್ ಮಾಡುತ್ತದೆ. ಆದ್ದರಿಂದ ಗ್ರೀನ್ ಟೀಯನ್ನುಹೆಚ್ಚಿಗೆ ಕುಡಿಯಿರಿ. ಒಂದು ವೇಳೆ ಗ್ರೀನ್ ಟೀ ಕುಡಿಯುವುದಿಲ್ಲ ಎಂದರೆ ಮಿಂಟ್ ಟೀ ಅಥವಾ ಪುದೀನಾ ಟೀ ಸಹ ಮಾಡಿ ಕುಡಿದರೆ ಮುಟ್ಟಿನ ಸಮಯದಲ್ಲಿ ಆಗುವ ನೋವು ಕಡಿಮೆ ಆಗುತ್ತದೆ. ಮುಟ್ಟಿನ ಸಮಯದಲ್ಲಿ ಅಗಸೆ ಬೀಜವನ್ನು ತಿನ್ನಬೇಕು. ಪ್ರತಿದಿನ ಅಗಸೆ ಬೀಜವನ್ನು ತಿನ್ನುತ್ತಿದ್ದರೆ ನಿಮಗೆ ಪಿ ಸಿ ಓ ಡಿ ಪ್ರಾಬ್ಲಮ್ ಬರುವುದಿಲ್ಲ. ಹಾಗೆ ಹತ್ತು ತುಳಸಿ ಎಲೆಯನ್ನು ಒಂದು ಅರ್ಧ ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರು ಆರಿದ ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಕುಡಿಯಬೇಕು. ಇದು ಮುಟ್ಟಿನ ಸಮಯದಲ್ಲಿ ತುಂಬಾ ಸಹಾಯ ಆಗುತ್ತದೆ. ಜೊತೆಗೆ ಒಂದು ಚಿಕ್ಕ ಶುಂಠಿ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ನಮ್ಮ ಮುಟ್ಟಿನ ಆರೋಗ್ಯವಾಗಿ

ಇರುತ್ತದೆ. ಮತ್ತು ಇದರಲ್ಲಿ ನಷ್ಟ ಆಗಿರುವ ಎನರ್ಜಿ ತಕ್ಷಣವೇ ಸಿಗುತ್ತದೆ. ಹಾಗೆಯೇ ರಾತ್ರಿ ಮಲಗುವಾಗ ಒಂದು ಲೋಟ ಹಾಲಿಗೆ ಗಸೆಗಸೆ ಯಾನ್ನೂ ಬಿಸಿ ಮಾಡಿ ಕುಡಿಯಬೇಕು. ಇದರಿಂದ ಮುಟ್ಟಿನ ಸಮಯದಲ್ಲಿ ನಮಗೆ ಆಗುವ ಆಯಾಸ ಮತ್ತು ಸುಸ್ತು ಕಡಿಮೆಯಾಗುತ್ತದೆ. ಜೊತೆಗೆ ಎನರ್ಜಿ ಬರುತ್ತದೆ. ಅಷ್ಟೇ ಅಲ್ಲದೆ ಇದು ನಿದ್ರೆ ಚೆನ್ನಾಗಿ ಬರಲು ಕೂಡ ಸಹಾಯ ಮಾಡುತ್ತದೆ. ಕೆಲವರಿಗೆ ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತದೆ. ಇದಕ್ಕೆ ಎರಡು ಚಮಚದಷ್ಟು ಮೆಂತೆಯನ್ನು ನೀರಿನಲ್ಲಿ ನೆನೆಸಿ ಆ ನೀರಿನ ಸಮೇತವಾಗಿ ಮೆಂತ್ಯೆ ಕಾಳನ್ನು ಸೇವಿಸಬೇಕು. ಒಂದು ಚಮಚ ಅಲೋವೆರಾ ಜ್ಯೂಸ್ ಒಂದು ಚಮಚ ಜೇನುತುಪ್ಪ ಈ ಎರಡು ಸಾಮಗ್ರಿಯನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿಯಬೇಕು. ಇದರಿಂದ ಆಗುವಂತಹ ಹೈ ಬ್ಲೀಡಿಂಗ್ ಅನ್ನು ತಡೆಯಲು ಸಹಾಯ ಆಗುತ್ತದೆ. ಈ ಎಲ್ಲ ವಿಚಾರಗಳನ್ನು ಪೀರಿಯಡ್ಸ್ ಸಮಯದಲ್ಲಿ ಮಾಡಬೇಕು. ಅಥವಾ ನಮ್ಮ ಪ್ರತಿ ನಿತ್ಯ ಡಯೆಟ್ ಆಹಾರದಲ್ಲಿ ಸೇರಿಸಿ ತಿಂದರೆ ಪಿ ಸಿ ಓ ಡಿ ಪ್ರಾಬ್ಲಮ್ ಬರುವುದಿಲ್ಲ. ಈ ಉತ್ತಮವಾದ ಮಾಹಿತಿ ಇಷ್ಟವಾದರೆ ಪ್ರತಿಯೊಬ್ಬ ಮಹಿಳೆಯರಿಗೆ ತಪ್ಪದೆ ಶೇರ್ ಮಾಡಿ.

LEAVE A REPLY

Please enter your comment!
Please enter your name here