ಹೊಟ್ಟೆಯ ಜಂತು ಹುಳುಗಳ ನಿವಾರಣೆಗೆ ಸೂಕ್ತ ರೀತಿಯ ಮನೆಮದ್ದು. ಹೊಟ್ಟೆ ಹಸಿವಾಗದೆ ಇರುವುದು ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು ಗ್ಯಾಸ್ಟ್ರಿಕ್ ಆಗುವುದು ವಾಂತಿ ಆಗುವುದು ವಾಕರಿಕೆ ಬರುವುದು ಮಲದ್ವಾರ ಹಾಗೂ ಮೂಗಿನಲ್ಲಿ ಯಾವಾಗಲೂ ತುರಿಕೆ ಅಥವ ವಿಚಿತ್ರ ಅನುಭವ ಇದ್ದರೆ ನಿಮಗೆ ಜಂತು ಹುಳುಗಳು ಆಗಿವೆ ಅಂತ ಕಂಡು ಹಿಡಿಯಬಹುದು ಹಾಗೇನೇ ಹೊಟ್ಟೆ ಆಗಾಗ ನೋವಾಗುತ್ತಿದ್ದರೆ ಮಲದ ಜೊತೆ ರಕ್ತ ಕೂಡ ಸೋರುತ್ತಿದ್ದರೆ ಮುಖದ ಮೇಲೆ ಬಿಳಿ ಕಲೆಗಳು ಆದರೆ ನಿಮಗೆ ಜಂತುಹುಳುಗಳು ಆಗಿವೆ ಎಂದು ತಿಳಿಯಬಹುದು ಈ ಎಲ್ಲ ಲಕ್ಷಣಗಳನ್ನು ನೀವು ಮಕ್ಕಳಲ್ಲೂ ನೋಡಬಹುದು ಈರೀತಿಯ ಲಕ್ಷಣ ಕಂಡು ಬಂದರೆ ಅವರಿಗೂ ಕೂಡ ಜಂತುಹುಳು ಆಗಿವೆ ಎಂದು ತಿಳಿಯಬಹುದು. ಹಾಗಾದರೆ ಜಂತುಹುಳುಗಳು ಹೇಗೆ ಆಗುತ್ತವೆ ನೋಡೋಣ ಬನ್ನಿ ಮಕ್ಕಳು ನೀರು ಮತ್ತು ಮಣ್ಣಿನಲ್ಲಿ ಆಟವಾಡುತ್ತಾರೆ ಆಗ ಅದರಲ್ಲಿ ಇರುವ ಕ್ರಿಮಿಗಳು ಮೊಟ್ಟೆಯ ಮೂಲಕ ಹೊಟ್ಟೆ ಸೇರುವ ಸಾಧ್ಯತೆ ಇರುತ್ತದೆ
ಹಾಗೇನೇ ಅಶುದ್ಧವಾದ ಆಹಾರವನ್ನು ಸೇವಿಸುವುದರಿಂದಲು ಕೂಡ ಈ ಹುಳುಗಳು ಆಗುತ್ತವೆ ಆದ್ದರಿಂದ ಶುದ್ಧವಾದ ಆಹಾರವನ್ನೇ ಸೇವಿಸಿ ಹಾಗೇನೇ ಹೊರಗಡೆ ಹೋಗಿ ಬಂದ ತಕ್ಷಣ ಕೈ ಕಾಲು ಮುಖವನ್ನು ಚೆನ್ನಾಗಿ ತೊಳೆಯಿರಿ ಉಗುರುಗಳನ್ನು ಕತ್ತರಿಸಿರಿ ಬಿಸಿ ಮಾಡಿ ಆರಿಸಿದ ನೀರನ್ನು ಮಕ್ಕಳಿಗೂ ಸಹ ಕುಡಿಸಿರಿ ಜೊತೆಗೆ ಸಿಹಿ ಪಧಾರ್ಥವನ್ನು ತಿನ್ನುವುದನ್ನು ಕಡಿಮೆ ಮಾಡಿ ಮಕ್ಕಳಿಗೂ ಕಡಿಮೆ ಮಾಡಿಸಿ. ಹಾಗೇನೇ ಈ ಜಂತುಹುಳುಗಳ ನಿವಾರಣೆಗೆ ಮನೆಮದ್ದು ಹೇಗೆ ತಯಾರಿಸಬೇಕು ಎಂಬುದನ್ನು ಈಗ ತಿಳಿಯೋಣ ಈ ಮನೆಮದ್ದನ್ನು ದೊಡ್ಡವರು ಹಾಗೂ ಮಕ್ಕಳು ಸಹ ಬಳಸಬಹುದು ಇಲ್ಲಿ ಸ್ವಲ್ಪ ಓಂಕಾಳನ್ನು ಅಥವಾ ಅಜೀವಾನ ತೆಗೆದುಕೊಂಡು ಈ ಅಜೀವಾನವನ್ನು ಕುಟ್ಟಿ ಪುಡಿ ಮಾಡಿಕೊಂಡು ಈ ಪುಡಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಬೇಕು. ಈ ಬೆಲ್ಲವನ್ನು ಏಕೆ ಸೇರಿಸಬೇಕು ಎಂದರೆ ಸಿಹಿ ಪಧಾರ್ಥ ಹೊಟ್ಟೆಗೆ ಹೋದ ತಕ್ಷಣ ಎಲ್ಲ ಜಂತುಹುಳುಗಳು ಇದನ್ನು ತಿನ್ನಲು ಬರುತ್ತವೆ ಆಗ ಈ ಅಜೀವಾನ ಆ ಜಂತುಹುಳುಗಳನ್ನು ನಾಶಪಡಿಸುತ್ತದೆ ಐದಾರು ವರ್ಷದ ಮಕ್ಕಳಾದರೆ ಅವರು ಸುಲಭವಾಗಿ ಓಂಕಾಳನ್ನು ತಿನ್ನುವುದಿಲ್ಲ
ಈ ಬೆಲ್ಲವನ್ನು ಸೇರಿಸಿ ಉಂಡೆರೀತಿ ಮಾಡಿಕೊಟ್ಟಾಗ ಅವರು ತಿನ್ನುತ್ತಾರೆ. ಇದು ತುಂಬಾ ಪರಿಣಾಮಕಾರಿಯಾಗಿದೆ ಇದನ್ನು ನೀವು ಸಹ ಬಳಸಬಹುದು ಇದೊಂದು ಒಳ್ಳೆಯ ಮನೆಮದ್ದು ಇದನ್ನು ಬೆಳಿಗ್ಗೆ ಖಾಲಿಹೋಟ್ಟೆಯಲ್ಲಿ ತಿನ್ನಲು ಕೊಡಬೇಕು ಈ ಮನೆಮದ್ದನ್ನು ತಿಂದ ನಂತರ ಅರ್ಧ ಗಂಟೆ ಏನನ್ನು ತಿನ್ನಬಾರದು ಮತ್ತು ಕುಡಿಯಬಾರದು ಈ ಮನೆಮದ್ದನ್ನು ನೀವು ನಿರಂತರವಾಗಿ 7 ದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ತಿಂದರೆ ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಅದೇರೀತಿ ನೀವು ದೊಡ್ಡವರಾದರೆ ಮೊದಲು ಸ್ವಲ್ಪ ಬೆಲ್ಲವನ್ನು ತಿಂದು ನಂತರ ಸ್ವಲ್ಪ ಸಮಯ ಬಿಟ್ಟು ನೀವು ಓಂಕಾಳನ್ನು ತಿನ್ನಬಹುದು ಅಥವಾ ನಿಮಗೆ ಹಾಗೇ ತಿನ್ನಲು ಆಗದಿದ್ದರೆ ನೀವು ಕೂಡ ಬೆಲ್ಲದಲ್ಲಿ ಸೇರಿಸಿ ತಿನ್ನಬಹುದು. ಇನ್ನು ಎರಡನೇ ಮನೆಮದ್ದು ಒಂದು ಲೋಟದಲ್ಲಿ ಕುದಿಸಿದ ನೀರನ್ನು ತೆಗೆದುಕೊಂಡು ಇದರಲ್ಲಿ 10 ರಿಂದ 15 ಲವಂಗ ಹಾಕಿ ಈ ನೀರನ್ನು 10 ನಿಮಿಷ ಹಾಗೆ ಮುಚ್ಚಿಡಿ ನಂತರ ನೀವು ಇದನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೆವಿಸಬೇಕು. ಇದನ್ನು ಸಹ 7 ದಿನಗಳ ವರೆಗೆ ಮಾಡುವುದರಿಂದ ಜಂತುಹುಳುಗಳು ಸಾಯುತ್ತವೆ. ಆದ್ದರಿಂದ ಸ್ನೇಹಿತರೆ ಇನ್ನುಮುಂದೆ ನಿಮ್ಮ ಮಕ್ಕಳಿಗೆ ಜಂತು ಹುಳುಗಳು ಆದರೆ ಸುಲಭವಾಗಿ ಕಂಡುಹಿಡಿದು ಅದಕ್ಕೆ ಮನೆಮದ್ದು ಮಾಡಿರಿ.