ಹೊಟ್ಟೆ ಉಬ್ಬರಕ್ಕೆ ಸೂಕ್ತ ರೀತಿಯ ಮನೆಮದ್ದು

93

ಹೊಟ್ಟೆನೋವು ಸಾಮಾನ್ಯವಾಗಿ ಹೊರಗಿನ ಆಹಾರವನ್ನು ಸೇವಿಸುವುದರಿಂದ ಹೆಚ್ಚಾಗಿ ಬರುತ್ತದೆ. ಇದು ಸಹಜವಾಗಿ ಎಲ್ಲ ವಯಸ್ಕರಲ್ಲಿ ಕಾಣುತ್ತದೆ. ಹಾಗಾದರೆ ಸ್ನೇಹಿತರೇ ನಿಮಗೆ ಯಾವುದೇ ರೀತಿಯಿಂದ ಹೊಟ್ಟೆ ನೋವು ಬರಬಾರದು ಮತ್ತು ಹೊರಗಡೆ ಆಹಾರವನ್ನು ಕೂಡ ಸೇವಿಸಬೇಕು ಎರಡು ಸಾಧ್ಯವಾಗಬೇಕಾದರೆ ಈ ಸುಲಭವಾದ ಮನೆಮದ್ದು ಉಪಯೋಗಿಸಿ. ಮತ್ತು ಈ ಒಂದು ಉತ್ತಮವಾದ ಮಾಹಿತಿಯನ್ನು ತಪ್ಪದೆ ಓದಿರಿ. ಹೊಟ್ಟೆ ಉಬ್ಬರ ಎಂದರೆ ಹೊಟ್ಟೆ ನೋವು ಅಥವಾ ಗ್ಯಾಸ್ ಪ್ರಾಬ್ಲಮ್. ಹೊಟ್ಟೆ ಉಬ್ಬರ ಸಾಮಾನ್ಯವಾಗಿ ದೇಹದಲ್ಲಿ ಆಹಾರವು ಚೆನ್ನಾಗಿ ಜೀರ್ಣವಾಗದೆ ಇದ್ದಾಗ ಹೊಟ್ಟೆ ಉಬ್ಬುತ್ತದೆ. ಹೊಟ್ಟೆ ನೋವು ಪ್ರಾರಂಭವಾಗುತ್ತದೆ. ಮತ್ತು ಹೊಟ್ಟೆ ಉಬ್ಬರಿಕೆ ಮತ್ತು ಗ್ಯಾಸ್ ಅಜೀರ್ಣವಾದ ಆಹಾರದಿಂದ ಬರುತ್ತದೆ. ಹೊಟ್ಟೆ ಉಬ್ಬರಿಕೆಗೆ ತಕ್ಷಣವೇ ಏನು ಮಾಡಬೇಕು ಎಂದು ನೋಡೋಣ. ಹೊಟ್ಟೆ ಉಬ್ಬರಿಕೆ ಕೆಲವೊಂದು ಸಾರಿ ಗ್ಯಾಸ್ಟ್ರಿಕ್ ನಿಂದ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ಅಜೀರ್ಣವಾದ ಆಹಾರದಿಂದ ಕಾಣಿಸಿಕೊಳ್ಳುತ್ತದೆ. ಈ ಹೊಟ್ಟೆ ಉಬ್ಬರಿಕೆ ಬಂದಾಗ ಸಹಜವಾಗಿ ಹೊಟ್ಟೆ ನೋವು ಬರುತ್ತದೆ. ಮತ್ತು ಹೊಟ್ಟೆ ಉಬ್ಬಲು ಪ್ರಾರಂಭವಾಗುತ್ತದೆ. ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಆಂತಹ ಸಮಯದಲ್ಲಿ ತಕ್ಷಣವೇ ಹೊಟ್ ವಾಟರ್ ಬ್ಯಾಗ್ ಅಥವ ಬಿಸಿ ನೀರಿನ ಬ್ಯಾಗ್ ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಂಡರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹಾಗೆಯೇ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಸ್ವಲ್ಪ ಸಮಯಕ್ಕೆ ನಿವಾರಣೆಯಾಗುತ್ತದೆ. ಜೊತೆಗೆ ಗ್ರೀನ್ ಟೀ ಅಥವಾ ಪುದೀನಾ ಟೀ ಕುಡಿಯುವುದರಿಂದ ಕೂಡ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಪುದೀನಾ ಟೀಯನ್ನು ಹೇಗೆ ಮಾಡಿಕೊಳ್ಳುವುದು ಎಂದರೆ ಪುದೀನವನ್ನು ನೀರಿನಲ್ಲಿ ಚೆನ್ನಾಗಿ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಜೇನತುಪ್ಪವನ್ನು ಹಾಕಿ ಕುಡಿಯುವುದರಿಂದ ಹೊಟ್ಟೆ ನೋವು ಮತ್ತು ಗ್ಯಾಸ್ ಪ್ರಾಬ್ಲಮ ಮಾಯವಾಗುತ್ತದೆ. ಹಾಗೆಯೇ ಹೊಟ್ಟೆ ಉಬ್ಬರವಾದಾಗ ಸ್ವಲ್ಪ ಸಮಯ ವಾಕ್ ಮಾಡಿದರೆ ಇದರಿಂದ ದೇಹಕ್ಕೆ ರೀಲಿಫ್ ಸಿಗುತ್ತದೆ. ಮತ್ತು ಹೊಟ್ಟೆ ಉಬ್ಬರ ತೊಂದರೆ ಮಾಯವಾಗುತ್ತದೆ. ಮತ್ತು ಶುಂಠಿ ಕಷಾಯವನ್ನು ಮಾಡಿ ಕುಡಿದರೆ ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ. ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಮತ್ತು ಅದರಲ್ಲಿ ಸ್ವಲ್ಪ ನಿಂಬೆ ರಸವನ್ನು ಮತ್ತು ಜೇನತುಪ್ಪವನ್ನು ಹಾಕಿ ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ನೋವು ಕಡಿಮೆ

ಆಗುತ್ತದೆ. ಮತ್ತೊಂದು ಮನೆಮದ್ದು ಎಂದರೆ ಜೀರಿಗೆಯನ್ನು ಚೆನ್ನಾಗಿ ಬಾಯಲ್ಲಿ ಇಟ್ಟು ಅಗೆದು ತಿಂದರೆ ಗ್ಯಾಸ್ ತೊಂದರೆ ಮತ್ತು ಹೊಟ್ಟೆ ನೋವು ಅಥವಾ ಉಬ್ಬರ ಕಡಿಮೆ ಆಗುತ್ತದೆ.
ಹೊಟ್ಟೆನೋವು ಕಡಿಮೆಯಾಗಬೇಕು ಎಂದರೆ ದೇಹದಲ್ಲಿ ತಿಂದ ಆಹಾರವು ಚೆನ್ನಾಗಿ ಜೀರ್ಣವಾಗಬೇಕು. ನಿಮ್ಗೆ ಗೊತ್ತಿರುವ ಹಾಗೆ ಮೇಲೆ ಹೇಳಿರುವ ಕಷಾಯವನ್ನು ಮಾಡಿ ಕುಡಿಯುವುದರಿಂದ ಹೊಟ್ಟೆ ಉಬ್ಬರ, ನೋವು ಕಡಿಮೆಯಾಗುತ್ತದೆ ಎಂದು. ಇನ್ನು ಯಾವ ಹಣ್ಣು ಮತ್ತು ಆಹಾರವನ್ನು ತಿಂದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂದು ತಿಳಿಯೋಣ. ಮೋಸಂಬಿ ಹಣ್ಣು ಮತ್ತು ಊಟ ಆದ ನಂತರ ಕಬ್ಬು ತಿನ್ನುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಮತ್ತು ಮುಖ್ಯವಾಗಿ ಪುದೀನಾ ಸೊಪ್ಪಿನ ಚಹಾವನ್ನು ತಯಾರಿಸಿ ಬಳಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಪುದೀನಾ ಎಲೆ ಮತ್ತು ಚಟ್ನಿ ಮಾಡಿ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಈ ಎಲ್ಲ ಮನೆಮದ್ದು ಹೊಟ್ಟೆ ಉಬ್ಬರ ಬಂದಾಗ ಮಾಡಿದರೆ ಉತ್ತಮವಾದ ಫಲಿತಾಂಶ ಸಿಗುತ್ತದೆ.

LEAVE A REPLY

Please enter your comment!
Please enter your name here