ಹೊಟ್ಟೆ ಕೊಬ್ಬು ಸಂಪೂರ್ಣ ಕರಗಿಸುತ್ತದೆ ಈ ಮನೆ ಮದ್ದು

88

ಹೊಟ್ಟೆಯ ಕೊಬ್ಬು ಎನ್ನುವುದು ನಮ್ಮನ್ನು ನಾಲ್ಕು ಜನರು ನೋಡಿ ನಗುವಂತೆ ಮಾಡುತ್ತದೆ ಡೊಳ್ಳು ಹೊಟ್ಟೆ, ಹೊಟ್ಟೆಬುರುಕ ಎಂದು ಕರೆಯುತ್ತಾರೆ. ಇದರಿಂದ ಹೊಟ್ಟೆ ಮುಂದೆ ಇರುವಂತವರಿಗೆ ಮುಜುಗರವಾಗುವಂತಹ ಸನ್ನಿವೇಶಗಳು ಎದುರಾಗುತ್ತದೆ. ಇನ್ನು ಕೆಲವರು ಇಂತಹ ಮಾತುಗಳನ್ನು ಕೇಳಿ ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ಘಟನೆಗಳು ನಮ್ಮ ಮುಂದೆ ಸಾಕಷ್ಟಿದೆ. ಈಗಿನ ನಮ್ಮ ಜೀವನ ಶೈಲಿಯಲ್ಲಿ ನಾವು ನಮ್ಮ ದೇಹಕ್ಕೆ ಅಗತ್ಯವಾದಂತಹ ಕೆಲಸ ಕೊಡುತ್ತಿಲ್ಲ. ಇದರ ಒಂದು ಪರಿಣಾಮವಾಗಿ ದಿನೇ ದಿನೇ ನಮ್ಮ ದೇಹದ ತೂಕದ ಪ್ರಮಾಣ ಹೆಚ್ಚಾಗುತ್ತಿದೆ. ಹೊಟ್ಟೆಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಅನೇಕ ಆರೋಗ್ಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ. ಇಂದಿನ ದಿನಗಳಲ್ಲಿ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಸಮಸ್ಯೆ ಮಿತಿಮೀರಿದೆ ಎನ್ನಬಹುದು. ಆದ್ದರಿಂದ ಇದನ್ನು ಕಡಿಮೆ ಮಾಡಿಕೊಳ್ಳ ಬೇಕಾದರೆ ಸಾಧ್ಯವಾದಷ್ಟು ಅತೀ ಕಡಿಮೆ ಖರ್ಚಿನಲ್ಲಿ ಮನೆಮದ್ದನ್ನು ಕಂಡುಕೊಳ್ಳಬಹುದಾಗಿದೆ.

ಇದರಿಂದ ಸಾಧ್ಯವಾದಷ್ಟು ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿ ಕಾಣಬಹುದು. ಹಾಗಾದರೆ ಬನ್ನಿ ಹೊಟ್ಟೆಯ ಕೊಬ್ಬನ್ನು ನಿವಾರಿಸುವ ನೈಸರ್ಗಿಕ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ. ಇದು ನಮ್ಮ ಆರೋಗ್ಯವನ್ನು ಉತ್ತಮ ವಾಗಿರಿಸುತ್ತದೆ. ಈ ಹೊಟ್ಟೆಯ ಬೊಜ್ಜನ್ನು ಕರಗಿಸಲು ಮುಖ್ಯವಾಗಿ ಬೇಕಾಗಿರುವುದು ನಿಂಬೆ. ಈ ನಿಂಬೆಹಣ್ಣು ಬಳಸಿ ನಮ್ಮ ಹೊಟ್ಟೆಯ ಬೊಜ್ಜನ್ನು ವೇಗ ಕರಗಿಸಬಹುದು. ನಿಂಬೆಹಣ್ಣಿನಲ್ಲಿರುವ ಉನ್ನತ ಮಟ್ಟದ ವಿಟಮಿನ್ ಸಿ ಮತ್ತು ಆಮ್ಲವು ತೂಕವನ್ನು ಕಳೆದುಕೊಳ್ಳಲು ತುಂಬಾ ಸಹಕಾರಿಯಾಗಿದೆ. ನಿಂಬೆಹಣ್ಣು ಚಯಾಪಚಯ ಕ್ರಿಯೆ ವೃದ್ಧಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಕೊಬ್ಬು ಮತ್ತು ವಿಷಕಾರಿ ಸಕ್ಕರೆ ಅಂಶಗಳನ್ನು ಇದು ಹೀರಿಕೊಳ್ಳುವುದನ್ನು ತಡೆಗಟ್ಟುತ್ತದೆ. ಇದರಿಂದ ನೀವು ನಿಮ್ಮ ತೂಕವನ್ನು ಕಳೆದುಕೊಳ್ಳುವ ಯೋಚನೆಯಿದ್ದರೆ ನಿಮ್ಮ ತೂಕವನ್ನು ನೀವು ಸುಲಭವಾಗಿ ಹಾಗೂ ವೇಗವಾಗಿ ಕಳೆದುಕೊಳ್ಳಬಹುದು.

ನೀವು ಜಿಮ್ ಗೆ ಹೋಗುವಂತಹ ಅವಶ್ಯಕತೆ ಇರುವುದಿಲ್ಲ. ಹೆಚ್ಚು ಕಠಿಣವಾದ ವ್ಯಾಯಾಮ ಮಾಡುವಂತಹ ಅವಶ್ಯಕತೆ ಇಲ್ಲದೇ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಇದನ್ನು ಬಳಸುವ ವಿಧಾನವೆಂದರೆ ಒಂದು ಲೋಟದಲ್ಲಿ ನಿಂಬೆಹಣ್ಣಿನ ಜ್ಯೂಸ್‍ನ ಜೋತೆಗೆ ನಿಮ್ಮ ದಿನದ ಆರಂಭ ಮಾಡಬಹುದಾಗಿದೆ. ನಮ್ಮ ದಿನ ನಿತ್ಯದ ಒತ್ತಡದಲ್ಲಿ ಯಕೃತ್ ಗೆ ಕೊಬ್ಬನ್ನು ಕರಗಿಸಲು ಸಾಧ್ಯವಾಗುವುದಿಲ್ಲ ನಿಂಬೆಯು ಯಕೃತ್ತನ್ನು ಚುರುಕುಗೊಳಿಸುತ್ತದೆ ಮತ್ತು ಅದು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ನಿಂಬೆರಸ, ಜೇನುತುಪ್ಪ ಹಾಕಿ ಕೊಂಡು ಬಿಸಿ ನೀರು ಕುಡಿದರೆ ಅದರಿಂದ ಹಲವು ಆರೋಗ್ಯಕರ ಲಾಭಗಳು ನಮಗೆ ಸಿಗುತ್ತದೆ ನಿಂಬೆರಸ ಮತ್ತು ಜೇನು ತುಪ್ಪ ಮಿಶ್ರಣವು ಕೊಬ್ಬನ್ನು ತುಂಬಾ ವೇಗವಾಗಿ ಕರಗಿಸುತ್ತದೆ ಜೇನುತುಪ್ಪದಲ್ಲಿ ಇರುವಂತಹ ನೈಸರ್ಗಿಕ ಎಲ್ಲಾ ರೀತಿಯ ದೇಹದ ಅವರಿಗೂ ಮತ್ತು ವಯಸ್ಕರಿಗೂ ಇದು ಸಹಕರಿಸುತ್ತದೆ.

ಜೇನುತುಪ್ಪವು ಹೊಟ್ಟೆಯ ಕೊಬ್ಬನ್ನು ಕರಗಿಸಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ 300ಮಿ.ಲೀ ನೀರಿಗೆ 1 ಒಂದು ಚಮಚ ನಿಂಬೆರಸ ಬೆರೆಸಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಅದನ್ನು ಸರಿಯಾದ ಪ್ರಮಾಣದಲ್ಲಿ ಕಲಕಿ ಇದನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಬೇಕು. ಬೆಳಗಿನ ಉಪಹಾರಕ್ಕಿಂತ 30 ನಿಮಿಷ ಮೊದಲು ಮತ್ತು ರಾತ್ರಿ ಮಲಗುವುದಕ್ಕಿಂತ 30 ನಿಮಿಷ ಮೊದಲು ಇದನ್ನು ತೆಗೆದುಕೊಳ್ಳಬೇಕು.ಇದನ್ನು ನಾವು ನಿಯಮಿತವಾಗಿ ಕುಡಿದರೆ ಆಗ ಒಂದು ವಾರದಲ್ಲಿ ನಮ್ಮ ದೇಹದ ಕೊಬ್ಬು ಕರಗಿ ನಮ್ಮ ಹೊಟ್ಟೆ ಸ್ಲಿಮ್ ಆಗುತ್ತದೆ. ತುಂಬಾ ಜನರಿಗೆ ಲಿಂಬೆಹುಳಿ ಮತ್ತು ಅದನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯಲು ಸಾಧ್ಯವಿಲ್ಲ ಹಾಗೂ ಅದನ್ನು ಕೆಲವರು ಇಷ್ಟ ಪಡುವುದಿಲ್ಲ ಆದ್ದರಿಂದ ಈ ಮಿಶ್ರಣಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಬಹುದು.ಉಪ್ಪುಕೂಡ ಕೊಬ್ಬು ಕರಗಿಸಲು ತುಂಬಾ ಸಹಾಯ ಮಾಡುತ್ತದೆ. ಇದಲ್ಲದೇ ಜೀರ್ಣಕ್ರಿಯೆಗೆ ಇದು ನೆರವಾಗುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯಿಂದ ಕೊಬ್ಬನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ ಅರ್ಧ ಲಿಂಬೆರಸವನ್ನು 250 ಮಿ.ಲೀ ಗ್ರಾಂ

ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಹಿಂಡಿಕೊಳ್ಳಬೇಕು.ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಬೇಕು. ಇದನ್ನು ತುಂಬಾ ದಿನಗಳ ಕಾಲ ಮಾಡಬಾರದು ಕೆಲವು ದಿನಗಳ ಕಾಲ ಮಾತ್ರ ಇದನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ ಯಾಕೆಂದರೆ ಅತೀಯಾದರೆ ಅದು ಹೊಟ್ಟೆಯ ಆಮ್ಲೀಯತೆಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ನಿಯಮಿತವಾಗಿ ಮಾತ್ರ ಇದನ್ನು ಮಾಡುವುದರಿಂದ ನಮ್ಮ ಹೊಟ್ಟೆಯ ಕೊಬ್ಬನ್ನು ನಾವು ಕರಗಿಸಿಕೊಳ್ಳಬಹುದು. ಮತ್ತೊಂದು ಸರಳ ಉಪಾಯವೆಂದರೆ ಶುಂಠಿ. ಮನೆ ಮದ್ದಿನಂತಿರುವ ಶುಂಠಿಚಹದಲ್ಲಿ ಅದ್ಬುತವಾದಂತಹ ಔಷಧೀಯ ಗುಣ ಗಳಿರುತ್ತವೆ. ಇದು ಗಂಟಲಿನ ಊತ ಕಡಿಮೆ ಮಾಡುವುದರಿಂದ ಋತುಚಕ್ರದಲ್ಲಿ ಉಂಟಾಗುವ ನೋವನ್ನು ನಿವಾರಿಸುತ್ತದೆ. ನಿಮಗಿದು ಗೊತ್ತೆ ಶುಂಠಿ ಚಹದಲ್ಲಿ ಅಥವಾ ಶುಂಠಿಯನ್ನು ಸೇವಿಸುವುದರಿಂದ ನಾವು ತೂಕವನ್ನು ಇಳಿಸಿಕೊಳ್ಳಬಹುದು.ಶುಂಠಿ ಧರ್ಮೋಜನಿಕ್ ಆಗಿರುತ್ತದೆ. ದೇಹದ ತಾಪಮಾನ ಏರಿಸುವುದು, ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸುವುದು ಇದರ ಕೆಲಸವಾಗುತ್ತದೆ.

ಇದರಿಂದ ಹೊಟ್ಟೆಯ ಕೊಬ್ಬು ಕರಗಿಸಲು ನಾವು ದಿನ ನಿತ್ಯದ ಶುಂಠಿ ಚಹ ಅಥವಾ ಶುಂಠಿಯನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆ ಕೊಬ್ಬನ್ನು ಕರಗಿಸುವ ಇನ್ನೊಂದು ನೈಸರ್ಗಿಕ ವಿಧಾನ ಏನೆಂದರೆ ಬಾದಾಮಿ ಸೇವನೆ. ರುಚಿಯಾಗಿರುವ ಬಾದಾಮಿ ಕೂಡ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದರೆ ಬಾದಾಮಿಯಲ್ಲಿರುವ ಕ್ಯಾಲೋರಿಗಳು ತುಂಬಾ ಕೆಟ್ಟದ್ದು ಎಂಬ ಭಾವನೆಯಿದೆ. ಆದರೆ ನಿಜಕ್ಕೂ ಬಾದಾಮಿ ತೂಕ ಇಳಿಸಲು ನೆರವಾಗುತ್ತದೆ. ನಮ್ಮ ಹೊಟ್ಟೆಯಲ್ಲಿ ಹೆಚ್ಚಾಗಿರುವ ಕೊಬ್ಬನ್ನು ಕರಗಿಸುವುದಲ್ಲದೇ ನಮ್ಮ ತೂಕ ಇಳಿಸಲು ತುಂಬಾ ನೆರವಾಗುತ್ತದೆ. ಈ ಒಂದು ಬಾದಾಮಿಯನ್ನು ನಾವು ಯಾವ ರೀತಿ ಸೇವಿಸಬೇಕು ಎಂದರೆ ರಾತ್ರಿ ವೇಳೆ 6 ಅಥವಾ 8 ಬಾದಾಮಿ ಬೀಜಗಳನ್ನು ನೀರಿನಲ್ಲಿ ಹಾಕಿ ನೆನೆಸಿಡಬೇಕು ಬೆಳಗ್ಗೆ ಎದ್ದ ಬಳಿಕ ಇದರ ಮೇಲಿನ ಸಿಪ್ಪೆಯನ್ನು ತೆಗೆದುಹಾಕಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹೀಗೆ ಮಾಡುವುದರಿಂದ ನಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಈ ಎಲ್ಲಾ ವಿಧಾನಗಳಿಂದ ನಮ್ಮ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಯಾವುದೇ ಖರ್ಚಿಲ್ಲದೇ ಮನೆಯ ಮದ್ದಿನಿಂದ ಕರಗಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here