ಹೋಂಡಾ ಕಂಪನಿ ನಿಜಕ್ಕೂ ಸೋತು ಗೆದ್ದ ಕಥೆ

76

ಹೋಂಡಾ ಕಂಪನಿ ಹೀಗೂ ಸಹ ನೆಲೆ ನಿಂತಿದೆ. ಹೋಂಡಾ ಸ್ಥಾಪಕ ಸಿಯೋ ಚೋರಿ ಹೋಂಡಾ ಹುಟ್ಟಿದ್ದು 1906 ನವೆಂಬರ್ 17 ಜಪಾನ್ ನಲ್ಲಿ ಇವರ ಜನನವಾಗುತ್ತದೆ ಕೆಳ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದರು ಆದರೆ ಹೊಂಡಾಗೆ ಸಮಾಜದಲ್ಲಿ ಒಂದು ಬದಲಾವಣೆಯನ್ನು ತರುವ ಸಾಧನೆ ಮಾಡುವ ಬಯಕೆ ಇತ್ತು ಯಂತ್ರೋಪಕರಣಗಳಲ್ಲಿ ಆಸಕ್ತಿ ಹೊಂದಿದ್ದು ಮುಂದೆ ಅಭಿಯಂತರರ ಕಾಲೇಜು ಸೇರಿದ ವಾಹನಗಳಿಗೆ ಪಿಸ್ಟನ್ ರಿಂಗಗಳನ್ನು ತಯಾರಿಸುವ ಉಪಾಯ ಬಂದು ಆಗ ಆತ ಶಾಲೆಯ ವರ್ಕ ಶಾಪ್ ನಲ್ಲಿ ಹಗಲು ರಾತ್ರಿ ಕಷ್ಟಪಟ್ಟ ಒಂದು ಅದ್ಭುತ ವಿನ್ಯಾಸವನ್ನು ಮಾಡಿ ಟೊಯೊಟ ಕಂಪನಿಗೆ ಮಾರುತ್ತೇನೆ ಎಂಬ ನಂಬಿಕೆ ಹೋಂಡಾಗೆ ಇತ್ತು ಮದುವೆಯಾಗಿತ್ತು ಆಗ ಪಿಸ್ಟನ್ ತಯಾರಿಕೆಗೆ ಹಣದ ಕೊರತೆಯಿಂದ ಹೆಂಡತಿಯ ವಡವೆಯನ್ನು ಅಡವಿಟ್ಟ ಒಂದು ಪ್ರೊಟೊ ಟೈಪ್ ತಯಾರಿಸಿ ಅದನ್ನು ಟೊಯೊಟ ಕಂಪನಿಗೆ ತೆಗೆದುಕೊಂಡು ಹೋದ ಆದರೆ ಅದನ್ನು ಆ ಕಂಪನಿ ನಿರಾಕರಿಸಿತು ಆಗ ಅವನನ್ನು ನೋಡಿ ಜನ ನಕ್ಕರು

ಮತ್ತೆ ಕೆಲಸ ಪ್ರಾರಂಭಿಸಿದ ಸುಮಾರು 2 ವರ್ಷದ ನಂತರ ಮತ್ತೊಂದು ವಿನ್ಯಾಸವನ್ನು ತಯಾರಿಸಿ ಟೊಯೊಟ ಕಂಪನಿಗೆ ತಂದ ಅದನ್ನು ನೋಡಿ ಆ ಕಂಪನಿ ಹೋಂಡಾಗೆ ಪಿಸ್ಟನ್ ರಿಂಗನ್ನು ತಯಾರಿಸಲು ಪ್ಯಾಕ್ಟರಿ ತೆರೆಯಲು ಹಣವನ್ನು ನೀಡಿತು ಇದರ ಪ್ರೋತ್ಸಾಹದಿಂದ ಖುಷಿಯಾದ ಹೋಂಡಾ ಪ್ಯಾಕ್ಟರಿ ಕಟ್ಟಿದ ಆಗ ಜಪಾನ್ ನ ವಿವಿಧ ನಗರಗಳಲ್ಲಿ ಭೂಕಂಪ ಅಪ್ಪಳಿಸಿತು ಹೋಂಡಾ ಕಟ್ಟಿದ ಪ್ಯಾಕ್ಟರಿ ಧರೆಗುರುಳಿತು. ಹೊಂಡಾ ಕಂಪನಿ ಗುಂಪು ಇದನ್ನು ನೋಡಿ ಕಣ್ಣೀರಿಟ್ಟಿತು ಆದರೆ ಹೋಂಡಾ ಮಂದಹಾಸದಿಂದಲೇ 2ನೇ ಬಾರಿ ಕಾರ್ಖಾನೆ ನಿರ್ಮಾಣ ಕೆಲಸ ಸಾಗಿತ್ತು ಅದು ಪೂರ್ಣವಾಗುವ ಮೊದಲೇ ಜಪಾನ್ 2ನೆ ವಿಶ್ವ ಯುದ್ಧವನ್ನು ಪ್ರವೇಶಿಸಿತು ದೇಶಾದ್ಯಂತ ಸಿಮೆಂಟ್ ಪೂರೈಕೆ ನಿಂತಿತು ಆಗ ಹೋಂಡಾ ನಾವೇ ಸಿಮೆಂಟ್ ತಯಾರಿಸೊಣ ಎಂದು ಹೋಂಡಾ ಮತ್ತು ತಂಡ ಸಿಮೆಂಟ್ ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿಯಿತು.

ಆಗ ತಾವೇ ತಯಾರಿಸಿದ ಸಿಮೆಂಟ್ ಬಳಸಿ ಹೋಂಡಾ ತಂಡ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿತು. ಆದರೆ ಒಂದು ದಿನ ಅಮೆರಿಕನ್ ಪಡೆಗಳು ಜಪಾನ್ ಮೇಲೆ ವಾಯುದಾಳಿ ನಡೆಸಿದಾಗ ಹೋಂಡಾ ಕಾರ್ಖಾನೆ ಬಾಂ ಬ್ ದಾಳಿಗೆ ತುತ್ತಾಯಿತು ಆಗ ಜಪಾನ್ ನಲ್ಲಿ ಸ್ಟೀಲ್ ಅಭಾವ ಎದುರಾಯಿತು ಆಗ ಅಮೆರಿಕದ ಯುದ್ಧ ವಿಮಾನಗಳು ಇಂಧನದ ಟ್ಯಾಂಕಗಳನ್ನು ಹೊತ್ತು ಹಾರುತ್ತಿದ್ದವು ಇಂಧನ ಬಳಸಿದ ನಂತರ ಟ್ಯಾಂಕ ಗಳನ್ನು ಕೆಳಗೆ ಬಿಸಾಡುತ್ತಿದ್ದರು ಹೀಗೆ ಜಪಾನ್ ತುಂಬೆಲ್ಲ ಬಿಸಾಡಿದರು ನಂತರ ಹೋಂಡಾ ಅವುಗಳನ್ನು ಕರಗಿಸಿ ತನ್ನ ಕಾರ್ಖಾನೆ ನಿರ್ಮಾಣಕ್ಕೆ ಬಳಸಿದ ಆ ಸ್ಟಿಲ್ ಟ್ಯಾಂಕಗಳನ್ನು ಹೋಂಡಾ ಅಮೆರಿಕದ ಅಧ್ಯಕ್ಷ ಟ್ರುಮನ್ ರ ಕೊಡುಗೆ ಎಂದು ಕರೆದ ಆದರೆ ಸಮಸ್ಯೆ ಇಷ್ಟಕ್ಕೆ ನಿಲ್ಲದೆ ಯುದ್ಧದ ನಂತರ ಜಪಾನ್ ಗೆ ತೀವ್ರ ಇಂಧನದ ಅಭಾವ ಎದುರಾಯಿತು ಇಂಧನವೇ ಇಲ್ಲ ಎಂದ ಮೇಲೆ ಕಾರನ್ನು ಕೊಳ್ಳುವವರ್ಯಾರು ಹೀಗಾಗಿ ಟೊಯೊಟ ಕಂಪನಿ ಕಾರು ಉತ್ಪಾದನೆಯನ್ನು ನಿಲ್ಲಿಸಿತು

ಹೀಗಾಗಿ ಹೋಂಡಾಗೆ ಪಿಸ್ಟನ್ ರಿಂಗಗಳಿಗೆ ಬೇಡಿಕೆ ಬರಲಿಲ್ಲ ಆ ಸಮಯದಲ್ಲಿ ಇಂಧನ ಕೊರತೆ ಇದ್ದ ಕಾರಣ ಕಾಲ ನಡಿಗೆಯಲ್ಲಿ ಸಾಗಬೇಕಿತ್ತು ಇಲ್ಲವೇ ಸೈಕಲ್ ಬಳಸಬೇಕಿತ್ತು ಇದನ್ನು ಗಮನಿಸಿದ ಹೋಂಡಾಗೆ ಸೈಕಲ್ ಗೆ ಚಿಕ್ಕ ಇಂಜಿನ್ ಕೊಡಿಸಿದರೆ ಹೇಗೆ ಎನ್ನುವ ಉಪಾಯ ಬಂತು ಅದನ್ನು ಕಾರ್ಯರೂಪಕ್ಕೆ ತಂದನು ಹೋಂಡಾ ಮತ್ತು ತಂಡ ಬೈಕ್ ಇಂಜಿನ್ ನ್ನು ತಯಾರಿಸಿತು ಕೆಲವೇ ವರ್ಷಗಳಲ್ಲಿ ಇವು ಪ್ರಖ್ಯಾತವಾದವು ಅವುಗಳನ್ನು ಯುರೋಪ್ ಮತ್ತು ಅಮೆರಿಕಾಕ್ಕೂ ಸರಬರಾಜು ಮಾಡಲಾಯಿತು. 1970 ರಲ್ಲಿ ಹೋಂಡಾ ಕಂಪನಿ ಚಿಕ್ಕ ಕಾರುಗಳ ಉತ್ಪಾಧನೆಯನ್ನು ಆರಂಭಿಸಿತು ಅವು ಕೂಡ ಲೋಕ ಪ್ರಿಯವಾದವು ಇವತ್ತಿಗೂ ಕೂಡ ಹೋಂಡಾ ಕಂಪನಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಇದಕ್ಕೆ ಹೇಳುವುದು ಸತತ ಪ್ರಯತ್ನವೇ ಸಾಧನೆಯ ರಹಷ್ಯ ಎಂದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here