ಕಡಿಮೆ ಬೆಲೆಗೆ ಮನೆಯಲ್ಲಿಯೇ ಹಾರ್ಲಿಕ್ಸ್ ತಯಾರು ಮಾಡಬಹುದು

51

ಮನೆಯಲ್ಲಿಯೇ ಸುಲಭವಾಗಿ ಹೇಗೆ ಹಾರ್ಲಿಕ್ಸ್ ತಯಾರಿಸುವುದು ತಿಳಿಯಲು ನೋಡಿ. ನಮಸ್ಕಾರ ಸ್ನೇಹಿತರೇ ಸ್ನೇಹಿತರೇ ಇಂದಿನ ಲೇಖನದಲ್ಲಿ ಹಾರ್ಲಿಕ್ಸ್ ಪುಡಿಯನ್ನು ಮನೆಯಲ್ಲಿ ಯಾವ ರೀತಿ ತಯಾರಿಸಿ ಕೊಳ್ಳುವುದೆಂದು ತಿಳಿದುಕೊಳ್ಳೋಣ. ಕಡಿಮೆ ವಸ್ತುಗಳನ್ನು ಬಳಕೆ ಮಾಡಿ ಸುಲಭವಾಗಿ ರುಚಿಕರ ಮತ್ತು ಆರೋಗ್ಯಕರ ಹಾರ್ಲಿಕ್ಸ್ ತಯಾರಿಸಿ ಕೊಳ್ಳಬಹುದು. ಹಾಗಾದರೆ ಬನ್ನಿ ಈ ಹಾರ್ಲಿಕ್ಸ್ ಪುಡಿಯನ್ನು ಯಾವ ರೀತಿ ತಯಾರಿಸುವ ಎಂದು ನೋಡೋಣ. ಹಾರ್ಲಿಕ್ಸ್ ಪುಡಿಯನ್ನು ತಯಾರಿಸುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೋಡೋಣ ಚಿಕ್ಕ ಗಾತ್ರದಲ್ಲಿ ಒಂದು ಕಪ್ ನಷ್ಟು ಗೋಧಿಯನ್ನು ತೆಗೆದುಕೊಳ್ಳೋಣ. ಈ ಗೋಧಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ನೀರು ತೆಗೆದು ಒಣಗಿಸಿ ತೆಗೆದುಕೊಳ್ಳಬೇಕು. ನಂತರ ಕಾಲು ಕಪ್ ಅಷ್ಟು ಓಟ್ಸ್ ಅನ್ನು ತೆಗೆದುಕೊಳ್ಳೋಣ. ತದ ನಂತರ ಓಟ್ಸ್ ಎಷ್ಟು ಪ್ರಮಾಣದಲ್ಲಿ ತೆಗೆದು ಕೊಂಡಿದ್ದಿರಾ ಅಷ್ಟೇ ಪ್ರಮಾಣದಲ್ಲಿ ಶೇಂಗಾವನ್ನೂ ತೆಗೆದುಕೊಳ್ಳಿ. ನಂತ್ರ ಹತ್ತು ಗೋಡಂಬಿ ಹಾಗೂ ಹತ್ತು ಬಾದಾಮಿಯನ್ನು ತೆಗೆದುಕೊಳ್ಳೋಣ. ಇದರ ಜೊತೆಗೆ ಇನ್ನೂ ಕೆಲವು ವಸ್ತುಗಳನ್ನು ಬಳಕೆ ಮಾಡೋಣ. ಅದಕ್ಕಿಂತ ಮುಂಚೆ ಈ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಮೊದಲಿಗೆ ಗೋಧಿಯನ್ನು ಚೆನ್ನಾಗಿ ಅದರ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ.

ಆಮೇಲೆ ಗೋಧಿಯನ್ನು ತಣ್ಣಗಾಗಲೂ ಬಿಡಬೇಡಿ ಸ್ವಲ್ಪ ಉಗುರು ಬೆಚ್ಚಗೆ ಇರುವಾಗಲೇ ಪುಡಿ ಮಾಡಿಕೊಳ್ಳಿ. ಓಟ್ಸ್ ಅನ್ನು ಕೂಡ ಬಣ್ಣ ಬದಲಾಗುವವರೆಗೂ ಚೆನ್ನಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು. ಅದೇ ರೀತಿ ಗೋಡಂಬಿ ಮತ್ತು ಬಾದಾಮಿ ಅನ್ನು ಕೂಡ ಹುರಿದು ಪುಡಿ ಮಾಡಿಕೊಳ್ಳೋಣ. ಇನ್ನೂ ಶೇಂಗಾ ಬೀಜವನ್ನು ಕೂಡ ಹುರಿದು ಪುಡಿ ಮಾಡಿಕೊಳ್ಳಿ. ಗೋಧಿ ಓಟ್ಸ್ ಡ್ರೈ ಫ್ರೂಟ್ಸ್ ಶೇಂಗಾ ಬೀಜ ಎಲ್ಲವನ್ನು ಚೆನ್ನಾಗಿ ಹುರಿದು ಮಿಕ್ಸ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡಿದ್ದು ಈಗ ಆಗಿದೆ. ಇದರ ಜೊತೆಗೆ ಮೂರು ದೊಡ್ಡ ಚಮಚದಷ್ಟು ನಾವು ಹಾಲಿನ ಪುಡಿಯನ್ನು ಸೇರಿಸಿಕೊಳ್ಳೋಣ. ಜೊತೆಗೆ ಸಕ್ಕರೆಯನ್ನು ನೀವು ಪುಡಿ ಮಾಡಿ ಇದರೊಂದಿಗೆ ಸೇರಿಸಿಕೊಳ್ಳಬಹುದು. ಇದರೊಂದಿಗೆ ಚಿಟಿಕೆ ಉಪ್ಪು ಸೇರಿಸಿ ಕೊಳ್ಳಿ. ಹಾರ್ಲಿಕ್ಸ್ ನಲ್ಲಿ ಉಪ್ಪು ಸೇರಿಸುತ್ತಾರೆ ಅಂತ ನಿಮ್ಮ ಪ್ರಶ್ನೆ ಆಗಿರಬಹುದು. ಹೌದು ಇದು ನಿಜ ನೀವು ಹಳೆಯದಾಗಿ ಬಳಕೆ ಮಾಡುವ ಹಾರ್ಲಿಕ್ಸ್ ಬಾಟಲ್ ಹಿಂದೆ ಕೊಟ್ಟಿರುವ ಸಾಮಗ್ರಿಗಳನ್ನು ಒಂದು ಬಾರಿ ಓದಿ ಅರಿತು ಕೊಳ್ಳಬಹುದು. ಈ ಹಾರ್ಲಿಕ್ಸ್ ಜೊತೆಗೆ ಕೋಕೋ ಪೌಡರ್ ಅನ್ನು ಕೂಡ ಸೇರಿಸಿ ಕೊಳ್ಳೋಣ. ಮಕ್ಕಳಿಗೆ ಚಾಕಲೇಟ್ ಅಂಶ ಹೆಚ್ಚಾಗಿ ಇಷ್ಟ ಆಗುತ್ತದೆ ಆದ ಕಾರಣ ಇಲ್ಲಿ ಕೋಕೋ ಪೌಡರ್ ಬಳಕೆ ಮಾಡೋಣ. ಒಂದು ಕಾಲು ಚಮಚದಷ್ಟು ಏಲಕ್ಕಿ ಪುಡಿಯನ್ನು

ನೀವು ಹಾಕಿಕೊಳ್ಳಬಹುದು. ಅಥವ ವೆನಿಲ್ಲಾ ಫ್ಲೇವರ್ ಕೂಡ ಉಪಯೋಗಿಸಬಹುದು. ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಸ್ನೇಹಿತರೇ ಈಗ ಹೋಂ ಮೇಡ್ ಹಾರ್ಲಿಕ್ಸ್ ರೆಡಿ ಆಗಿದೆ. ಇದನ್ನು ನೀವು ಮಕ್ಕಳು ದೊಡ್ಡವರು ಎಲ್ಲರೂ ಬಳಕೆ ಮಾಡಬಹುದು. ಇದರಲ್ಲಿ ಉಪಯೋಗಿಸಿರುವ ಸಾಮಗ್ರಿಗಳಿಂದ ನಿಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್ಸ್ ಗಳು ದೊರೆಯುತ್ತವೆ. ಒಂದು ಲೋಟ ಬಿಸಿ ಬಿಸಿ ಹಾಲಿಗೆ ಒಂದು ಚಿಕ್ಕ ಚಮಚದಷ್ಟು ಈ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬಹುದು. ಮಕ್ಕಳಿಗೆ ಹಾಲಿನಲ್ಲಿಯೇ ಈ ಪುಡಿ ಹಾಕಿ ಕುದಿಸಿ ಜೊತೆಗೆ ಸ್ವಲ್ಪ ಸಕ್ಕರೆ ಬೆರೆಸಿ ಕೊಡಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

 

LEAVE A REPLY

Please enter your comment!
Please enter your name here