ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 2000 ಸಾವಿರ.

154

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಒಂದು ಪ್ರಮುಖವಾದ ನಿಯಮವನ್ನ ತಿಳಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಂಬಂಧಿ ಯೋಜನೆಯ ಹಣವನ್ನ ಪಡೆಯುತ್ತಾ ಇದ್ದರೆ ಈ ಕೆಲಸವನ್ನು ನೀವು ಖಂಡಿತವಾಗಿ ಮಾಡಿಸಲೇಬೇಕು.

ಕೇಂದ್ರ ಸರ್ಕಾರವು 14 ಕಂತಿನ ಹಣವನ್ನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ನೀಡಿದೆ 15ನೇ ಕಂತಿನ ಹಣ ಯಾವಾಗ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ.

ರೈತರ ಕಲ್ಯಾಣ ಸಚಿವಾಲಯ ಪ್ರಾರಂಭಿಸಿದ ಪ್ರಧಾನಮಂತ್ರಿ ಕಿಸಾನ್ ಸಮಾನ್ ಯೋಜನೆಯ ಮೊಬೈಲ್ ನಲ್ಲಿ ಅವರು ಎಲ್ಲ ರೀತಿಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ತಮ್ಮ ಮುಖದ ದೃಢೀಕರಣ ಅಥವಾ ಹೆಸರು ಬದಲಾವಣೆ ಅಥವಾ ಬೆರಳಚ್ಚು ಯಾವುದೇ ಇದ್ದರೂ ಕೂಡ ಅವುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.

14ನೇ ಕಂತಿನ ಹಣ ಎಲ್ಲಾ ರೈತರ ಖಾತೆಗೂ ಕೂಡ ಜಮಾ ಆಗಿದೆ. ಯೋಜನೆಗಳಿಗೆ ಅನೇಕ ರೀತಿಯ ಅರ್ಜಿಗಳು ಕೂಡ ನೀಡುತ್ತಿರುವುದನ್ನು ಗಮನಿಸಬಹುದಾಗಿದೆ. ಯೋಜನೆಯನ್ನು ಪಡೆಯಬೇಕು ಎನ್ನುವ ರೈತರು ಜಂಟಿ ಸೇವ ಕೇಂದ್ರಗಳಿಗೆ ಹೋಗಿ ನೀವು ಕೂಡ ನೊಂದಾವಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಅಧಿಕೃತವಾದ ವೆಬ್ಸೈಟ್ ಭೇಟಿ ನೀಡಿ ಪಿಎಂ ಕಿಸಾನ್. gov. in ನೀವು ಕೂಡ ಅರ್ಜಿಯನ್ನು ಭರ್ತಿ ಮಾಡಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಮುಂದಿನ ದಿನಗಳಲ್ಲಿ 15ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ.

ಮೂರು ಕಂತಿನಲ್ಲಿ ಎರಡು ಎರಡು ಸಾವಿರದಂತೆ ಆರು ಸಾವಿರ ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕೆವೈಸಿ ಅಥವಾ ಇತರೆ ದಾಖಲೆಗಳು ಹೊಂದಿಕೆಯಾಗದೆ ಇದ್ದರೆ ತಮ್ಮ ಖಾತೆಯಲ್ಲಿ ರೈತರು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಕೇಂದ್ರ ಸರ್ಕಾರವು ಅವರ ಹಣವನ್ನ ತಡೆ ಹಿಡಿಯುತ್ತದೆ ಆದ್ದರಿಂದ ಕೆಲವೊಂದಿಷ್ಟು ನಿಯಮಗಳನ್ನ ನೀವು ಪಾಲಿಸುವುದು ಮಾಡಿದ್ದೆ ಆದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಪ್ರತಿಯೊಬ್ಬ ರೈತರಿಗೂ ಕೂಡ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಎಲ್ಲಾ ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮುಂದಿನ ದಿನಗಳಲ್ಲಿ 15ನೇ ಕಂತಿನ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ. ಎಲ್ಲಾ ರೈತರು ಕೂಡ ಇದರ ಸೌಲಭ್ಯವನ್ನು ಪಡೆದುಕೊಂಡು ಕೃಷಿಯನ್ನು ಅಭಿವೃದ್ಧಿಪಡಿಸಲು ಸಾಧ್ಯ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here