ಕೇಂದ್ರದಿಂದ ಕಾರ್ಮಿಕರಿಗೆ 3000 ಪಿಂಚಣಿ ಮತ್ತು ಎರಡು ಲಕ್ಷ ಇನ್ಶೂರೆನ್ಸ್

43

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗೆ ಒಂದು ಒಳ್ಳೆಯ ಸುದ್ದಿಯನ್ನ ನೀಡಿದ್ದಾರೆ. ಈ ಕಾರ್ಡುಗಳನ್ನು ಹೊಂದಿದ್ದರೆ ನೀವು ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 3000 ಪಿಂಚಣಿ ಹಣವನ್ನ ಪಡೆಯಬಹುದು. ಎರಡು ಲಕ್ಷದ ಇನ್ಸೂರೆನ್ಸ್ ಗಳನ್ನು ಕೂಡ ಪಡೆದುಕೊಳ್ಳಬಹುದು ಬೇರೆ ಬೇರೆ ಕ್ಷೇತ್ರಗಳಲ್ಲಿ ಅನೇಕ ಜನ ಕಾರ್ಮಿಕರು ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಸಂಘಟಿತ ವಲಯ ಮತ್ತು ಅಸಂಘಟಿತ ವಲಯದಲ್ಲಿ ಸಾಕಷ್ಟು ಜನರು ಕೆಲಸವನ್ನು ನಿರ್ವಹಿಸುತ್ತಾರೆ. ಅವರಿಗೆ ಸಂಬಳದ ಜೊತೆಗೆ ಇತರ ರೀತಿಯ ಸೌಲಭ್ಯಗಳನ್ನ ಕೂಡ ಪಡೆದುಕೊಳ್ಳಬಹುದು. ಅಸಂಘಟಿತ ವಲಯದಲ್ಲಿ ಕೆಲಸವನ್ನ ನಿರ್ವಹಿಸುವಂತಹ ಕಾರ್ಮಿಕರಿಗೆ ಅಂತವರಿಗೆ ಯಾವುದೇ ರೀತಿಯ ಸೌಲಭ್ಯಗಳು ಕೂಡ ಇರುವುದಿಲ್ಲ. ಆದ್ದರಿಂದ ಸರ್ಕಾರವು ಒಂದು ಹೊಸದಾದ ಯೋಜನೆಯನ್ನ ರೂಪಿಸಿದೆ.

ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಕೂಡ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಶ್ರಮ ಕಾರ್ಡ್ ಮಾಡಿಸಲಾಗಿದೆ. ಈ ಶ್ರಮ ಕಾರ್ಡ ನಿಮ್ಮ ಬಳಿ ಇದ್ದರೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. 3000 ಪಿಂಚಣಿ ಹಣವನ್ನು ನೀವು 60 ವರ್ಷಗಳಾದ ನಂತರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಅಸಂಘಟಿತ ವಲಯಕ್ಕೆ ಯಾವುದೇ ರೀತಿಯ ಯೋಜನೆಗಳು ಬಂದರೂ ಕೂಡ ಅದನ್ನ ನೀವು ಪಡೆದುಕೊಳ್ಳಬಹುದು. ವ್ಯಕ್ತಿಯು ಆಕಸ್ಮಿಕವಾಗಿ ಮರಣ ಹೊಂದಿದರೆ ಅದರಿಂದ ಎರಡು ಲಕ್ಷ ರೂಪಾಯಿ ಹಣ ಎಂಬುದು ಬರುತ್ತದೆ. 1 ಲಕ್ಷ ನೀವು ಅಪಘಾತದಲ್ಲಿ ಇನ್ಸೂರೆನ್ಸ್ ಗಳ ತರ ವಿಮೆ ಪಡೆದುಕೊಳ್ಳಬಹುದು. ವಿಮೆಯ ಸಂಪೂರ್ಣ ಪ್ರಯೋಜನವನ್ನು ಆತನ ಹೆಂಡತಿ ಕೂಡ ಪಡೆದುಕೊಳ್ಳಬಹುದು.

ಈ ಶ್ರಮ ಕಾರ್ಡ್ ಅಸಂಘಟಿತ ವಲಯದಲ್ಲಿ ಕಾರ್ಮಿಕರಾದವರಿಗೆ ಮಾತ್ರ ಸಿಗುತ್ತದೆ. ಸರ್ಕಾರದಿಂದ ಸಿಗುವಂತಹ ಯಾವುದೇ ಯೋಜನೆಯ ಕಾರ್ಡುಗಳನ್ನು ಹೊಂದಿರಬಾರದು. ಆಟೋ ಓಡಿಸುವವರು, ಪೇಪರ್ ಹಾಕುವವರು, ಇನ್ನೂ ಮೊದಲಾದವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಈ ಶ್ರಮ ಕಾರ್ಡ್ ನೀವು ಪಡೆಯಬೇಕಾದರೆ ಸಿ ಎಸ್ ಸಿ ಸೆಂಟರ್ ಗಳಿಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ 3000 ಪಿಂಚಣಿ ಹಣವನ್ನು ನೀವು 60 ವರ್ಷ ಆದ ನಂತರ ತೆಗೆದುಕೊಳ್ಳಬಹುದು ಇಲ್ಲವೇ ಇನ್ಶುರೆನ್ಸ್ ಗಳ ರೀತಿಯಲ್ಲಿ ಎರಡು ಲಕ್ಷ ರೂಪಾಯಿ ನಿಮಗೆ ಸಿಗುತ್ತದೆ.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here