ಎಲ್ಲಾ ಬಡ ರೈತರಿಗೆ ಹೊಸ ಯೋಜನೆ ಚಾಲನೆ ಪ್ರತಿ ತಿಂಗಳು 3000 ಬ್ಯಾಂಕ್ ಖಾತೆಗೆ ಜಮಾ

34

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಎಲ್ಲಾ ರೈತರಿಗೆ ಒಂದು ಮುಖ್ಯವಾದ ಮಾಹಿತಿ ಇದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ರೀತಿಯ ಯೋಜನೆಗಳಲ್ಲಿ ರೈತರಿಗೆ ಅನುಕೂಲವಾಗಲು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ನಮ್ಮ ದೇಶದ ರೈತರ ಆರ್ಥಿಕವಾಗಿ ಆದಾಯವನ್ನು ಹೆಚ್ಚಿಗೆ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಅನೇಕ ರೀತಿಯ ಯೋಜನೆಗಳನ್ನ ಜಾರಿಗೆ ತರುತ್ತಾ ಇದೆ.

ಈ ಯೋಜನೆಗಳ ಮೂಲಕ ಸರ್ಕಾರವು ರೈತರಿಗೆ ಅನೇಕ ರೀತಿಯ ಸಹಾಯಧನವನ್ನ ಕೂಡ ಕಲ್ಪಿಸುತ್ತಾ ಇದೆ. ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯು ಕೂಡ ಒಂದಾಗಿದೆ. ಕೇಂದ್ರ ಸರ್ಕಾರವು 60 ವರ್ಷ ಮೇಲ್ಪಟ್ಟ ಎಲ್ಲಾ ರೈತರಿಗೆ ಪ್ರತಿ ತಿಂಗಳು ಮೂರು ಸಾವಿರ ಪಿಂಚಣಿ ಹಣವನ್ನ ನೀಡಲು ತೀರ್ಮಾನ ಕೈಗೊಂಡಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಪ್ರತಿಯೊಬ್ಬ ರೈತರು ಕೂಡ ಕೇಂದ್ರ ಸರ್ಕಾರದ ಈ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು. ರೈತ ಏನಾದರೂ ಮೃತಪಟ್ಟಿದ್ದರೆ ಅವರ ಹೆಂಡತಿಗೆ ಈ ಪಿಂಚಣಿ ಹಣ ಹೋಗುವಂತ ವ್ಯವಸ್ಥೆಯನ್ನ ಕಲ್ಪಿಸಿದೆ. 3000 ಹಣವನ್ನ ನೀಡಿದರೆ ಅದರಲ್ಲಿ ರೂ.1500 ಹಣವನ್ನು ಮಾತ್ರ ನಿಮ್ಮ ಹೆಂಡತಿಯ ಖಾತೆಗೆ ಜಮಾ ಆಗುತ್ತದೆ. ರೈತ ಮತ್ತು ಅವನ ಹೆಂಡತಿಗೆ ಮಾತ್ರ ಈ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ವೃದ್ಧಾಪ್ಯದಲ್ಲಿ ರೈತನು ಇನ್ನೊಬ್ಬರ ಮೇಲೆ ಅವಲಂಬನೆ ಆಗಬಾರದು ಎನ್ನುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗಲು ಪ್ರತಿ ತಿಂಗಳು ಪಿಂಚಣಿ ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯು ರೈತರಿಗೆ ಸಾಕಷ್ಟು ರೀತಿಯ ನೆರವನ್ನ ನೀಡುತ್ತದೆ.

ಎಲ್ಲಾ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದು. 18 ರಿಂದ 40 ವರ್ಷದ ಒಳಗಿರುವಂತಹ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಪ್ರತಿ ತಿಂಗಳು ಹಣವನ್ನ ಕಟ್ಟುವ ಮೂಲಕ ಮುಂದಿನ ದಿನಗಳಲ್ಲಿ 60 ವರ್ಷ ಆದ ನಂತರ ನಿಮಗೆ ಮೂರು ಸಾವಿರ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರವು ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here