ಐರಾವತ ಯೋಜನೆ ಪ್ರಾರಂಭ ಟ್ಯಾಕ್ಸಿ ಅಥವಾ ಕಾರು ಖರೀದಿಸಲು ನಾಲ್ಕು ಲಕ್ಷ ಉಚಿತ ಯಾವ ದಾಖಲೆಗಳು ಬೇಕು.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರವಾಸೋದ್ಯಮದ ಉದ್ದೇಶದಿಂದಾಗಿ ಮತ್ತೊಮ್ಮೆ ಐರಾವತ ಯೋಜನೆ ಪ್ರಾರಂಭವಾಗಿದೆ. ಯಾರು ಟ್ಯಾಕ್ಸಿ ಅಥವಾ ಕಾರುಗಳನ್ನ ಖರೀದಿ ಮಾಡಬೇಕು ಅಂದುಕೊಂಡಿರುತ್ತಾರೋ ಅಂಥವರಿಗೆ ಐರಾವತ ಯೋಜನೆಯ ಮೂಲಕ ನಾಲ್ಕು ಲಕ್ಷ ರೂಪಾಯಿ ಉಚಿತವಾಗಿ ನೀಡಲಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಟ್ಯಾಕ್ಸಿ ಅಥವಾ ಕಾರು ಖರೀದಿ ಮಾಡುವುದಕ್ಕೆ ನಾಲ್ಕು ಲಕ್ಷವನ್ನ ನೀಡಲಾಗುತ್ತದೆ. ಪ್ರತಿಯೊಂದು ಜನಾಂಗ ಅಥವಾ ಜಾತಿಯವರು ಇದಕ್ಕೆ ಅರ್ಜಿಯನ್ನ ಸಲ್ಲಿಸಿ ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಪ್ರವಾಸೋದ್ಯಮದ ಉದ್ದೇಶದಿಂದ ಸ್ವಾವಲಂಬಿ ಯೋಜನೆಯನ್ನ ಜಾರಿಗೆ ಗೊಳಿಸಲಾಗಿದೆ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ಅಥವಾ ಕಾರನ್ನ ಖರೀದಿ ಮಾಡುವವರಿಗೆ ನಾಲ್ಕು ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ.

ಜನರಲ್ ಕ್ಯಾಟಗರಿ, ಓಬಿಸಿ ಕ್ಯಾಟಗರಿ, ಎಸ್ಸಿ ಎಸ್ಟಿ ಎಲ್ಲಾ ಜನಾಂಗದವರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಓಬಿಸಿ ಮತ್ತು ಜನರಲ್ ಅವರು ಇದೇ ತಿಂಗಳು ಮುಗಿಯುವುದರ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕು.

ಎಸ್ ಸಿ ಎಸ್ ಟಿ ಕ್ಯಾಟಗರಿಯವರಿಗೆ 29ನೇ ತಾರೀಕು ಕೊನೆಯ ದಿನಾಂಕವಾಗಿದೆ ಆ ದಿನಾಂಕದ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕು. ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವೆಲ್ಲಾ ದಾಖಲೆಗಳು ಇರಬೇಕು ಎಂದರೆ ಎಸ್ಸಿ ಎಸ್ಟಿ ಜನಾಂಗದವರಿಗೆ ಯಾವೆಲ್ಲ ದಾಖಲೆಗಳು ಬೇಕು ಎಂದರೆ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನಿಮ್ಮ ಡ್ರೈವಿಂಗ್ ಲೈಸನ್ಸ್, ನಿಮ್ಮ ಫೋಟೋ,

ಓಬಿಸಿ ಅಭ್ಯರ್ಥಿಗಳಿಗೆ ಯಾವೆಲ್ಲ ದಾಖಲೆಗಳು ಬೇಕು ಎಂದರೆ ನೀವು ಇದೇ ದಾಖಲೆಗಳನ್ನು ನೀಡಬೇಕು ಅದೇ ರೀತಿಯಲ್ಲಿ ನೀವು ಯಾವ ಕಾರ್ ಖರೀದಿಸುತ್ತೀರಾ ಎನ್ನುವ ಮಾಹಿತಿಯನ್ನು ಕೂಡ ಇಲ್ಲಿ ನೀಡಬೇಕು.

ಈ ಪ್ರಮುಖ ದಾಖಲೆಗಳನ್ನು ಮೂಲಕ ನೀವೇನಾದರೂ ಅರ್ಜಿ ಸಲ್ಲಿಸಿದ್ದೆ ಆದರೆ ನಿಮಗೂ ಕೂಡ ಟ್ಯಾಕ್ಸಿ ಅಥವಾ ಕಾರನ್ನ ಖರೀದಿಸಲು ನಾಲ್ಕು ಲಕ್ಷ ರೂಪಾಯಿ ಉಚಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ ಇದರ ಸಂಪೂರ್ಣವಾದ ಸೌಲಭ್ಯವನ್ನು

ನೀವು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮವನ್ ಕರ್ನಾಟಕ ಒನ್ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here