ಇನ್ನು ಮುಂದೆ ಎಲ್ಲರಿಗೂ ಕೂಡ ಉಚಿತವಾಗಿ ವಿದ್ಯುತ್ ಘೋಷಣೆಯಲ್ಲಿ ಒಂದು ಬಂಪರ್ ಸುದ್ದಿ

67

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಎಲ್ಲರಿಗೂ ಕೂಡ ಒಂದು ಒಳ್ಳೆಯ ಸುದ್ದಿಯನ್ನ ಜಾರಿಗೆ ತಂದಿದ್ದಾರೆ. ವಿದ್ಯುತ್ ಸಂಪರ್ಕವನ್ನು ಹೊಂದದೆ ಇರುವ ಪ್ರತಿಯೊಬ್ಬರಿಗೂ ಕೂಡ ಒಂದು ಭರ್ಜರಿ ಆದಂತ ಗುಡ್ ನ್ಯೂಸ್ ಅನ್ನ ಹೊರ ಹಾಕಿದ್ದಾರೆ ಆ ನ್ಯೂಸ್ ಯಾವುದು ಎಂಬುದನ್ನ ತಿಳಿಯೋಣ. ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಘಟಕದಿಂದ ಅಧಿಕೃತವಾಗಿ ಒಂದು ಒಳ್ಳೆಯ ಸುದ್ದಿಯನ್ನು ಹೊರ ಹಾಕಿದ್ದಾರೆ.

ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಇನ್ನು ಕೂಡ ಯಾರು ತಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕವನ್ನು ಹೊಂದಿಲ್ಲ ಅಂತವರಿಗೆ ಉಚಿತವಾಗಿ ವಿದ್ಯುತ್ ಅನ್ನ ನೀಡುವುದಕ್ಕೆ ಸರ್ಕಾರವು ಘೋಷಣೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಜನಸಾಮಾನ್ಯರಿಗೆ ಅನೇಕ ರೀತಿಯ ಯೋಜನೆಗಳನ್ನು ಘೋಷಣೆ ಮಾಡಲು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ.

ಕೆಲವೊಂದಿಷ್ಟು ಕಡೆಯಲ್ಲಿ ನಗರ ಭಾಗ ಆಗಿರಬಹುದು ಅಥವಾ ಗ್ರಾಮೀಣ ಭಾಗದಲ್ಲಿ ಕೆಲವೊಂದಿಷ್ಟು ವಯಸ್ಕರು ಅಥವಾ ತಿಳುವಳಿಕೆ ಇಲ್ಲದೆ ಇರುವಂತವರ ಮನೆಯಲ್ಲಿ ಈಗಲೂ ಕೂಡ ವಿದ್ಯುತ್ ಇಲ್ಲದೆ ಇರುವುದರಿಂದ ಅಂತವರಿಗೆ ಉಚಿತವಾಗಿ ವಿದ್ಯುತ್ಗಳನ್ನ ನೀಡಬೇಕು ಎಂದು ಸರ್ಕಾರವು ತೀರ್ಮಾನ ಕೈಗೊಂಡಿದೆ.

ಭಾಗ್ಯಜ್ಯೋತಿ, ಕುಟಿರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕಗಳನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಉಚಿತವಾಗಿ ವಿದ್ಯುತ್ತನ್ನು ನೀಡಲು ಘೋಷಣೆಯನ್ನು ಮಾಡಿದೆ. ಈ ಉಚಿತ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಲು ನಿಮಗೆ ಸಂಬಂಧಪಟ್ಟ ಮೆಸ್ಕಾಂ ಆಗಿರಬಹುದು

ಹೆಸ್ಕಾಂ, ಬೆಸ್ಕಾಂ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯುತ್ ನ ಪ್ರಸರಣ ಮಾಡುವ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸುವ ಮೂಲಕ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಗ್ರಾಮೀಣ ಮತ್ತು ನಗರ ಭಾಗದವರು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಎರಡು ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ನಂಬರ್ ಹಾಗೆ ವಿವಿಧ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here