Home ಸುದ್ದಿ ಮನೆ ಜನವರಿ ಒಂದನೇ ತಾರೀಖಿನಿಂದ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

ಜನವರಿ ಒಂದನೇ ತಾರೀಖಿನಿಂದ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

42

ನಮಸ್ಕಾರ ಪ್ರಿಯ ಸ್ನೇಹಿತರೇ, ಜನವರಿಯಿಂದ ಹೊಸದಾಗಿ ಕೆಲವೊಂದಿಷ್ಟು ನಿಯಮಗಳನ್ನ ಸರ್ಕಾರದವರು ಜಾರಿಗೆ ತರಲು ಮುಂದಾಗಿದ್ದಾರೆ. ಪಾನ್ ಕಾರ್ಡ್ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಯಾವುದೇ ಕಾರ್ಡ್ ಹೊಂದಿದ್ದರು ಕೂಡ ಈ ನಿಯಮಗಳು ನಿಮಗೆ ಅನ್ವಯವಾಗುತ್ತದೆ.

ಜನರ ಜೀವನದ ಮೇಲು ಕೂಡ ಈ ನಿಯಮಗಳು ಅನ್ವಯವಾಗುತ್ತದೆ. ಜಿಎಸ್‌ಟಿಯಲ್ಲೂ ಕೂಡ ಬದಲಾವಣೆಯಾಗುತ್ತದೆ. ಜಿ ಎಸ್‌ ಟಿ ಎಂಟರಿಂದ ಒಂಬತ್ತುಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸಿಮ್ ಕಾರ್ಡ್ ಗಳನ್ನ ಖರೀದಿ ಮಾಡುವವರು ಮತ್ತು ಮಾರಾಟ ಮಾಡುವವರಿಗೂ ಕೂಡ ಕೆಲವೊಂದು ನಿಯಮಗಳು ಜಾರಿಗೆ ಬಂದಿವೆ.

ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡಬೇಕು ಅಂದುಕೊಂಡಿದ್ದರೆ ನೀವು ಸರ್ಕಾರದಿಂದ ನೋಂದಣಿಯನ್ನು ಮಾಡಿಕೊಳ್ಳಲೇಬೇಕು. ನೀವು ಸಿಮ್ ಗಳನ್ನ ಯಾರಿಗೆ ಮಾರಾಟ ಮಾಡಿದ್ದೀರಾ ಎನ್ನುವ ದಾಖಲೆಗಳನ್ನು ಕೂಡ ಇಟ್ಟುಕೊಳ್ಳಬೇಕು. ಗ್ರಾಹಕರ ಮಾಹಿತಿಯನ್ನ ಕೂಡ ಅವರು ತೋರಿಸಬೇಕು.

ಉದ್ಯೋಗದಲ್ಲೂ ಕೂಡ ಕೆಲವೊಂದಿಷ್ಟು ಕಾನೂನು ನಿಯಮಗಳು ಬದಲಾವಣೆಯಾಗುತ್ತದೆ. ಅರೆಕಾಲಿಕ ಮತ್ತು ಅನಿಮಿತ ಕೆಲಸವನ್ನು ನಿರ್ವಹಿಸುವವರಿಗೆ ಹೊಸ ಹೊಸ ರಜೆಗಳನ್ನು ಕೂಡ ಸರ್ಕಾರ ನೀಡಲು ತೀರ್ಮಾನಿಸಿದೆ. ನೀವು ರೇಷನ್ಗಳಲ್ಲಿ ರೇಷನ್ಗಳನ್ನ ಪಡೆದುಕೊಳ್ಳುತ್ತಾ ಇರುತ್ತೀರಿ ಆದರೆ ಈ ಕೆವೈಸಿ ಗಳನ್ನ ಮಾಡಿಕೊಂಡಿರಲಿಲ್ಲ

ಒಂದು ವೇಳೆ ನೀವು ಈ ಕೆ ವೈ ಸಿ ಯನ್ನ ಮಾಡಿಕೊಂಡಿಲ್ಲ ಎಂದರೆ ಇನ್ನು ಮುಂದಿನ ದಿನಗಳಲ್ಲಿ ರೇಷನ್ ಗಳನ್ನ ಪಡೆಯಲು ಸಾಧ್ಯವಿಲ್ಲ ಸರ್ಕಾರದಿಂದ ಬರುವ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಿಲ್ಲ ಎಂಬುದು ಸರ್ಕಾರವು ತಂದಂತಹ ಜಾರಿಗೆ ತಂದ ನಿಯಮವಾಗಿದೆ.

ಕೆ ವೈ ಸಿ ಗಳನ್ನ ಮಾಡಿಕೊಳ್ಳಲು ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಲಾಗಿದೆ ಆ ನಿಗದಿಪಡಿಸಿದ ದಿನಾಂಕದೊಳಗೆ ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳಲೇಬೇಕು ಮಾಡಿಕೊಂಡಿಲ್ಲ ಎಂದರೆ ನೀವು ಸರ್ಕಾರದಿಂದ ಬರುವ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಿಲ್ಲ.

ಡಿಸೆಂಬರ್ 31 ನೇ ತಾರೀಕು ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಪ್ರತಿಯೊಬ್ಬರೂ ಮಾಡಿಸಿಕೊಳ್ಳಲೇಬೇಕು ಮಾಡಿಸಿಕೊಂಡಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಗಳು ಸಂಪೂರ್ಣವಾಗಿ ರದ್ದಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಜಾರಿಗೆ ತಂದಂತಹ ನಿಯಮವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಈ ನಿಯಮಗಳನ್ನ ಪಾಲಿಸಲೇಬೇಕು.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here