ರೇಣುಕಾ ಸ್ವಾಮಿ ಮತ್ತೊಂದು ಕೃತ್ಯ ಬಯಲು
ನಮಸ್ಕಾರ ಪ್ರಿಯ ಸ್ನೇಹಿತರೇ, ರೇಣುಕ ಸ್ವಾಮಿ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳು ಪ್ರಕರಣಗಳು ಎಲ್ಲರೂ ಕೂಡ ಗಮನಿಸುತ್ತಲೇ ಇದ್ದೇವೆ, ನಟ ದರ್ಶನ್ ಅವರ ಗ್ಯಾಂಗ್ ನವರು ರೇಣುಕಾ ಸ್ವಾಮಿಯವರಿಗೆ ಬೆದರಿಕೆ ಹಾಕುವುದಕ್ಕೆ ಹೋಗಿ, ಆತನ ಮೇಲೆ ವಿಕೃತಿಯನ್ನು ಮೆರೆದು ಕೊಲೆಯಲ್ಲಿ ಈ ಪ್ರಕರಣ ಅಂತ್ಯವಾಗಿದೆ.
ಇಷ್ಟು ದಿನಗಳ ಕಾಲ ದರ್ಶನ್ ಅವರು ಮತ್ತು ಅವರ ಗ್ಯಾಂಗ್ ಅವರು ಮಾಡಿದಂತಹ ಈ ರೀತಿಯ ಕೃತ್ಯದ ಬಗ್ಗೆ ಮಾತನಾಡುತ್ತಿದ್ದರು. ಆದರೆ ರೇಣುಕಾ ಸ್ವಾಮಿಯವರ ಮತ್ತೊಂದು ವಿಚಾರ ಕೂಡ ಹೊರಬಂದಿದೆ.
ಈ ಪ್ರಕರಣದಲ್ಲಿ ಯಾರನ್ನ ಕೂಡ ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಇಷ್ಟು ದಿನಗಳ ಕಾಲ ರೇಣುಕಾ ಸ್ವಾಮಿಯವರು ಯಾವುದೇ ತಪ್ಪನ್ನ ಮಾಡಿಲ್ಲ ಅವರು ಎಲ್ಲಾ ರೀತಿಯಿಂದಲೂ ಕೂಡ ದರ್ಶನ್ ಅವರ ಕುಟುಂಬ ಚೆನ್ನಾಗಿರಲಿ ಎಂದು ಬಯಸಿದ್ದರು ಎಂಬುದಾಗಿ ಹೇಳುತ್ತಿದ್ದರು ಆದರೆ ರೇಣುಕಾ ಸ್ವಾಮಿಯವರು ಕೂಡ ಒಂದು ಕೃತ್ಯವನ್ನು ಮಾಡಿದ್ದಾರೆ ಎನ್ನುವ ವಿಚಾರ ಹೊರ ಬಂದಿದೆ.
ನಟ ದರ್ಶನ್ ಅವರ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಅವರ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ಕೂಡ ನಡೆಯುತ್ತಿದೆ ಆದರೆ ರೇಣುಕಾ ಸ್ವಾಮಿಯವರು ಏನು ಮಾಡಿಲ್ಲ ಎಂಬುದಾಗಿ ಹೇಳುವವರು ಯಾರನ್ನ ಕೂಡ ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ,
ರೇಣುಕಾ ಸ್ವಾಮಿಯವರು ಏನೆಲ್ಲಾ ಮಾಡುತ್ತಿದ್ದರು ಅವರ ವಿಕೃತಿ ಏನು ಎಂಬುದನ್ನು ತಿಳಿಯೋಣ. ಈ ವಿಷಯದ ಬಗ್ಗೆ ಅನೇಕ ಜನ ಪರ ಮತ್ತು ವಿರೋಧ ಮಾಹಿತಿಯನ್ನು ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ರೇಣುಕಾ ಸ್ವಾಮಿಯವರು ನಟಿ ಪವಿತ್ರ ಗೌಡ ಅವರಿಗೆ ಮಾತ್ರ ಅಲ್ಲ ಬೇರೆ ಬೇರೆ ನಟಿ ಮತ್ತು ಕಾಲೇಜು ಯುವತಿಯರಿಗೂ ಕೂಡ ಅಶ್ಲೀಲವಾದ ಅಂತಹ ಮೆಸೇಜ್ ಗಳನ್ನು ಮಾಡುತ್ತಿದ್ದ,
ಮರ್ಮಂಗದ ಫೋಟೋವನ್ನ ಕಳಿಸಿ ವಿಕೃತವಾದಂತಹ ಅಸಭ್ಯ ವರ್ತನೆಯನ್ನು ಮಾಡುತ್ತಿದ್ದ. ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯರಿಗೆ ಮೆಸೇಜ್ ಕಳಿಸುವುದೇ ಆತನ ಕೆಲಸವಾಗಿತ್ತು.
ಇನ್ಸ್ಟಾಗ್ರಾಮ್ ನಲ್ಲಿ ಬೇರೆ ಬೇರೆ ಅಕೌಂಟ್ ಗಳನ್ನು ತೆರೆದು ಬೇರೆ ಬೇರೆಯಾದಂತ ಯುವತಿಯರಿಗೆ ಮೆಸೇಜನ್ನು ಕೂಡ ಮಾಡುತ್ತಿದ್ದ, ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಸಂಸಾರ ಉಳಿಸಬೇಕು ಎನ್ನುವ ಕಾರಣಕ್ಕಾಗಿ ಪವಿತ್ರ ಗೌಡ ಅವರಿಗೆ ಅಶ್ಲೀಲ ವಾದಂತಹ ಫೋಟೋವನ್ನು ಕಳಿಸುತ್ತಿದ್ದ, ರೇಣುಕಾ ಸ್ವಾಮಿ ಅವರು ನಟ ದರ್ಶನ್ ಅವರ ಅಪ್ಪಟ ಅಭಿಮಾನಿ ಎಂದು ಕೂಡ ಹೇಳಲಾಗುತ್ತಿತ್ತು.
ಬೇರೆ ಬೇರೆ ನಟಿಯರಿಗೂ ಕೂಡ ರೇಣುಕಾ ಸ್ವಾಮಿಯವರು ಮೆಸೇಜನ್ನು ಮಾಡುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ರೇಣುಕಾ ಸ್ವಾಮಿಯವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಸಿಸಿಟಿವಿಯನ್ನ ಪರಿಶೀಲಿಸಿದಾಗ ರೇಣುಕಾ ಸ್ವಾಮಿಯವರು ಯಾವ ರೀತಿ ಮೊಬೈಲ್ ಗೆ ಆಡಿಕ್ಟ್ ಆಗಿದ್ದ ಎಂಬುದು ಸಂಪೂರ್ಣವಾಗಿ ತಿಳಿಯುತ್ತದೆ.
ದಿನವಿಡೀ ಇನ್ಸ್ಟಾಗ್ರಾಮ್ ನಲ್ಲಿ ಇದೇ ಕೆಲಸವನ್ನ ಮಾಡುತ್ತಿದ್ದ ಎಂದು ಅನುಮಾನ ಕೂಡ ವ್ಯಕ್ತವಾಗಿದೆ. ಚಿತ್ರಲ್ ರಂಗಸ್ವಾಮಿ ಎನ್ನುವವರು ಕನ್ನಡದ ಕಿರುತೆರೆಯ ನಟಿಯಾಗಿರುವ ಇವರು ಕೂಡ ರೇಣುಕಾ ಸ್ವಾಮಿಯವರ ಕುರಿತು ನನಗೂ ಅಶ್ಲೀಲ ವಾದಂತಹ ಫೋಟೋಗಳು ಮೆಸೇಜ್ ಗಳನ್ನು ಮಾಡಿದ್ದ ಎಂಬುದಾಗಿ ತಿಳಿಸಿದ್ದಾರೆ.
ರೇಣುಕ ಸ್ವಾಮಿಯವರ ವಿಕೃತಿಯನ್ನು ಒಂದೊಂದಾಗಿ ಹೇಳಿಕೊಂಡಿದ್ದಾರೆ ಬೇರೆ ಅಕೌಂಟ್ ಯಿಂದ ಈ ರೀತಿಯ ಅಸ್ಥಿರವಾದ ಮೆಸೇಜುಗಳು ಬಂದಿರುವುದನ್ನ ಕೂಡ ಚಿತ್ರಲ್ ರಂಗಸ್ವಾಮಿಯವರು ತಿಳಿಸಿದ್ದಾರೆ.
ಇದನ್ನು ಸಹ ಓದಿ:
ಜಮೀನಿನ ಪಹಣಿಗಳು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು
ದರ್ಶನ್ ಅವರು ನಿಜವಾಗಿಯೂ ಪವಿತ್ರ ಗೌಡ ಅವರನ್ನ ಮದುವೆಯಾಗಿದ್ದಾರ?
ರೈತರ ಮೇಲೆ ಬಂಡವಾಳ ಹಾಕಿ ನಿಮಗೆ ಡಬಲ್ ಹಣ ಬರುತ್ತೆ
ಐದು ಲಕ್ಷದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ
ಎರಡು ಸಾವಿರ ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿ
ರೇಣುಕಾ ಸ್ವಾಮಿಯವರ ಮೇಲೆ ಈ ಮುಂಚೆಯೂ ಕೂಡ ಒಂದು ಪ್ರಕರಣ ದಾಖಲಾಗಿತ್ತು, ಅಶ್ಲೀಲವಾಗಿ ಮೆಸೇಜ್ ಗಳನ್ನು ಕಳಿಸುವುದಕ್ಕಾಗಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಎಂಬುದಾಗಿ ಈ ಕಿರುತೆರೆಯ ನಟಿಯವರು ತಿಳಿಸಿದ್ದಾರೆ.
ಆದರೆ ಇಲ್ಲಿ ದರ್ಶನ್ ಹಾಗೂ ರೇಣುಕಾ ಸ್ವಾಮಿ ಇಬ್ಬರನ್ನ ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮುಂದಿನ ದಿನಗಳಲ್ಲಿ ಯಾವ ರೀತಿಯ ವಿಷಯಗಳನ್ನು ಹೊರಬರುತ್ತದೆ ಎಂಬುದನ್ನು ತಿಳಿಯೋಣ.
ಮಾಹಿತಿ ಆಧಾರ: