ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಸರ್ಕಾರದ ಕಡೆಯಿಂದ ಮತ್ತೊಂದು ಯೋಜನೆ ಬಂದಿದೆ.
ಆ ಯೋಜನೆ ಯಾವುದು ಎಂದರೆ ಮನಸ್ವಿನಿ ಯೋಜನೆ ಈ ಯೋಜನೆಯ ಮೂಲಕ ಪ್ರತಿ ತಿಂಗಳು ಕೂಡ 800 ಹಣವನ್ನು ಪಲಾನುಭವಿಗಳು ಪಡೆದುಕೊಳ್ಳಬಹುದು.
ಇದು ರಾಜ್ಯ ಸರ್ಕಾರದಿಂದ ಬಂದಿರುವಂತಹ ಬಂಪರ್ ಗುಡ್ ನ್ಯೂಸ್ ಎಂದೇ ಹೇಳಬಹುದು. ಈ ಯೋಜನೆಯ ಮೂಲಕ 800 ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಗಳಿಗೆ ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಗ್ರಾಮವನ್ ಕರ್ನಾಟಕವನ್, ಇಲ್ಲವೇ ಬೆಂಗಳೂರುಒನ್ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು.
ಸಾಮಾಜಿಕವಾಗಿ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವಂಥವರು ವಿಚ್ಛೇದನಕ್ಕೆ ಒಳಗಾದವರು, ಅವಿವಾಹಿತರಿಗೆ ಆರ್ಥಿಕವಾಗಿ ಭದ್ರತೆಯನ್ನು ಒದಗಿಸಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನ ಸರ್ಕಾರ ಕೈಗೊಂಡಿದೆ. ಮನಸ್ವಿನಿ ಯೋಜನೆಯ ಮೂಲಕ 800 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಮನಸ್ವಿನಿ ಯೋಜನೆ ಸರ್ಕಾರ ಜಾರಿಗೆ ತಂದಿರುವ ಒಂದು ಹೊಸದಾದ ಯೋಜನೆ ಎಂದೇ ಹೇಳಬಹುದು. ಅವಿವಾಹಿತರು ಮತ್ತು ವಿಚ್ಛೇದನಕೊಳಗಾದಂತವರು ಮಾಸಿಕ ವೇತನ ನೀಡುವ ಯೋಜನೆ ಇದಾಗಿದೆ. ಇದರಿಂದಾಗಿ ಮಹಿಳೆಯರಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ.
ಬಡತನದಲ್ಲಿರುವಂತಹ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವನ್ನ ಮಾಡುತ್ತದೆ. ಈ ಯೋಜನೆಯ ಮೂಲಕ ಅವಿವಾಹಿತರು ಮತ್ತು ವಿಚ್ಛೇದನ ಒಳಗಾದಂತಹ ಮಹಿಳೆಯರಿಗೆ ಆರ್ಥಿಕವಾಗಿ ನೆರವನ್ನ ನೀಡಲಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವ 40 ರಿಂದ 60 ವರ್ಷದ ಅವಿವಾಹಿತ ಹಾಗೂ ವಿಚ್ಛೇದನ ಒಳಗಾದಂತಹ ಮಹಿಳೆಯರು ಆರ್ಥಿಕವಾಗಿ ಅವರನ್ನ ಬಲಿಷ್ಠ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಯೋಜನೆಯ ಸೌಲಭ್ಯವನ್ನು ನೀಡಲಾಗುತ್ತದೆ.
ಇದನ್ನು ಸಹ ಓದಿ:
ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್
IIMB ಯಲ್ಲಿ ಹುದ್ದೆಗಳು ಖಾಲಿ ಇವೆ 14 ಲಕ್ಷ ರೂಪಾಯಿ ಸಂಬಳ
ಆರ್ ಸಿ ಬಿ ಸೇರಿದ್ರೆ ಕ್ಯಾಪ್ಟನ್ ಆಗ್ತಾರಾ ಕನ್ನಡಿಗರ ರಾಹುಲ್
ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ಕೂಡ ಸಾಲ
ಫಲಾಾನುಭವಿಗಳು 40 ರಿಂದ 64 ವರ್ಷದ ಒಳಗಿರಬೇಕು. ಇವರ ಆದಾಯದ ಪ್ರಮಾಣ 32 ಸಾವಿರಕ್ಕಿಂತ ಕಡಿಮೆ ಇರಬೇಕು. ನೀವೇನಾದರೂ ಸಂಧ್ಯಾ ಸುರಕ್ಷಾ ಯೋಜನೆಯ ಅಥವಾ ಯಾವುದಾದರೂ ಪಿಂಚಣಿ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರೆ ಈ ಮನಸ್ವಿನಿ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾದಂತ ಪ್ರಮುಖ ದಾಖಲೆಗಳು ಯಾವುದು ಎಂದರೆ ಬಿಪಿಎಲ್ ಕಾರ್ಡ್, ಆದಾಯ ಪ್ರಮಾಣ ಪತ್ರ, ವಿಳಾಸದ ಬಗ್ಗೆ ದೃಢೀಕರಣ ಪತ್ರ, ಅವಿವಾಹಿತರು ಅಥವಾ ವಿಚ್ಛೇದನ ಒಳಗದ ಪ್ರಮಾಣ ಪತ್ರ ಈ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿದರೆ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಮಾಹಿತಿ ಆಧಾರ: