ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ನಮಸ್ಕಾರ ಪ್ರಿಯ ಸ್ನೇಹಿತರೇ, ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವಂತಹ ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹ ಮಹಿಳಾ ಅಭ್ಯರ್ಥಿಗಳು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲಾ ರೀತಿಯ ಸೌಲಭ್ಯಗಳು ಇರಬೇಕು. ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ.
ಅಂಗನವಾಡಿ ಸಹಾಯಕಿ ಮತ್ತು ಟೀಚರ್ ಹುದ್ದೆಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದರೆ ಸಾಮಾನ್ಯ ಮಹಿಳೆಯರು, ವಿಚ್ಛೇದಿತ ಮಹಿಳೆಯರು, ವಿಧವಾ ಮಹಿಳೆಯರು, ಅಂಗವಿಕಲ ಮಹಿಳೆಯರು, ಲಿಂಗತ್ವ ಅನ್ನೋದು ಅಲ್ಪಸಂಖ್ಯಾತ ಮಹಿಳೆಯರು, ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಂಗನವಾಡಿ ಟೀಚರ್ ಹುದ್ದೆಗಳಿಗೆ 12ನೇ ತರಗತಿ ಪೂರ್ಣಗೊಳಿಸಿರಬೇಕು, ಸಹಾಯಕಿ ಹುದ್ದೆಗೆ ಹತ್ತನೇ ತರಗತಿ ಪೂರ್ಣಗೊಳಿಸಬೇಕು. 19 ರಿಂದ 35 ವರ್ಷದ ಒಳಗಿರುವಂತಹ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ವಿಕಲಚೇತನ ಮಹಿಳೆಯರಿಗೆ 10 ವರ್ಷದ ವಯಸ್ಸಿನ ಸಡಿಲಿಕೆ ಇರುತ್ತದೆ.
ಅಂಗನವಾಡಿ ಟೀಚರ್ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ಯಾವೆಲ್ಲ ದಾಖಲೆಗಳು ಬೇಕು ಎಂದರೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಅಂಗವಿಕಲ ಮಹಿಳೆಯರಾಗಿದ್ದಾರೆ ಅಂಗವಿಕಲ ಮಹಿಳಾ ಪ್ರಮಾಣ ಪತ್ರ, ಎರಡು ಫೋಟೋ, ಇಮೇಲ್ ಐಡಿ, ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್.
ಇದನ್ನು ಸಹ ಓದಿ:
ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ
ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಈ ಪ್ರಮುಖ ದಾಖಲೆಗಳು ಇರಲೇಬೇಕು. ಅಗತ್ಯ ದಾಖಲೆಗಳ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎನ್ನುವಂತಹ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇಲ್ಲವಾದರೆ ಕರ್ನಾಟಕ ಒನ್ ಗ್ರಾಮ ಒನ್ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬೆಳಗಾವಿ ಜಿಲ್ಲೆಯ 13 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ.
ಆಗಸ್ಟ್ ನಾಲ್ಕನೇ ತಾರೀಕಿನ ಒಳಗಡೆ ಪ್ರತಿಯೊಬ್ಬ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಅಧಿಕೃತವಾದ ವೆಬ್ ಸೈಟ್ ಯಾವುದು ಎಂದರೆ https:// karnemakaone kar. nic. in ಏನೋ ಅಂತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಈ ವೆಬ್ಸೈಟ್ಗಳ ಮೂಲಕ ಅಗತ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ನೀವು ಅರ್ಜಿಯನ್ನ ಸಲ್ಲಿಸಿ.