ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದಿಂದ 2024 ಮತ್ತು 2025 ನೇ ಸಾಲಿನ ಸ್ವಂತ ಉದ್ಯೋಗವನ್ನು ಮಾಡಬೇಕು ಅಂದುಕೊಂಡಿರುವ ಸಾರ್ವಜನಿಕರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲಾ ದಾಖಲೆಗಳು ಇರಬೇಕು, ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ಇದೆ ತಿಳಿಯೋಣ.
ಆರ್ಯ ವೈಶ್ಯ ಸಮುದಾಯದವರಿಗೆ ಸ್ವಂತ ಉದ್ಯೋಗವನ್ನು ಮಾಡಬೇಕು ಎನ್ನುವ ಕಾರಣಕ್ಕಾಗಿ ಅವರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಸಾಂಪ್ರದಾಯಿಕ ವೃತ್ತಿಗಳಲ್ಲದೆ ಇತರೆ ವೃತ್ತಿಗಳಿಗೂ ಹಸು ಸಾಕಾಣಿಕೆ, ವ್ಯಾಪಾರ ಚಟುವಟಿಕೆಗಳು, ಸೇವಾ ಚಟುವಟಿಕೆಗಳು, ಇತರೆ ಯಾವುದೇ ಸ್ವಯಂ ಉದ್ಯೋಗ ಚಟುವಟಿಕೆಗಳು ಕೈಗೊಳ್ಳಲು ಈ ನಿಗಮದಿಂದ ರೂ. 1 ಲಕ್ಷ ಸಾಲ ಸಹಾಯಧನ ನೀಡಲಾಗುತ್ತದೆ ಇದರಲ್ಲಿ 20000 ಸಹಾಯಧನವಿರುತ್ತದೆ ಹಾಗೂ ಬಾಕಿ ಉಳಿದ ಮೊತ್ತವನ್ನು ಶೇಕಡ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
2019- 20,ನೇ ಸಾಲಿನಲ್ಲಿ 2021ನೇ ಸಾಲಿನಲ್ಲೂ ಕೂಡ ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸಾಲವನ್ನ ತೆಗೆದುಕೊಂಡಿದ್ದರೆ, ನಿಗದಿತ ಕಾಲಾವಧಿಯಲ್ಲಿ ಈ ಸಾಲವನ್ನು ನೀವೇನಾದರೂ ಮರುಪಾವತಿ ಮಾಡಿದ್ದೆ ಆದರೆ ಅಂತವರು 2024 ಮತ್ತು 2025 ನೇ ಸಾಲಿನಲ್ಲಿ ಸಹಾಯಧನ ಅಥವಾ ಸಾಲವನ್ನ ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.
ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು, ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು,
ಇದನ್ನು ಕೂಡ ಓದಿ:
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
HIV ಸೋಂಕಿತರಿಗೆ ಗುಡ್ ನ್ಯೂಸ್ 100% ಪರಿಣಾಮಕಾರಿ ಔಷಧಿ
ಈ ಲೋನ್ ಅಪ್ಲಿಕೇಶನ್ ಇದ್ದರೆ ಅದನ್ನ ಡಿಲೀಟ್ ಮಾಡಿ
ಕರ್ನಾಟಕದ 10 ಜಿಲ್ಲೆಗಳಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ
ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಮೊದಲು ಈ ವಿಷಯದ ಬಗ್ಗೆ ತಿಳಿಯಿರಿ
ಅರ್ಜಿದಾರರ ವಯಸ್ಸು 18 ವರ್ಷದಿಂದ 55 ವರ್ಷದ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು, ಮೂರು ಲಕ್ಷದ ಒಳಗೆ ಆದಾಯವನ್ನು ಹೊಂದಿರುವವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಒಂದು ಕುಟುಂಬದಲ್ಲಿ ಒಬ್ಬ ಫಲಾನುಭವಿಗಳು ಮಾತ್ರ ಈ ಯೋಜನೆಯ ಸಾಲ ಅಥವಾ ಸಹಾಯಧನ ಪಡೆದುಕೊಳ್ಳಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲ ಪ್ರಮುಖ ದಾಖಲೆಗಳು ಬೇಕು ಎಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್, ಫೋಟೋ, ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಎಂದರೆ ಜುಲೈ 12ನೇ ತಾರೀಖಿನಿಂದ ಆಗಸ್ಟ್ 31ನೇ ತಾರೀಕಿನ ಒಳಗಡೆ ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಅರ್ಜಿಗಳನ್ನ ಗ್ರಾಮ ಒನ್, ಕರ್ನಾಟಕ ಒನ್ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.