ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ
ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರ ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯಿಂದ ಗ್ರಾಮೀಣ ಪುನರ್ವಸತಿ ಯೋಜನೆ ಅಡಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ
ಹಾಗೂ ತಾಲೂಕ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ನೇಮಕಾತಿಯನ್ನ ಮಾಡಲಾಗುತ್ತದೆ ಅದು ವಿಕಲಚೇತನರಿಂದ ಅರ್ಜಿಯನ್ನು ಆಹ್ವಾನ ಮಾಡುವಂತೆ ಸೂಚನೆಯನ್ನು ತಿಳಿಸಿದ್ದಾರೆ.
ಯಾವ ಯಾವ ಗ್ರಾಮ ಪಂಚಾಯಿತಿಗಳಿಂದ ಈ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರ ಹುದ್ದೆಗೆ ನೇಮಕಾತಿಯನ್ನ ಹೊರಡಿಸುತ್ತಾರೆ ಎಂಬುದನ್ನು ತಿಳಿಯೋಣ,
ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು ಇರಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು,ಯಾವ ಪ್ರಮುಖ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ.
ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಬೇಕಾದರೆ ಯಾವ ಅರ್ಹತೆ ಇರಬೇಕು ಎಂದರೆ ಅರ್ಜಿದಾರರು ಕರ್ನಾಟಕದಲ್ಲಿ ಖಾಯಂ ನಿವಾಸಿಗಳಾಗಿರಬೇಕು,
ಇದನ್ನು ಓದಿ:
ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ
ಈ ವ್ಯಾಪಾರ ಮಾಡುವುದರಿಂದ ಒಂದು ಲಕ್ಷ ಆದಾಯ ಪಡೆಯಬಹುದು
ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ
31 ಜಿಲ್ಲೆಯವರಿಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ
18 ರಿಂದ 40 ವರ್ಷದ ವಿಕಲಚೇತನರಾಗಿದ್ದರೆ ಮಾತ್ರ ನೀವು ಇಲ್ಲಿ ಅರ್ಜಿ ಸಲ್ಲಿಸಬಹುದು, 10ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯವನ್ನು ನಿರ್ವಹಿಸಲು ಸಾಮರ್ಥ್ಯವನ್ನು ಹೊಂದಿರುವವರು ವಿಕಲಚೇತನರು ಮಾತ್ರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾದಂತಹ ಪ್ರಮುಖ ದಾಖಲೆಗಳು ಯಾವುದು ಎಂದರೆ ಆಧಾರ ಕಾರ್ಡ್, ರೇಷನ್ ಕಾರ್ಡ್, 10ನೇ ತರಗತಿಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ವಿಕಲಚೇತನರ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್, ಭಾವಚಿತ್ರ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಗ್ರಾಮೀಣ ಪುನರ್ವಸತಿ ಯೋಜನೆ ಅಡಿ
ಬೆಂಗಳೂರು ಹೊರ ವಲಯದ ನಾನಾ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಖಾಲಿ ಇರುವ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ನೇಮಕಾತಿಗೆ ವಿಕಲಚೇತನದಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಬೆಂಗಳೂರು ದಕ್ಷಿಣ ತಾಲೂಕಿನ ಗ್ರಾಮ ಪಂಚಾಯಿತಿಗಳಾದ
ಸೋಮನಹಳ್ಳಿ, ಅಜ್ಜನಹಳ್ಳಿ, ಗೊಲ್ಲಹಳ್ಳಿ ಮತ್ತು ರೋಮೊಹಳ್ಳಿ, ಆನೇಕಲ್, ತಾಲೂಕಿನ ಹಾರಗದ್ದೆ, ಬನ್ನೇರುಘಟ್ಟ, ಹಬ್ಬ ಗೋಡಿ, ನೆರಿಗಾ ಮತ್ತು ಚಂದಾಪುರ, ಯಲಹಂಕ ತಾಲೂಕಿನ ರಾಜನಕುಂಟೆ, ಸಾತನೂರು ಗ್ರಾಮ ಪಂಚಾಯಿತಿ ಖಾಲಿ ಇರುವ
ಪುನರ್ ವಸತಿ ಕಾರ್ಯಕರ್ತರನ್ನು ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಪತ್ರಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ.