ರಾತ್ರಿ ಸಮಯ ಮೊಸರು ತಿನ್ನುವ ಜನಕ್ಕೆ ಮಾತ್ರ

ಮನೆ ಮದ್ದು

ರಾತ್ರಿ ಸಮಯ ಮೊಸರು ಸೇವಿಸುವವರು ಈ ವಿಷಯ ಕೇಳಿದರೆ ಮೊಸರು ತಿನ್ನುವುದನ್ನೇ ಬಿಟ್ಟುಬಿಡುತ್ತೀರಿ. ಮೊಸರು ಸೇವನೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದು ತನ್ನಲ್ಲಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿದ್ದು ನಮ್ಮ ದೇಹಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ಮೊಸರು ಆರೋಗ್ಯಕ್ಕೆ ಒಳ್ಳೆಯದು ಈ ವಿಷಯ ಎಲ್ಲರಿಗೂ ಗೊತ್ತು ಆದರೆ ಯಾವ ಸಮಯದಲ್ಲಿ ಮೊಸರು ಸೇವನೆ ಮಾಡಬೇಕು ಎನ್ನುವ ಗೊಂದಲ ಬಹಳ ಜನರಲ್ಲಿ ಇದೆ. ಯಾವ ಋತುವಿನಲ್ಲಿ ಹಾಗೂ ಯಾವ ಸಮಯದಲ್ಲಿ ಮೊಸರನ್ನು ಸೇವನೆ ಮಾಡಬಾರದು ಎಂಬುದನ್ನು ಸರಿಯಾಗಿ ತಿಳಿದಿದ್ದರೆ ಅದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಹಾಗಾದರೆ ಸ್ನೇಹಿತರೆ ಈ ಲೇಖನದಲ್ಲಿ ಸಂಪೂರ್ಣ ವಿಷಯವನ್ನು ತಿಳಿಯೋಣ ಬನ್ನಿ. ರಾತ್ರಿ ಸಮಯ ಮೊಸರನ್ನು ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ಆಯುರ್ವೇದ ಕೂಡ ಇದನ್ನೇ ಹೇಳುತ್ತದೆ. ರಾತ್ರಿ ಊಟ ಮಾಡಿದ ನಂತರ ನಾವು ಶ್ರಮದ ಕೆಲಸ ಮಾಡುವುದಿಲ್ಲ ಬಹುಬೇಗ ನಿದ್ದೆಗೆ ಜಾರುತ್ತೇವೆ ಹಾಗಿರುವಾಗ

ಸೇವಿಸಿದ ಆಹಾರ ರಾತ್ರಿ ಹೊತ್ತು ಸರಿಯಾಗಿ ಜೀರ್ಣವಾಗುವುದಿಲ್ಲ ಇದರಿಂದ ನಾವು ಅನೇಕೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಫ ಪಿತ್ತ ಜೀರ್ಣಕ್ರಿಯೆಗೆ ಸಂಬಂದಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ಸೇವನೆ ಮಾಡುವುದು ಬಹಳ ಒಳ್ಳೆಯದು ಆಲಸ್ಯ ಅಸಿಡಿಟಿ ಕೈಕಾಲಿನ ನೋವು ಕಣ್ಣಿನ ಸಮಸ್ಯೆಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದರಿಂದ ಮುಕ್ತಿ ಸಿಗುತ್ತದೆ. ಒಂದು ಸಮಯದಲ್ಲಿ 250 ಗ್ರಾಮ್ ಮೊಸರು ಸೇವನೆ ಮಾಡಬೇಕು. ಆಲಸ್ಯ ಇರುವವರು ಎಸ್ಟೇ ತಿಂದರೂ ತಮ್ಮ ತೂಕದಲ್ಲಿ ಹೆಚ್ಜಳ ಆಗದೆ ಇರುವವರು ಸರಿಯಾದ ಜೀರ್ಣಕ್ರಿಯೆ ಆಗದಿರುವುದು ಹಸಿವಾಗುವುದಿಲ್ಲ ಎನ್ನುವವರು ತಮ್ಮ ಊಟದ ನಂತರ ಮೊಸರಿಗೆ ಸಕ್ಕರೆ ಸೇರಿಸಿಕೊಂಡು ಸೇವನೆ ಮಾಡುವುದು ಒಳ್ಳೆಯದು ಇದರಿಂದ ತೂಕವು ಸಹ ಹೆಚ್ಚುತ್ತಾ ಹೋಗುತ್ತದೆ.

ಹಾಲಿನ ಜೊತೆ ಮೊಸರನ್ನು ಸೇರಿಸಿಕೊಂಡು ತಿನ್ನಬಾರದು ಹಾಗೇನೇ ರಾತ್ರಿ ಸಮಯ ಮೊಸರಿಗೆ ಸಕ್ಕರೆ ಸೇರಿಸಿಕೊಂಡು ತಿನ್ನಬೇಡಿ ಏಕೆಂದರೆ ಆಯುರ್ವೇದದ ಪ್ರಕಾರ ರಾತ್ರಿ ಮೊಸರನ್ನು ಸೇವಿಸದಿರುವುದು ಒಳ್ಳೆಯದು ಅನಿವಾರ್ಯವಾದ ಸಮಯದಲ್ಲಿ ರಾತ್ರಿ ಹೊತ್ತು ಮೊಸರನ್ನು ತಿನ್ನಲೇಬೇಕು ಎನ್ನುವವರು ಮೊಸರಿಗೆ ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿ ಸೇವನೆ ಮಾಡಬೇಕು ಏಕೆಂದರೆ ಕಾಳುಮೆಣಸಿನ ಪುಡಿಯನ್ನು ಮೊಸರಿಗೆ ಬೆರಸಿ ಸೇವಿಸುವುದರಿಂದ ರಾತ್ರಿ ಹೊತ್ತು ತಿಂದಂತಹ ಮೊಸರಿನಿಂದ ಶೀತ ಕಫ ಆಗುವುದಿಲ್ಲ ಕಾಳುಮೆಣಸಿನ ಪುಡಿ ಉಷ್ಣತೆಯಿಂದ ಕುಡಿರುವುದರಿಂದ ಸಿತವಾಗುವುದನ್ನು ತಡೆಯುತ್ತದೆ. ಹಾಗಾಗಿ ಸ್ನೇಹಿತರೆ ಮೊಸರನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಆದರೆ ಯಾವ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಂಡು ಮೊಸರನ್ನು ಸೇವಿಸಿ ಇದರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯಾದಂತದ ಪರಿಣಾಮ ಬೀರುವುದಿಲ್ಲ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.