ಗರ್ಭಿಣಿ ಮಹಿಳೆಯರು ಇದನ್ನು ತಿಂದರೆ ಹುಟ್ಟುವ ಮಕ್ಕಳಿಗೆ ತೊಂದರೆ

ಮನೆ ಮದ್ದು

ಗರ್ಭಾವಸ್ಥೆಯಲ್ಲಿ ಯಾವ ಯಾವ ಆಹಾರವನ್ನು ಸೇವಿಸಬಾರದು ಮತ್ತು ಏಕೆ. ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಒಂದು ವಿಶೇಷವಾದಂತಹ ಸಂದರ್ಭ ಆ ಸಮಯದಲ್ಲಿ ಹೆಣ್ಣು ತನ್ನ ಮಡಿಲಿನಲ್ಲಿ ಒಂದು ಜೀವವನ್ನು ಹೊತ್ತು ಕೊಳ್ಳುವುದರ ಮೂಲಕ ಸಾಕಷ್ಟು ಮಾನಸಿಕ ಮತ್ತು ದೈಹಿಕ ಬದಲಾವಣೆಗಳನ್ನು ಅನುಭವಿಸಬೇಕಾಗುತ್ತದೆ. ಹಾರ್ಮೋನ್ ಗಳ ಬದಲಾವಣೆಯು ಆಕೆಯ ಅಭಿರುಚಿ ಆಸಕ್ತಿ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. ಅದಕ್ಕೆ ಅನುಗುಣವಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದಲ್ಲಿ ಅತಿಯಾದ ಹುಳಿ ಸಿಹಿ ಖಾರ ಸಪ್ಪೆ ಹೀಗೆ ವಿವಿಧ ಬಗೆಯ ರುಚಿಕರವಾದ ಆಹಾರಗಳನ್ನು ತಿನ್ನಲು ಬಯಸುತ್ತಾರೆ. ಗರ್ಭಿಣಿಯರು ಹೆಚ್ಚು ಧೈರ್ಯಶಾಲಿಗಳು ಆಗಿ ಬಲಶಾಲಿಗಳು ಆಗಿಯೂ ಸಾಹಸಮಯಿಗಾಳಾಗಿಯೂ ಇರುತ್ತಾರೆ ಅಂತ ಗರ್ಭ ವ್ಯವಸ್ಥೆ ಕೊನೆಗೊಂಡ ಮೇಲೆ ಅವರು ಈ ಗುಣಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಗರ್ಭಿಣಿಯರಲ್ಲಿ ಮಾನಸಿಕ ತೊಂದರೆಗಳು ಸ್ವಲ್ಪಮಟ್ಟಿಗೆ ಏರುಪೇರಾಗುತ್ತದೆ.

ಸ್ವಲ್ಪ ಕಿರಿಕಿರಿ ಶೀಘ್ರಕೋಪ ಸೂಕ್ಷ್ಮ ಮನಸ್ಥಿತಿಯರಾಗಿರುತ್ತಾರೆ. ಕ್ಷಯ ರೋಗಿಗಳು ಗರ್ಭಿಣಿಯರಾದಾಗ ಅವರಲ್ಲಿ ರೋಗಾಣು ಉದ್ಭವ ತಗ್ಗಿನ ಮಟ್ಟದಲ್ಲಿ ಇರುತ್ತದೆ ಆದರೆ ಗರ್ಭವಸ್ಥೆ ಕೊನೆಗೊಂಡಮೇಲೆ ರೋಗತಿಕ್ಷವಾಗುತ್ತದೆ. ಬಲಹೀನ ರೋಗಿಷ್ಟ ಸೂಕ್ಷ್ಮಾಣುಜೀವಿಗಳು ಅತಿಚಿಕ್ಕ ವಯಸ್ಸಿನವರು ಮತ್ತು ಅತಿಹೆಚ್ಚು ವಯಸ್ಕರು ಗರ್ಭಿಣಿಯರಾದರೆ ಗರ್ಭಾವಸ್ಥೆಯಲ್ಲಿ ಅವರು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹೊಟ್ಟೆತೊಳೆಯುವಂತೆ ಆಗುವುದು ವಾಂತಿ ಬರುವುದು ಕೆಲವು ಬಯಕೆ ಹಲ್ಲುನೋವು ಕೆಮ್ಮು ಗರ್ಭಕಾಲದ ಪ್ರಾರಂಭೀಕ 3 ತಿಂಗಳು ಮತ್ತು ಕೊನೆಯ ತಿಂಗಳು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಕಾಲಿನ ಅಭಿದಾಮಿಗಳು ಉದಿಕೊಳ್ಳುವುದು ಕಾಲು ತೊಡಕು ಊತ ನೋವು ಮುಂತಾಗುವುದು ಇತ್ಯಾದಿ ಸಮಸ್ಯೆಗಳು ಗರ್ಭಿಣಿಯರಲ್ಲಿ ಕಾಡುತ್ತವೆ. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಹೊಂದಿದಂತೆ ತಾಯಿಯ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಸೇವಿಸುವ ಆಹಾರ ಪದಾರ್ಥಗಳ ಪ್ರಮಾಣವು ಹೆಚ್ಚಾಗುತ್ತದೆ ಒಂದೇ ಸಮಯಕ್ಕೆ ಹೆಚ್ಚಾಗಿ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನಬೇಕು ಹಣ್ಣುಗಳು ತರಕಾರಿ ಸೊಪ್ಪು ಬೇಯಿಸಿದ ತರಕಾರಿ ತಾಜಾ ಹಣ್ಣುಗಳ ರಸವನ್ನು ಸೇವಿಸಬೇಕು.

ಕೆಲವು ಮಹಿಳೆಯರು ತಾವು ತಿನ್ನುವ ಆಹಾರ ಮಗುವಿನ ಮೇಲೆ ಹೇಗೆ ಪ್ರಭಾವ ಬಿರುತ್ತದೆ ಎನ್ನುವುದನ್ನು ತಿಳಿದಿರುವುದಿಲ್ಲ ಬದಲಿಗೆ ಬಾಯಿಗೆ ರುಚಿ ನೀಡುವ ಆಹಾರವನ್ನು ತಿನ್ನುತ್ತಾರೆ ಕೆಲವು ಮಹಿಳೆಯರಿಗೆ ಕುರುಕಲು ತಿಂಡಿ ಚಿಪ್ಸ್ ಗಳು ಹೆಚ್ಚು ರುಚಿಯನ್ನು ನೀಡುತ್ತವೆ. ಇತ್ತೀಚೆಗೆ ಗರ್ಭಿಣಿಯರು ಸೇವಿಸುವ ಆಹಾರಗಳ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸಲಾಗಿದೆ. ಇದರ ಪ್ರಕಾರ ಕುರುಕಲು ತಿಂಡಿ ಮತ್ತು ಎಣ್ಣೆಯ ಚಿಪ್ಸ್ ಅಪಾಯಕಾರಿ ಅಂತ ಹೇಳಲಾಗಿದೆ. ಅದರಲ್ಲೂ ಆಲೂಗಡ್ಡೆ ಚಿಪ್ಸ್ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬಿರುತ್ತದೆ ಅತಿಯಾದ ಆಲೂಗಡ್ಡೆ ಚಿಲ್ಸ್ ಸೇವಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ ಒಮೆಗ6 ಮತ್ತು ಲಿನೊಲಿಕ್ ಆಮ್ಲವು ಗರ್ಭಿಣಿಯರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಈ 2 ಅಂಶಗಳು ಆಹಾರ ಅಥವಾ ದೇಹದಲ್ಲಿ ಹೆಚ್ಚಿನ ಪ್ರಮಾಣ ಕಂಡು ಬಂದರೆ ಉರಿಯೂತ ಉಂಟು ಮಾಡುತ್ತದೆ. ದೇಹಕ್ಕೆ ಅಗತ್ಯವಾದ ಲಿನೊಲಿಕ್ ಪ್ರಮಾಣ 3 ಪಟ್ಟು ಹೆಚ್ಚಾಯಿತು ಅಂದರೆ ಗರ್ಭ ಮತ್ತು ಭ್ರೂಣದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ.

ಅಲ್ಲದೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಮತ್ತು ಕಾಯಿಲೆಗಳು ಕಾಡುವ ಸಾಧ್ಯತೆ ಹೆಚ್ಚಾಗುತ್ತದೆ ಗರ್ಭಿಣಿಯರು ತಮ್ಮ ಆಹಾರ ಕ್ರಮಗಳಲ್ಲಿ ಸಾಕಷ್ಟು ಕಾಳಜಿ ಮತ್ತು ಎಚ್ಚರವನ್ನು ವಹಿಸಬೇಕು. ಮಗುವಿನ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ಮತ್ತು ವಿಟಮಿನ್ ಗಳು ಬೇಕಾಗುತ್ತವೆ. ಇವುಗಳು ಅಗತ್ಯಕ್ಕೂ ಮೀರಿ ಹೆಚ್ಚಾದರೆ ಅದು ಸಹ ಭ್ರೂಣದ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ಸಾಕಷ್ಟು ತೊಂದರೆ ಉಂಟುಮಾಡುತ್ತದೆ. ಆಲುಗಡ್ಡೆಯಲ್ಲಿರುವ ಲಿನೊಲಿಕ್ ಆಸಿಡ್ ಬಗ್ಗೆ ಮೊಟ್ಟ ಮೊದಲಿಗೆ ಇಲಿಗಳ ಮೇಲೆ ಪ್ರಯೋಗವನ್ನು ಮಾಡಲಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ಇಲಿಗಳಿಗೆ ಲಿನೊಲಿಕ್ ಆಸಿಡ್ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಮೊದಲು ಪರೀಕ್ಷೆ ಮಾಡುತ್ತಾರೆ. ಅಗತ್ಯವಾದ ಲಿನೊಲಿಕ್ ಆಮ್ಲ ಹಾರ್ಮೋನಗಳನ್ನು ನಿಯಂತ್ರಿಸಲಾಗುತ್ತದೆ. ಮಗುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಗರ್ಭಾಶಯದ ಸಂಕೋಚಕ್ಕೆ ಸಹಾಯ ಮಾಡುತ್ತದೆ. ಪಿತ್ತಜನಕದಲ್ಲಿ ಉರಿಯೂತ ಪ್ರೋಟೀನ್ಗಳ ಬದಲಾವಣೆ ಮತ್ತು ಇನ್ನಿತರ ಸಮಸ್ಯೆಗಳು ಸಹ ನಿಯಂತ್ರಣವಾಗುತ್ತದೆ.

ಅದೇ ಈ ಲಿನೊಲಿಕ್ ಆಮ್ಲಗಳ ಪ್ರಮಾಣ ಹೆಚ್ಚಾದರೆ ತಾಯಿ ಮತ್ತು ಮಗುವಿಗೆ ಇಬ್ಬರಿಗೂ ಆಪಾಯ ಎಂದು ತಿಳಿದುಬಂದಿದೆ ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಈ ಆಹಾರ ಪಧಾರ್ಥಗಳಿಂದ ದೂರವಿರಬೇಕು ಗರ್ಭಾವಸ್ಥೆಯಲ್ಲಿ ಇರುವಾಗ ಮದ್ಯಸೇವನೆ ಅಪ್ಪಿತಪ್ಪಿಯೂ ಮಾಡಬಾರದು ಅದು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತದೆ. ದಿನವಿಡೀ ಕೆಫೆನ್ ನಿಂದ ತುಂಬಿರುವ ಆಹಾರವನ್ನು ಸೇವಿಸಬಾರದು ಗರ್ಭಿಣಿಯರಿಗೆ ಹಣ್ಣುಗಳು ಉತ್ತಮವಾದುದು ಪಪ್ಪಾಯ ಮತ್ತು ಅನ್ನಾನಸ್ ಹಣ್ಣುಗಳಿಂದ ಆದಷ್ಟು ದೂರವಿರಬೇಕು ನೀವು ಮಾಂಸಹಾರಿಗಳಾದರೆ ಮೀನುಗಳನ್ನು ಮಿತವಾಗಿ ಸೇವಿಸಬೇಕು ಹಸಿಮಾಂಸ ಹಸಿಹಾಲು ಮತ್ತು ಕೆಟ್ಟಸೊಪ್ಪು ಮತ್ತು ಹಣ್ಣುಗಳನ್ನು ಸೇವಿಸಬಾರದು ಇವುಗಳು ಹೆಚ್ಚು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಗರ್ಭಿಣಿಯರು ಆಲೂಗಡ್ಡೆಗಳನ್ನು ಹೆಚ್ಚಾಗಿ ತಿನ್ನುವುದರಿಂದ ಆಲೂಗಡ್ಡೆ ಚಿಪ್ಸ್ ಗಳನ್ನು ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ಗರ್ಭಾವಸ್ಥೆಗೆ ಮತ್ತು ನಿಮ್ಮ ಗರ್ಭಕೋಶಕ್ಕೆ ಮತ್ತು ನಿಮ್ಮ ಮಗುವಿಗೆ ತುಂಬಾ ತೊಂದರೆಯನ್ನು ಉಂಟು ಮಾಡುತ್ತದೆ ಆದ್ದರಿಂದ ಇವುಗಳನ್ನು ತಿನ್ನಬೇಡಿ.

Leave a Reply

Your email address will not be published.