ಪುರಾಣ ಕಾಲದಿಂದಲೂ ಅತಿ ಶ್ರೀಮಂತ ಆಹಾರ ಎಂದು ಪರಿಗಣಿಸಲ್ಪಟ್ಟ ಆಹಾರ ತುಪ್ಪ. ಆದರೆ ಬಹುತೇಕ ಜನರು ತುಪ್ಪ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ತಮ್ಮ ದೇಹದ ತೂಕ ಹೆಚ್ಚುವುದು ಎಂಬ ತಪ್ಪು ಕಲ್ಪನೆಯಲ್ಲಿ ಇದ್ದಾರೆ ತುಪ್ಪ ಕೇವಲ ರುಚಿಕಾರಕ ಅಲ್ಲದೆ ಔಷಧೀಯ ಮತ್ತು ಸೌಂದರ್ಯ ವರ್ಧಕ ಗುಣಗಳನ್ನು ಹೊಂದಿದೆ ಹಾಲಿನಲ್ಲಿ ಇರುವ ಒಮೆಗಾ 3 ಕೊಬ್ಬಿನ ಆಮ್ಲಗಳು ವಿಟಮಿನ್ ಎ ಬ್ಯುಟೆರಿಕ್ ಆಮ್ಲ ಮತ್ತು ಆರೋಗ್ಯಕರ ಕೊಬ್ಬು ಎಲ್ಲವೂ ಹಾಲಿನಿಂದ ತಯಾರಾದ ಮೊಸರು ಬೆಣ್ಣೆ ಹಾಗೂ ತುಪ್ಪದಲ್ಲಿ ಇರುತ್ತದೆ. ಹಾಗಾಗಿ ತುಪ್ಪವು ಹಾಲಿನಷ್ಟೆ ಆರೋಗ್ಯಕರ. ಯಾರಿಗೂ ಹಾಲು ಮೊಸರು ಪನ್ನಿರಿನಂತಹ ಪದಾರ್ಥಗಳ ಅಲರ್ಜಿ ಇರುವುದೋ ಅಂತವರು ತುಪ್ಪದ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು ತುಪ್ಪವು ಪೂರ್ತಿಯಾಗಿ ಲೆಕ್ಟೋಸ್ ಫ್ರಿ ಆಗಿರುವುದರಿಂದ ಪ್ರತಿ ಮನುಷ್ಯ ಜೀವಿಗೂ ಅಗತ್ಯವಾದ ಆಹಾರ. ಒಬ್ಬ ಮನುಷ್ಯ ಪ್ರತಿ ನಿತ್ಯ ಮೂರರಿಂದ ನಾಲ್ಕು ಚಮಚ ತುಪ್ಪದ ಸೇವನೆ ಮಾಡಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ವೈಜ್ಞಾನಿಕವಾಗಿ
ಸಾಬೀತು ಆಗಿರುವಂತೆ ಪ್ರತಿ ನಿತ್ಯದ ಆಹಾರದಲ್ಲಿ ತುಪ್ಪ ಸೇವಿಸುವ ವ್ಯಕ್ತಿಗಳು ತಮ್ಮ ಕೆಲಸವನ್ನು ಚುರುಕಾಗಿ ಶ್ರದ್ಧೆಯಿಂದ ಮುಗಿಸುತ್ತಾರೆ ಅಂತಹ ಮೆದುಳಿನ ಶಕ್ತಿ ತುಪ್ಪ ತಿನ್ನದೇ ಇರುವವರ ಮೆದುಳಿನ ಶಕ್ತಿಗಿಂತ ದುಪ್ಪಟ್ಟು ಇರುವುದು. ತಜ್ಞರ ಪ್ರಕಾರ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಅಥವಾ ಎರಡು ಚಿಕ್ಕ ಚಮಚ ತುಪ್ಪ ಬೆರೆಸಿ ಸೇವಿಸಿದರೆ ಜೀರ್ಣ ಕ್ರಿಯೆ ಸುಲಭವಾಗಿ ಮಲಭದ್ಧತೆ ಸಮಸ್ಯೆ ಮೂಲವ್ಯಾಧಿ ಸಮಸ್ಯೆ ಯನ್ನ ದೂರ ಮಾಡುತ್ತದೆ. ತುಪ್ಪದಲ್ಲಿ ಇರುವ ಬ್ಯುಟಿರಿಕ್ ಅಂಶವು ಕರಳುಗಳನ್ನು ಸ್ವಚ್ಛಗೊಳಿಸಿ ಆಹಾರದಲ್ಲಿ ಇರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡಿ ರಕ್ತವನ್ನು ವೃದ್ಧಿಸುತ್ತದೆ ಇನ್ನೂ ಮೂಗು ಕಟ್ಟಿ ಉಸಿರಾಡಲು ತೊಂದರೆ ಅನುಭವಿಸುತ್ತಾ ಇರುವವರು ತುಪ್ಪವನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಬೆಳಗ್ಗೆ ಎದ್ದ ತಕ್ಷಣ ಎರಡು ಅಥವಾ ಮೂರು ಹನಿ ಮೂಗಿಗೆ ಹಾಕಿ ಕೊಳ್ಳುವುದರಿಂದ ಕಟ್ಟಿದ ಮೂಗು ತೆರೆದುಕೊಂಡು ಉಸಿರಾಡಲು ಸುಲಭ ಆಗುತ್ತದೆ ಇದು ಕಟ್ಟಿದ ಮೂಗಿನಿಂದ ಬರುವ ತಲೆ ನೋವನ್ನು ಕೂಡ ಕಡಿಮೆ ಮಾಡುತ್ತದೆ.
ಆದರೆ ತುಪ್ಪದ ಹನಿಯೂ ಹೆಚ್ಚು ಬಿಸಿ ಆಗಿದ್ದರೆ ಮೂಗಿನ ಒಳ ಭಾಗ ಸುಡುವ ಸಂಭವವೂ ಹೆಚ್ಚು ಹಾಗಾಗಿ ಉಗುರು ಬೆಚ್ಚನೆಯ ತುಪ್ಪದ ಹನಿಯೂ ಉತ್ತಮ. ತುಪ್ಪದಲ್ಲಿ ಇರುವ ಒಮೆಗಾ 3 ಮತ್ತು 6 ದೇಹದ ಕೊಬ್ಬನ್ನು ಕಡಿಮೆ ಮಾಡಲು ನೇರವಾಗಿ ಅತಿಯಾದ ದೇಹದ ತೂಕ ಅತಿಯಾದ ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ ಇನ್ನೂ ಡಯಾಬಿಟೀಸ್ ಇರುವ ವ್ಯಕ್ತಿಗಳು ತಿನ್ನುವ ಅಕ್ಕಿ ಮತ್ತು ಗೋಧಿ ರೊಟ್ಟಿಗಳಲ್ಲಿ ಹೆಚ್ಚು ಗ್ಲೈಕಾಮಿಕ್ ಇರುವ ಅಂಶಗಳು ಇರುವ ಕಾರಣ ಈ ಎರಡರಿಂದ ತಯಾರಿಸಿದ ಆಹಾರ ಮಧುಮೇಹಿಗಳಿಗೆ ಸೂಕ್ತ ಅಲ್ಲ ಆದರೆ ಅಕ್ಕಿ ಮತ್ತು ಗೋಧಿ ರೊಟ್ಟಿಯ ಮೇಲೆ ಕೊಂಚ ತುಪ್ಪ ಸವರಿ ತಿನ್ನುವುದರಿಂದ ಗ್ಲೈಸಮಿಕ್ ಅಂಶವು ಕಡಿಮೆ ಆಗುವುದು.
ತಿಂದ ಆಹಾರ ಬೇಗನೆ ಜೀರ್ಣ ಆಗುವುದು ಪ್ರತಿ ನಿತ್ಯ ತುಪ್ಪ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುವುದು ಕೂದಲಿನ ಸೌಂದರ್ಯವೂ ಕೂಡ ವೃದ್ಧಿಸುವುದು ಎಷ್ಟೋ ಮನೆ ಮದ್ದುಗಳಲ್ಲಿ ತುಪ್ಪವನ್ನು ಮುಖ್ಯ ವಸ್ತುವಾಗಿ ಬಳಸುತ್ತಾರೆ ಇನ್ನೂ ಚಳಿ ಕಾಲದಲ್ಲಿ ಒಡೆದ ತುಟಿಗಳಿಗೆ ರಾತ್ರಿ ಮಲಗುವ ಮುನ್ನ ತುಪ್ಪ ಸವರುವುದರಿಂದ ಒಡೆದ ತುಟಿಯಿಂದ ಆದ ರಕ್ತ ಸ್ರಾವ ಮತ್ತು ಉರಿಯನ್ನು ತಡೆದು ಸುಂದರ ತುಟಿಯನ್ನು ಪಡೆಯಬಹುದು. ತುಪ್ಪದ ಸೇವನೆಯು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ ಇನ್ನೂ ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಹಾಗೂ ಹೃದಯಾಘಾತ ಆಗುವ ಸಂಭವವನ್ನು ಕಡಿಮೆ ಮಾಡುತ್ತದೆ. ಬೆಳೆಯುವ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಲು ಅವರ ಮೂಳೆಗಳನ್ನು ಬಲಿಷ್ಟ ಗೊಲಿಸಲು ಅವರ ಪ್ರತಿ ನಿತ್ಯದ ಆಹಾರದಲ್ಲಿ ತುಪ್ಪ ಬಳಸಿ.