ಬಾಯಿಗೆ ರುಚಿಕೊಡುವ ದೋಸೆಯಿಂದ ದೇಹದ ತೂಕವನ್ನು ಇಳಿಸಿಕೊಳ್ಳಿ. ದೇಹದ ತೂಕವನ್ನು ಹೊಂದಾಣಿಕೆಯನ್ನು ಕಾಪಾಡಲು ಎಲ್ಲರೂ ಬಯಸುತ್ತಾರೆ ಆದರೆ ಇಂದಿನ ಒತ್ತಡದ ಜೀವನದಲ್ಲಿ ಗಂಟೆಗಟ್ಟಲೆ ವ್ಯಾಯಾಮ ಮಾಡುವುದು ದೇಹದ ಆಗತ್ಯತೆಗೆ ಬೇಕಾದ ಅವಶ್ಯ ಪೋಷಕಾಂಶಗಳ ಅಹಾರಗಳನ್ನು ಸೇವಿಸುವುದು ಎಷ್ಟೋ ಜನಕ್ಕೆ ಕಷ್ಟವಾಗಿದೆ. ಅದರಲ್ಲೂ ಬಾಯಿರುಚಿ ಬಿಟ್ಟು ಪತ್ತೆ ಮಾಡುವದು ಕಷ್ಟದ ಕೆಲಸವೇ ಸರಿ. ದಕ್ಷಿಣ ಭಾರತದ ಹಿಂದಿನ ಆಹಾರ ಪದ್ಧತಿಗಳು ದೇಹದ ಸ್ವಾಸ್ಥ್ಯ ಕಾಪಾಡುವ ಉತ್ತಮ ಆಹಾರಗಳು ಎಂದು ಆಹಾರ ತಜ್ಞರು ಹೇಳುತ್ತಾರೆ ಅದರಲ್ಲೂ ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಆಹಾರ ದೋಸೆ ನಿಜವಾಗಿಯೂ ನಿಮ್ಮ ತೂಕ ಇಳಿಸಲು ಸಹಾಯಕವಾಗಿದೆ. ಇದು ನಂಬಲೇಬೇಕಾದ ವಿಷಯ ದೋಸೆ ತಯಾರಿಸುವಾಗ ಅಧಿಕ ಮಸಾಲೆ ತುಪ್ಪ ಬೆಣ್ಣೆ ಬಳಸುವುದರಿಂದ ದೋಸೆ ರುಚಿಯಾಗಿ ಇರುತ್ತದೆ ಆದರೆ ಅಂತಹ ದೋಸೆಗಳು ಆರೋಗ್ಯಕರವಲ್ಲ ತೂಕ ಇಳಿಸಲು ಬಯಸುವವರಿಗೆ ಈ ರೀತಿಯ ದೋಸೆಗಳು ಸೂಕ್ತವಲ್ಲ.
ಹಾಗಾದ್ರೆ ನಾವು ಯಾವ ರೀತಿಯ ದೋಸೆ ತಿನ್ನಬೇಕು ಮತ್ತು ನಮ್ಮ ದೇಹದ ತೂಕ ಕಡಿಮೆ ಆಗ್ಬೇಕು ಅಂದ್ರೆ ಏನು ಮಾಡಬೇಕು ಈ ಲೇಖನ ಸಂಪೂರ್ಣ ಓದಿ. ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಪ್ಸ್ ಗಳು ಕಡಿಮೆ ಇರುತ್ತದೆ ಆದರೆ ಅಕ್ಕಿಯಲ್ಲಿ ತಯಾರಿಸಿದ ದೋಸೆಯಲ್ಲಿ ಕಾರ್ಪ್ಸಗಳು ಹೆಚ್ಚಿರುತ್ತವೆ ಅದ್ದರಿಂದ ತೂಕ ಇಳಿಸಲು ದೋಸೆ ಸಹಕಾರಿಯಾಗಿದೆ. ಹಾಗಾಗಿ ನೀವು ಕೂಡ ತೂಕ ಇಳಿಸಬೇಕಾದರೆ ಮಸಾಲೆ ಎಣ್ಣೆ ತುಪ್ಪ ಬೆಣ್ಣೆ ಬೆರಸದ ಇರುವ ದೋಸೆಯನ್ನು ಅಳವಡಿಸಿಕೊಳ್ಳಿ ಇನ್ನು ದೋಸೆ ಹಿಟ್ಟಿನಲ್ಲಿ ಬೆರೆಸಿರುವ ಉದ್ದೀನ ಬೆಳೆ ಅಕ್ಕಿ ಮೆಂತೆ ಕಡಲೇ ಬೇಳೆಗಳು ದೋಸೆಯನ್ನು ಒಂದು ಪೌಷ್ಟಿಕ ಆಹಾರವಾಗುವಂತೆ ಮಾಡುತ್ತವೆ. ಇದೆಲ್ಲದರ ಮಿಶ್ರಣದಿಂದ ದೋಸೆಯಲ್ಲಿ ಅತ್ಯಧಿಕ ಕಾರ್ಬೋಹೈಡ್ರೇಟ್ ಮತ್ತು ಪೌಷ್ಟಿಕಾಂಶಗಳು ಇರುತ್ತವೆ ದೋಸೆಯ ಸೇವನೆಯಿಂದ ಸಮ ತೂಕದ ಪೌಷ್ಟಿಕಾಂಶಗಳು ದೇಹಕ್ಕೆ ಸೇರುತ್ತವೆ.
ಇನ್ನು ರುಚಿಯಲ್ಲಿ ಯಾವುದೇ ರಾಜಿಯಾಗುವ ಅಗತ್ಯವಿಲ್ಲ ದೋಸೆ ಸುಲಭವಾಗಿ ಜೀರ್ಣವಾಗುವಂತಹ ಆಹಾರ. ಸಂಪೂರ್ಣ ನೈಸರ್ಗಿಕ ಆಹಾರ ಪಧಾರ್ಥಗಳಿಂದ ತಯಾರಿಸಿದ ದೋಸೆ ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ. ದೋಸೆಯ ಹಿಟ್ಟು 6 ರಿಂದ 7 ಗಂಟೆಗಳ ಕಾಲ ಹುದುಗಿರುತ್ತದೆ ಹಾಗಾಗಿ ಇದು ಬಹುಬೇಗ ಜೀರ್ಣವಾಗುತ್ತದೆ. ಇನ್ನು ದೋಸೆ ತಿಂದಾಗ ಹೆಚ್ಚು ಬಾಯಾರಿಕೆ ಯಾಗುವುದರಿಂದ ದೇಹಕ್ಕೆ ಬೇಕಾದ ಅಗತ್ಯ ನೀರನ್ನು ಸೇವಿಸುತ್ತೀರಿ ಇನ್ನು ದೋಸೆಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಹೆಚ್ಚಾಗಿದ್ದು ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡುತ್ತದೆ.
ಇಷ್ಟೇ ಅಲ್ಲದೆ ಮೂಳೆಗಳು ಬಲಿಷ್ಠವಾಗುತ್ತವೆ. ಮತ್ತು ದೇಹಕ್ಕೆ ಆಮ್ಲಜನಕದ ಸರಬರಾಜು ಹೆಚ್ಚಾಗಲು ಸಹ ಕಾರಣವಾಗುತ್ತದೆ. ಇನ್ನು ಈ ದೋಸೆಯನ್ನು ನಾನಸ್ಟಿಕ್ ಹಂಚಿನಲ್ಲಿ ಎಣ್ಣೆ ಉಪಯೋಗಿಸದೆ ಅಥವಾ ಕಡಿಮೆ ಎಣ್ಣೆ ಉಪಯೋಗಿಸಿ ತಯಾರಿಸುವದರಿಂದ ಅದರಲ್ಲಿ ಕ್ಯಾಲೊರಿಗಳ ಪ್ರಮಾಣ ಕಡಿಮೆಯಾಗಿರುತ್ತದೆ. ಒಟ್ಟಾರೆ ದೋಸೆ ಆರೋಗ್ಯಕರವಾಗಿ ದೇಹದ ತೂಕ ಕಡಿಮೆಮಾಡಲು ಅಥವಾ ಕಾಪಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ ಅಲ್ಲದೆ ರುಚಿಯಲ್ಲಿ ಯಾವುದೇ ರಾಜಿಯಿಲ್ಲ ಒಟ್ಟಿನಲ್ಲಿ ದೋಸೆ ತಿನ್ನಿ ದೇಹದ ತೂಕ ಇಳಿಸಿರಿ. ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಿ.