ಕರ್ನಾಟಕದಲ್ಲಿಯೇ ಅತ್ಯದ್ಭುತವಾದ ಶಕ್ತಿ ದೇವಾಲಯ

ದೇವರು

ಕರ್ನಾಟಕದಲ್ಲಿಯೇ ಅತ್ಯದ್ಭುತವಾದ ದೇವಾಲಯ ಇದಾಗಿದೆ ಇದನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯುತ್ತಾರೆ. ದೇವಾಲಯ ಅಂದ್ರೆ ಅದೊಂದು ಅತ್ಯಂತ ಹೆಚ್ಚು ಪವಿತ್ರತೆ ಹೊಂದಿರುವ ಸ್ಥಳ ಎಂದರೆ ತಪ್ಪಾಗುವುದಿಲ್ಲ ಇಂದು ನಮ್ಮಲ್ಲಿ ಸಣ್ಣ ಸಣ್ಣ ಗಲ್ಲಿಯಲ್ಲಿ ಸಹ ದೇವಾಲಯ ನಿರ್ಮಾಣ ಮಾಡುತ್ತಾರೆ ಆದ್ರೆ ದೇವಾಲಯ ಅಂದ್ರೆ ಅದಕ್ಕೆ ಆಗಿರುವ ಒಂದು ಶಾಸ್ತ್ರ ಇದೆ ಇಂತಹ ಪರಿಪೂರ್ಣವಾಗಿ ನಿರ್ಮಾಣ ಆಗಿರೋ ದೇವಾಲಯಗಳು ನಾವು ಇಂದಿನ ದಿನಗಳಲ್ಲಿ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ ಆದ್ರೆ ನಮ್ಮ ಪೂರ್ವಜರು ಇಂತಹ ಸಾಕಷ್ಟು ದೇವಾಲಯಗಳನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ ಇಂತಹ ದೇವಾಲಯಗಳು ನಿಜಕ್ಕೂ ನಮಗೆ ಅಚ್ಚರಿ ಉಂಟು ಮಾಡುತ್ತದೆ ಅಲ್ಲಿರುವ ದೇವರ ಮೂರ್ತಿಗಳಲ್ಲಿ ಸಹ ಸಾಕಷ್ಟು ಶಕ್ತಿ ಇರುತ್ತದೆ ನಾವು ನಿಮಗೆ ಶಕ್ತಿಶಾಲಿ ದೇವಾಲಯದ ಬಗ್ಗೆ ತಿಳಿಸುತ್ತಾ ಇದ್ದೇವೆ. ಇಟಗಿಯ ಮಹಾದೇವ ದೇವಾಲಯವನ್ನು ಕ್ರಿಸ್ತಶಕ 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೆ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹದೇವ ದಂಡನಾಯಕ ಮಹತ್ತರ ಯುದ್ಧವನ್ನು ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.

ದೇಶದಲ್ಲಿ ಅತ್ಯದ್ಭುತ ಎನ್ನಲಾಗುವ ವಾಸ್ತುಶಿಲ್ಪ ಹೊಂದಿರುವುದರಿಂದ ದೇವಾಲಯಗಳ ಚಕ್ರವರ್ತಿ ಎಂದು ಈ ದೇವಾಲಯವನ್ನು ಕರೆಯುತ್ತಾರೆ. 900 ವರ್ಷದ ಇತಿಹಾಸವಿರುವ ಈ ದೇವಾಲಯದಲ್ಲಿ ಬಾದಾಮಿ ಚಾಲುಕ್ಯರ ವರಟು ಮತ್ತು ಹೊಯ್ಸಳರ ಸೂಕ್ಷ್ಮ ಕೆತ್ತನೆಗಳು ಮೇಳೈಸಿವೆ ಎಂದೇ ಹೇಳಲಾಗುತ್ತದೆ. ಗರ್ಭಗುಡಿ ಸುಕನಾಸಿ ನವರಂಗ ಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯ ಪರಿಪೂರ್ಣ ದೇವಾಲಯ ಎಂದೇ ಬಿಂಬಿತವಾಗಿದೆ. ಈ ದೇವಾಲಯದ ಕುರಿತು ಗುಣಗಾನ ಮಾಡಿರುವ ಕಜಿನ್ಸ್ ಅವರು ಕರ್ನಾಟಕದಲ್ಲಿಯೇ ಇದೊಂದು ವಿಶಿಷ್ಟ ದೇವಾಲಯ ಎಂದಿದ್ದಾರೆ ನಕ್ಷತ್ರಾಕಾರದ ಜಗುಲಿ ವಿಭಿನ್ನವಾದ ಕೆತ್ತನೆಯನ್ನು ಒಳಗೊಂಡಿರುವ ಕಂಬಗಳು ಮುಖಮಂಟಪ ಹೊತ್ತುನಿಂತಿವೆ. ರಂಗಮಂಟಪದಲ್ಲಿನ ಕಂಬಗಳು ಬೇಲೂರಿನ ಚೆನ್ನಕೇಶವ ಗುಡಿಯ ಮಾದರಿಯಲ್ಲಿದೆ. ಗೋಲಾಕಾರವಾಗಿ ತಗ್ಗಾಗಿರುವ ಈ ಭುವನೇಶ್ವರಿಯಲ್ಲಿ ಭೈರವ ಇದ್ದಾನೆ ಇಡೀ ದೇವಾಲಯದಲ್ಲಿಕುಸರಿ ಕೆಲಸವೇ ತುಂಬಿಕೊಂಡಿದೆ ಮಂಟಪದ ನಂತರವೇ ಸುಗನಾಸಿ ಇಲ್ಲಿ ಶಿವನ ನಾಟ್ಯ ಭಂಗಿ ಇದೆ

ಕೀರ್ತಿ ಶಿಕರವಿದ್ದು ಬಳ್ಳಿ ಹಬ್ಬಿಕೊಂಡಿದೆ ದೇವಸ್ಥಾನದ ಹಿಂದಿನ ಭಾಗದಲ್ಲಿ ಪುಷಕರ್ಣಿ ಇದೆ ಇದು ಕೂಡ ವಿಭಿನ್ನ ಹಾಗೂ ಅಚ್ಚುಕಟ್ಟಾಗಿ ಇದೆ ಈ ಪುಷಕರ್ಣಿ ಬಹಳ ಆಳವಾಗಿದೆ ಈ ಪುಷಕರ್ಣಿಯ ಕೆಳ ಹಂತದವರೆಗೂ ಮೆಟ್ಟಿಲುಗಳಿವೆ ಈ ಪುಷಕರ್ಣಿಯಲ್ಲಿ ಈಗಲೂ ನೀರು ಇರುತ್ತದೆ ಅದೇ ನೀರನ್ನು ದೇವಸ್ಥಾನದ ಸುತ್ತಲೂ ಇರುವ ಉದ್ಯಾನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಹಂಪಿಗೆ ಬಹಳ ಸಮೀಪದಲ್ಲೇ ಇದ್ದರು ಇಟಗಿಯಲ್ಲಿ ಪ್ರವಾಸೋದ್ಯಮ ಅಷ್ಟಾಗಿ ಬೆಳೆದಿಲ್ಲ ಪ್ರವಾಸೋದ್ಯಮ ಇಲಾಖೆ ಈ ಕುರಿತು ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಪ್ರಿಯ ಓದುಗರೇ ಇಂತಹ ಒಂದು ಅತ್ಯದ್ಭುತವಾದ ದೇವಾಲಯಕ್ಕೆ ನೀವು ಸಹ ಒಂದು ಬಾರಿ ಭೇಟಿ ಕೊಟ್ಟು ಅಲ್ಲಿನ ಆ ದೇವಾಲಯದ ಸೌಂದರ್ಯವನ್ನು ಕಣ್ಣತುಂಬಿಕೊಳ್ಳಿ. ಜೀವನದಲ್ಲಿ ಕಷ್ಟಗಳು ಮನುಷ್ಯನಿಗೆ ಮಾತ್ರವೇ ಬರುತ್ತದೆ ಆದ್ರೆ ಕಷ್ಟ ಬಂತು ಎಂದು ನೀವು ಚಿಂತೆ ಮಾಡುವುದು ಬೇಡ, ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ನಿಮ್ಮ ದ್ವನಿ ತರಂಗದ ಆಧಾರದ ಮೇಲೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಮಹಾನ್ ಗುರುಗಳಾದ ಸಾಯಿ ಕೃಷ್ಣನ್ ಅವರು. ಸಮಸ್ಯೆ ಎಷ್ಟೇ ಕಷ್ಟ ಇರಲಿ ಪರಿಹಾರ ಮಾತ್ರ ನಿಶ್ಚಿತ ಈ ಕೂಡಲೇ ಕರೆ ಮಾಡಿರಿ 96861 68466

Leave a Reply

Your email address will not be published.