ಉಗುರಿನ ಮೇಲೆ ಈ ರೀತಿ ಇದ್ರೆ ಕ್ಯಾನ್ಸರ್ ಇರಬಹುದು

ಮನೆ ಮದ್ದು

ನಿಮ್ಮ ಉಗುರಿನಲ್ಲಿ ಅರ್ಧ ಚಂದ್ರಾಕೃತಿಯಿದೆಯೇ ಹಾಗಾದರೆ ತಪ್ಪದೆ ಇದನ್ನು ತಿಳಿಯಿರಿ. ನಮಸ್ಕಾರ ಓದುಗರೇ ನೀವು ಎಷ್ಟು ಆರೋಗ್ಯವಂತರು ಎಂದು ನಿಮ್ಮ ಉಗುರುಗಳಿಂದ ತಿಳಿಯಬಹುದು ನಮ್ಮ ದೇಹದ ಒಂದಿಷ್ಟು ಅಂಗಗಳು ನಮ್ಮ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನಮಗೆ ತಿಳಿಸುತ್ತದೆ ನಮ್ಮ ಹಿಂದಿನ ಅಜ್ಜಿ ತಾತನ ಕಾಲದಲ್ಲಿ ನಮ್ಮ ಕಣ್ಣು ನಾಲಿಗೆ ಎಲ್ಲವು ನೋಡಿಯೇ ನಮ್ಮ ದೇಹದ ಆರೋಗ್ಯದ ಬಗ್ಗೆ ತಿಳಿಸುತ್ತಾ ಇದ್ದರು ಆದರೆ ಇಂದಿನ ನಮ್ಮ ಯುವಕರಿಗೆ ಇದರ ಬಗ್ಗೆ ಸ್ವಲ್ಪವು ಗೊತ್ತಿಲ್ಲ ಬಿಡಿ ಆಧುನಿಕತೆ ಹೆಸರಲ್ಲಿ ಎಲ್ಲವು ಬದಲಾವಣೆ ಆಗಿರೋದು ಸತ್ಯ. ಉಗುರಿನ ಮೇಲೆ ಚಂದ್ರನ ಆಕೃತಿ ಇದ್ದರೆ ನಿಮಗೆ ಏನೆಲ್ಲಾ ಆಗಿದೆ ಇದರಿಂದ ನಮಗೆ ಲಾಭ ಸಿಗುತ್ತಾ ಅಥವ ತೊಂದ್ರೆ ಆಗ್ತಾ ಇದ್ದೀಯ ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಲೇ ಬೇಕು. ಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ಮುನ್ಸೂಚನೆಯನ್ನು ನೀಡುತ್ತದೆ ಹೌದು ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಗಳು ವಿವಿಧ ರೀತಿಯಲ್ಲಿ ನಮಗೆ ಮಾಹಿತಿಯನ್ನು ನೀಡುತ್ತವೆ ಇದನ್ನು ತಿಳಿದುಕೊಂಡು ನಾವು ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ

ಹಾಗಿದ್ದರೆ ಉಗುರಿನಲ್ಲಿರುವ ಅರ್ಧಚಂದ್ರಾಕೃತಿಯು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ನೋಡೋಣ. ನಿಮ್ಮ ಉಗುರಿನಲ್ಲಿ ದೊಡ್ಡದಾಗಿ ಚಂದ್ರಾಕಾರದ ಮಚ್ಚೆ ಇದ್ದರೆ ಆರೋಗ್ಯ ತುಂಬಾ ಚನ್ನಾಗಿದೆಯಂದರ್ಥ ಚಂದ್ರಾಕಾರ ಚಿಕ್ಕದಾಗಿದ್ದರೆ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ ಇವರಿಗೆ ಪಚನಕ್ರಿಯೆ ನಿಧಾನವಾಗಿರುತ್ತದೆ. ಚಂದ್ರಾಕಾರದ ಮಚ್ಚೆ ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿಗಳು ದುರ್ಭಲವಾಗಿದ್ದು ದಪ್ಪ ಆಗುವುದು ಮತ್ತು ಕೂದಲು ಉದುರುವುದು ಹೆಚ್ಚಾಗುತ್ತದೆ ಇರುವ ಹತ್ತು ಬೆರಳುಗಳಲ್ಲಿ ಕನಿಷ್ಠ 8 ಉಗುರಿಗೆ ಚಂದ್ರನ ಗುರುತು ಇರಬೇಕು ಇಲ್ಲವಾದರೆ ವಿಟಮಿನ್ ಎ ಮತ್ತು ಅಗತ್ಯ ಪೌಷ್ಟಿಕಾಂಶಗಳ ಕೊರತೆ ಇದೆ ಎಂದರ್ಥ. ಬಿಳಿಮಚ್ಚೆ ಒಂದುಬಾರಿ ಕಾಣಿಸಿದರೆ ಮತ್ತೊಂದು ಬಾರಿ ಮಾಯವಾಗುತ್ತದೆ ಇಂತಹ ಸಮಸ್ಯೆ ಹೊಂದಿರುವವರು ದೇಹಕ್ಕೆ ಬೇಕಾದಷ್ಟು ಆಹಾರ ಸೇವಿಸುತ್ತಿಲ್ಲವೆಂದು ಅರ್ಥ.

ಉಗುರು ಅರಿಷಿಣ ಬಣ್ಣಕ್ಕೆ ತಿರುಗಿದರೆ ಯಕೃತ್ ಸಮಸ್ಯೆ ಇದೆ ಎನ್ನಬಹುದು ಇದು ಕಾಮಾಲೆ ರೋಗದ ಲಕ್ಷಣವೂ ಆಗಿರಬಹುದು ಉಗುರು ಬಿಳುಚಿಕೊಂಡಿದ್ದರೆ ರಕ್ತ ಕಡಿಮೆ ಇದೆ ಎಂದರ್ಥ ಇವರ ಹೃದಯ ಬಡಿತವು ಕಡಿಮೆ ಇರುತ್ತದೆ ಹಿಮೋಗ್ಲೋಬಿನ್ ಸಹ ಹೆಚ್ಚಾಗುವಂತೆ ನೋಡಿಕೊಳ್ಳುವುದು ಒಳ್ಳೆಯದು. ಕಪ್ಪು ಕಲೆ ಇದ್ದರೆ ಅವರಿಗೆ ಚರ್ಮದ ಕ್ಯಾನ್ಸರ್ ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಗುರುಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ ಯಾವುದೇ ರೀತಿಯ ಸಂದೇಶ ಕಂಡುಬಂದರೂ ಕೂಡ ವೈದ್ಯರ ಬಳಿ ತೋರಿಸಿ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು ಉತ್ತಮ ಆರೋಗ್ಯ ನಿಮ್ಮದಾಗಲಿ ಮತ್ತು ನಿಮ್ಮವರೆಲ್ಲರಿಗೂ ಕೂಡ ಈ ಮಾಹಿತಿಯನ್ನು ಹಂಚಿಕೊಳ್ಳಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಒಂದು ಆರೋಗ್ಯದ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.